Breaking News

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ZP CEO ಹರ್ಷಲ್ ಭೋಯರ್ ರನ್ನು ಸನ್ಮಾನಿಸಲಾಯಿತು

ಬೆಳಗಾವಿ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ತೇಜನ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೋಯರ್ ಅವರನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ  ವತಿಯಿಂದ ಸನ್ಮಾನಿಸಲಾಯಿತು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾರ್ಡ್ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಿಇಒ ಹರ್ಷಲ್ ಭೋಯರ್ ಅವರನ್ನು ಭೇಟಿ ಮಾಡಿ ಬೆಳಗಾವಿ ಜಿಲ್ಲೆಯ ದಲಿತ ಸಮುದಾಯದ ಬಡಾವಣೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದರು. …

Read More »

ಕಾರ್ಪೊರೇಟರ್ ಶಂಕರ ಪಾಟೀಲ ಅವರ ನೇತೃತ್ವದಲ್ಲಿ ಗಣಾಚಾರಿ ಗಲ್ಲಿಯ ನಾಗರಿಕರ ವತಿಯಿಂದ ಇಂದು ಗಂಗಾಪೂಜೆ ಕಾರ್ಯಕ್ರಮ ನಡೆಯಿತು.

ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಕಸಕೊಪ್ಪ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಶಂಕರ ಪಾಟೀಲ ಅವರ ನೇತೃತ್ವದಲ್ಲಿ ಗಣಾಚಾರಿ ಗಲ್ಲಿಯ ನಾಗರಿಕರ ವತಿಯಿಂದ ಇಂದು ಗಂಗಾಪೂಜೆ ಕಾರ್ಯಕ್ರಮ ನಡೆಯಿತು. ಹೌದು, ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ನಗರದ ಕುಡಿಯುವ ನೀರಿನ ಮೂಲವಾದ ಜಲಾಶಯ ಇದೀಗ ಭರ್ತಿಯಾಗಿದೆ. ಹಾಗಾಗಿ ಸಂಪ್ರದಾಯದಂತೆ ಕಾರ್ಪೋರೇಟರ್ ಶಂಕರ ಪಾಟೀಲರವರ ನೇತೃತ್ವದಲ್ಲಿ ಗಣಾಚಾರಿ ಗಲ್ಲಿಯ ನಾಗರಿಕರ ವತಿಯಿಂದ ಇಂದು ಜಲಾಶಯ ಗಂಗಾಪೂಜೆ ಕಾರ್ಯಕ್ರಮ …

Read More »

ನಾಲ್ಕು ಎಕರೆಯಲ್ಲಿ ಟೊಮೆಟೊ ಬೆಳೆದು 50 ಲಕ್ಷ ಗಳಿಸಿದ ರೈತ

ಕೆಂಪುಚಿನ್ನ ಟೊಮೆಟೊಗೆ ನಿಜಕ್ಕೂ ಚಿನ್ನದ ಬೆಲೆ ಬಂದು ಬಿಟ್ಟಿದೆ. ನಾಲ್ಕು ಎಕರೆಯಲ್ಲಿ ಟೊಮೆಟೊ ಬೆಳೆದ ರೈತನೋರ್ವ ಕಳೆದ ಒಂದೂವರೆ ತಿಂಗಳಿನಲ್ಲಿ 50 ಲಕ್ಷಕ್ಕೂ ಅಧಿಕ ಆದಾಯ ಗಳಿಸಿದ್ದಾನೆ. ದ್ರಾಕ್ಷಿ ಬೆಳೆದು, ಕಬ್ಬು ಬೆಳೆದು ನಷ್ಟದಲ್ಲಿದ್ದ ಅನ್ನದಾತನಿಗೆ ಟೊಮೆಟೊ ಕೈ ಹಿಡಿದಿದ್ದು, ಅರ್ಧಕೋಟಿ ಒಡೆಯನಾಗಿದ್ದಾನೆ. ಟೊಮೆಟೊ ಬೆಳೆದು ಸಿರಿವಂತನಾದ ರೈತನ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ… ಕೆಂಗುಲಾಬಿಯಂತೆ ಹೊಳೆಯುವ ಟೊಮೆಟೊ ಹಣ್ಣಿಗೆ ಇದೀಗ ಚಿನ್ನದ ಬೆಲೆ ಬಂದಿದೆ. ಹೀಗಾಗಿಯೇ ಟೊಮೆಟೊ …

