Breaking News

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಯುವಕರು ಸಾವು

ಮಂಡ್ಯ: ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಫ್ಲೈ ಓವರ್ ಬಳಿ ಇಂದು ನಡೆದಿದೆ. ಮಣಿ (25) ಹಾಗೂ ಜನಾರ್ಧನ ಪೂಜಾರಿ (21) ಮೃತರೆಂದು ಗುರುತಿಸಲಾಗಿದೆ. ಮುಂಜಾನೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮಣಿ ಕೋಲಾರ ಜಿಲ್ಲೆಯವರಾಗಿದ್ದು, ಮತ್ತೊಬ್ಬ ಯುವಕ ಜನಾರ್ಧನ್ ಪೂಜಾರಿ ಕೊಪ್ಪಳ ಜಿಲ್ಲೆಯ ಲಿಂಗದಮಂಡಿ ಗ್ರಾಮದ ನಿವಾಸಿ. ಬೆಂಗಳೂರಿನ ಖಾಸಗಿ …

Read More »

ಅಕ್ಕಿ, ಮನೆ, ಸಿಲಿಂಡರ್ ಕೊಡಿ ಸಾಕು ಎಂದ ನಾರಿಯರು..

ಗಂಗಾವತಿ (ಕೊಪ್ಪಳ) : `ಬಸ್ಸಿನಲ್ಲಿ ಹೆಣ್ಮಕ್ಕಳು ಫ್ರಿಯಾಗಿ ಓಡಾಡಾಕ ಶುರುವಾದಾಗಿನಿಂದ ಒಂದೂ ಬಸ್ ಖಾಲಿ ಇರವಲ್ವು. ಮನಿ ಬಿಟ್ಟು ಬಂದು ಗುಡಿಗೆ ಹೋಗಣಾಂದ್ರ ಹೈರಾಣ ಆಗಿವಿ. ಈ ಫ್ರೀ ಬಸ್ ಬಿಟ್ಟು ಸರ್ಕಾರದೋರು ಜನರಿಗೆ ಬೇಕಾದ ಅಕ್ಕಿ, ಸಿಲಿಂಡರ್, ಮನೆ ಕೊಡ್ಲಿ’.. ಹೀಗೆಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣಕ್ಕೆ ಅವಕಾಶ ಇರುವ ಶಕ್ತಿ ಯೋಜನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಆಗಿದ್ದರಿಂದ ಗಂಗಾವತಿ ತಾಲ್ಲೂಕಿನ ಹಲವು …

Read More »

ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’

ಗದಗ : ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ ನೀಡಲಾಗಿದೆ. ಈ ವೇಳೆ ಜಮೀನುಗಳಲ್ಲಿ ಮಿನಿ ವಿಮಾನ ಆಕಾರ ಹೋಲುವ ಡ್ರೋನ್​ ಹಾರಾಟ ನಡೆಸುತ್ತಿರುವುದನ್ನು ಕಂಡ ರೈತರು ಆತಂಕಗೊಂಡ ಘಟನೆ ನಡೆಯಿತು. ಜಿಲ್ಲೆಯ ಮುಂಡರಗಿ ತಾಲೂಕಿನ ಹಲವು ರೈತರು ಡ್ರೋನ್​ ಹಾರಾಟವನ್ನು ಕಂಡಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ವಿಮಾನ ಹಾರಾಟ ನಡೆಸಿ ಆತಂಕ ಸೃಷ್ಟಿಸಿದ್ದವು. ಇದರ ಬೆನ್ನಲ್ಲೇ ಈಗ ಚಿಕ್ಕ ವಿಮಾನ …

Read More »