Read More »

ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರಿಂದ ಬಂದ್ ಕರೆ

ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ವಾಣಿಜ್ಯ ನಗರದಲ್ಲಿ ಆಟೋ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ನಡೆಸಿದರು. ನೂರಾರು ಆಟೋ ಚಾಲಕರು, ಮಾಲೀಕರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಶಕ್ತಿ ಯೋಜನೆಯನ್ನ ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದರು. ಸಂತೋಷ ಲಾಡ್ ಆಗಮಿಸುತ್ತಲೆ ಬಾಯಿ ಬಾಯಿ …

Read More »

ಮುಂಬರುವ ಲೋಕಸಭೆ ಚುನಾವಣೆ ಸೋಲಿನ ಬಳಿಕ ಮೋದಿ ವಿದೇಶದಲ್ಲಿ ನೆಲೆಸುತ್ತಾರೆ: ಲಾಲೂ ಪ್ರಸಾದ್

ಪಾಟ್ನಾ(ಬಿಹಾರ) : “ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಲ್ಲಿದ್ದಾರೆ. ಸೋತ ಬಳಿಕ ಅವರು ವಿದೇಶದಲ್ಲಿ ಹೋಗಿ ನೆಲೆಯೂರಲು ಯೋಚನೆ ಮಾಡುತ್ತಿದ್ದಾರೆ” ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್​​ ಭಾನುವಾರ ಟೀಕಿಸಿದರು. ಕೆಲವು ದಿನಗಳ ಹಿಂದೆ ಮೋದಿ ಮಾಡಿದ್ದ ‘ಕ್ವಿಟ್​ ಇಂಡಿಯಾ’ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಭಾರತ ತೊರೆಯಲು ಯೋಜಿಸುತ್ತಿರುವುದು ಪ್ರಧಾನಿ ಮೋದಿ. ಇದೇ ಕಾರಣಕ್ಕಾಗಿಯೇ ಅವರು …

Read More »

ಕೋಲಾರದಿಂದ ಜೈಪುರಕ್ಕೆ 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಟ್ರಕ್ ನಾಪತ್ತೆ

ಕೋಲಾರ : ನಗರದ ಎಪಿಎಂಸಿ ಮಾರುಟ್ಟೆಯಿಂದ ರಾಜಸ್ಥಾನಕ್ಕೆ ಕಳುಹಿಸಿದ್ದ ಟೊಮೆಟೊ ಟ್ರಕ್ ಕಾಣೆಯಾಗಿದೆ. ಟ್ರಕ್‌ನಲ್ಲಿ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಇತ್ತು ಎಂದು ತಿಳಿದುಬಂದಿದೆ. ಘಟನೆಯ ವಿವರ: ಕೋಲಾರ ಎಪಿಎಂಸಿ ಮಾರುಕಟ್ಟೆಯ ಎಜಿ ಟ್ರೇಡರ್ಸ್​ನ ಸಕ್ಲೇನ್​ ಹಾಗೂ ಎಸ್​.ವಿ.ಟಿ ಟ್ರೇಡರ್ಸ್​ನ ಮುನಿರೆಡ್ಡಿ ಎಂಬವರು ಸುಮಾರು 750 ಕ್ರೇಟ್​ ಟೊಮೆಟೊವನ್ನು ಜುಲೈ 27ರಂದು ಜೈಪುರ್​ಗೆ ಮೆಹತ್​ ಟ್ರಾನ್ಸ್​ಪೋರ್ಟ್​ಗೆ ಸೇರಿದ ಟ್ರಕ್‌ನಲ್ಲಿ ಕಳುಹಿಸಿದ್ದರು. ಭಾನುವಾರ ರಾತ್ರಿ ಜೈಪುರಕ್ಕೆ ಟ್ರಕ್ ತಲುಪಬೇಕಿತ್ತು. ಆದರೆ ಭಾನುವಾರ …

Read More »

ಹಾಡಹಗಲೇ ಮನೆಗೆ ನುಗ್ಗಿ 33 ಲಕ್ಷ ರೂ ಮೌಲ್ಯದ ಚಿನ್ನಾಭರಣ ಎಗರಿಸಿರುವ ಘಟನೆ ನಡೆದಿದೆ.