ಲಿಂಗಾಯತ ಒಳಪಂಗಡಗಳು ಒಟ್ಟಾಗಿ ಹೋದ್ರೆ ಮಾತ್ರ ಭವಿಷ್ಯ

ಬೆಳಗಾವಿ: ಲಿಂಗಾಯತ ಒಳಪಂಗಡಗಳನ್ನು ಇಟ್ಟುಕೊಂಡು ನಾವು ಮುಂದುವರಿದರೆ ಮುಂದಿನ ದಿನಗಳಲ್ಲಿ ನಮಗೆಲ್ಲಾ ಒಳ್ಳೆಯ ದಿನಗಳಿವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ನಗರದ ವೀರಶೈವ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ಆವರಣದಲ್ಲಿ ಶನಿವಾರ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಆಯೋಜಿಸಿದ್ದ ವಿಧಾನಸಭೆಗೆ ಆಯ್ಕೆಯಾದ ಶಾಸಕ, ಸಚಿವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ವೇದಿಕೆ‌ ಮೇಲೆ ಇದ್ದಾಗ ಮಾತ್ರ ನಾವೆಲ್ಲಾ ಒಂದು ಎನ್ನುವ ಚಿಂತನೆ …

Read More »

ಮೂಢನಂಬಿಕೆಗೆ ಸಿಎಂ ಸೆಡ್ಡು.. ವಿಧಾನಸೌಧದಲ್ಲಿ ಐದು ವರ್ಷಗಳಿಂದ ಮುಚ್ಚಿದ್ದ ದಕ್ಷಿಣ ದ್ವಾರವನ್ನು ತೆರೆಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತು ದೋಷವನ್ನು ಧಿಕ್ಕರಿಸಿ ವಿಧಾನಸೌಧದ ಸಿಎಂ ಕಚೇರಿ ಪ್ರವೇಶಿಸಿದ ಪ್ರಸಂಗ ಶನಿವಾರ ನಡೆಯಿತು. ವಾಸ್ತುದೋಷದ ಕಾರಣದಿಂದ ಸುಮಾರು ಎರಡು ದಶಕಗಳಿಂದ ಮುಚ್ಚಿದ್ದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ದಕ್ಷಿಣದ ದ್ವಾರವನ್ನು ಸಿಎಂ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ತೆಗೆಸುವ ಮೂಲಕ ಮತ್ತೊಮ್ಮೆ ಮೂಢನಂಬಿಕೆಯನ್ನು ವಿರೋಧಿಸಿದ್ದಾರೆ. ಅನ್ನಭಾಗ್ಯ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ದಕ್ಷಿಣ ದ್ವಾರ ಬಂದ್ ಆಗಿರುವುದನ್ನು ಗಮನಿಸಿದರು. ವಾಸ್ತು ಕಾರಣದಿಂದ …

Read More »

ಮಂದಿರದ ದುರಸ್ಥಿ ಕಾರ್ಯದಲ್ಲಿ ತೊಡಗಿಕೊಂಡಿರುವ ಶ್ರೀರಾಮ ಭಕ್ತ ಸಮೂಹ

ಖಾನಾಪೂರ ತಾಲೂಕಿನ ನಂದಗಡದ ಮುಖ್ಯ ರಸ್ತೆಯ ಮಧ್ಯದಲ್ಲಿ ಇರುವ ಶ್ರೀ ರಾಮ ಮಂದಿರದಲ್ಲಿ ಶ್ರಮದಾನ ಮಾಡುವ ಮುಖಾಂತರ ಮಂದಿರದ ದುರಸ್ಥಿ ಕಾರ್ಯ ನಿರ್ವಹಿಸಿ ಮಂದಿರದ ಅಕ್ಕ ಪಕ್ಕದ ಪರಿಸರ, ಅದರಂತೆಯೇ ಮೇಲ್ಚಾವಣಿಗೆ ಪತ್ರೆ ಹಾಕಿ ದುರಸ್ಥಿ ಕೆಲಸಕ್ಕೆ ಮೊದಲಿಗೆ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಲಾಯಿತು.   ಈ ಕುರಿತು ಮೊದಲಿಗೆ ಸಾರ್ವಜನಿಕವಾಗಿ ಚರ್ಚೆ ನಡೆಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಇದಕ್ಕಾಗಿ ತಗಲುವ ಸಾಮಾಗ್ರಿಗಳ ಬಗ್ಗೆ ವ್ಯವಸ್ಥೆ ಮಾಡಿಕೊಂಡು …