ದಾವಣಗೆರೆ: ಹಾಡಹಗಲೇ ಉಪನ್ಯಾಸಕರೊಬ್ಬರ ಮನೆಗೆ ಖದೀಮರು ಕನ್ನ ಹಾಕಿ, ಚಿನ್ನಾಭರಣ ಮತ್ತು ನಗದು ಸೇರಿ 33.66 ಲಕ್ಷ ರೂ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಅಣ್ಣಮ್ಮ ಪ್ರೌಢಶಾಲೆಯ ಬಳಿಯ ಮನೆಯೊಂದರಲ್ಲಿ ನಡೆದಿದೆ.‌ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿದ್ದೇಶ್ವರಪ್ಪ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿದೆ.   ಮನೆ ಮಾಲೀಕರಾದ ಸಿದ್ದೇಶ್ವರಪ್ಪ ಅವರ ಪತ್ನಿಯು ಪ್ರೌಢ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ …

Read More »

ಭಾರಿ ಮಳೆಯಿಂದ 283 ಮನೆಗಳು ಭಾಗಶಃ ಹಾನಿ

ಕಲಬುರಗಿ: ಕಳೆದ ಜೂ.1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 283 ಮನೆಗಳು ಭಾಗಶಃ ಹಾನಿಗೊಂಡಿದ್ದು, ಹಾನಿಯಾದ ಮನೆಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಇದಲ್ಲದೇ 20 ಕಿಮೀ ರಾಜ್ಯ ಹೆದ್ದಾರಿ, 27.50 ಕಿಮೀ ಜಿಲ್ಲಾ ಹೆದ್ದಾರಿ, 100 ಕಿಮೀ ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿಮೀ ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ …

Read More »

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು, ಎಂಟು ಮಂದಿ ಗಂಭೀರವಾಗಿ ಗಾಯ

ಕಲಬುರಗಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬದ ದಿನದಂದೇ, ಹಳೆ ದ್ವೇಷಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ಉಂಟಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಒಂದೇ ಸಮುದಾಯಕ್ಕೆ ಸೇರಿದ ಹೊನಗುಂಟಾ ಮತ್ತು ಗೋಟಾಳ್ ಕುಟುಂಬಗಳು ಹಳೆ ವೈಷಮ್ಯದ ಹಿನ್ನೆಲೆ ಪರಸ್ಪರ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿ ಈ ಎರಡು …

Read More »

15 ವರ್ಷಗಳಿಂದ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮಹಿಳೆ ಪೊಲೀಸರಿಗೆ ಶರಣು

ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮಹಿಳೆಯೊಬ್ಬಳು ಪೊಲೀಸರಿಗೆ ಶರಣಾಗಿದ್ದಾಳೆ. ಈಕೆ ಬಂಧನಕ್ಕಾಗಿ ಛತ್ತೀಸ್‌ಗಢ ಸರ್ಕಾರ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ವೆಕೊ ಹಿಡಮೆನ್ ಎಂಬ ಮಹಿಳಾ ನಕ್ಸಲ್ ಶನಿವಾರ​ ಪೊಲೀಸರಿಗೆ ಶರಣಾಗಿದ್ದು, ಈಕೆ ನಕ್ಸಲ್​ ಪೀಡಿತ ದಾಂತೇವಾಡ ಮತ್ತು ಸುಕ್ಮಾ ಗಡಿ ಪ್ರದೇಶಗಳಲ್ಲಿ 15 ವರ್ಷಗಳ ಕಾಲ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯಳಾಗಿದ್ದಳು. ಛತ್ತೀಸ್‌ಗಢ ಸರ್ಕಾರದ ಪುನರ್ವಸತಿ ನೀತಿಗೆ ಅನುಗುಣವಾಗಿ ಪೊಲೀಸರು ನಡೆಸುತ್ತಿರುವ …

Read More »