Read More »

ಬಿಜೆಪಿ ತಳಪಾಯವೇ ಕುಸಿದು ಹೋಗುತ್ತಿದೆ ಅದನ್ನು ಗಟ್ಟಿ ಮಾಡೋ ಕೆಲಸ ಆಗ್ತಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ ಹೇಳಿದರು.

ಬಿಜೆಪಿ ತಳಪಾಯವೇ ಕುಸಿದು ಹೋಗುತ್ತಿದೆ  ಅದನ್ನು ಗಟ್ಟಿ ಮಾಡೋ ಕೆಲಸ ಆಗ್ತಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ ಹೇಳಿದರು. ನಗರದಲ್ಲಿ ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದು ಹೋಗುತ್ತಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರತ್ತೆ . ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸತ್ತೆ ಎಂದರು. ನಾನು ಹಿಂದೆ ಹೇಳಿರೋದು ಎಲ್ಲವೂ ನಿಜ ಆಗ್ತಿದೆ ಎಂದ ಕಟೀಲು. ಬಿಜೆಪಿ ಸೋಲಿಗೆ ಕಾರಣ ಯಾರೂ …

Read More »

ವಾರಾಂತ್ಯಕ್ಕೆಬಸ್ಸುಗಳು ಖಾಲಿ ಖಾಲಿ

ಧಾರವಾಡ: ಶಕ್ತಿ ಯೋಜನೆ ಆರಂಭವಾದಾಗಿನಿಂದ ಮಹಿಳೆಯರು ಸಾರಿಗೆ ಬಸ್ಸುಗಳು ಮೂಲಕ ದೂರದ ಊರುಗಳಿಗೆ ಹಾಗೂ ದೇವಸ್ಥಾನಗಳಿಗೆ ಹೋಗುವ ಮೂಲಕ ಆ ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಬಸ್ಸುಗಳು ಫುಲ್ ರಶ್ ಆಗುತ್ತಿವೆ. ಆದರೆ, ವಾರಾಂತ್ಯದಲ್ಲಿ ಮಹಿಳೆಯರಿಲ್ಲದೇ ಧಾರವಾಡದ ಹೊಸ ಬಸ್ ನಿಲ್ದಾಣ ಖಾಲಿ ಖಾಲಿ ಕಾಣಿಸುತ್ತಿತ್ತು. ಈ ನಿಲ್ದಾಣದಿಂದ ದೂರದ ದಾಂಡೇಲಿ, ಸವದತ್ತಿ, ವಿಜಯಪುರ ಸೇರಿದಂತೆ ಇತ್ಯಾದಿ ಊರುಗಳಿಗೆ ಹೋಗುವ ಬಸ್ಸುಗಳು ಮಹಿಳಾ ಪ್ರಯಾಣಿಕರ ಕೊರತೆ …

Read More »

ಸಾರ್ವಜನಿಕ ಭೇಟಿ ಮಾಡಿ ಸಮಸ್ಯೆ ಆಲಿಸಿ ಪರಿಹಾರ ನೀಡಿದ ಖಾನಾಪೂರ ನಗರ ಸೇವಕ

ಖಾನಾಪೂರದ ವಾರ್ಡ್ ನಂಬರ್ 2 ರ ನಗರ ಸೇವಕ ತೊಹೀದ್ ಚಾಂದಖಾನವರ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆ ಆಲಿಸಿ ಪರಿಹಾರ ಮಾಡುವ ಭರವಸೆ  ಖಾನಾಪೂರ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 2ರ ನಗರ ಸೇವಕ ತೊಹೀದ್ ಚಾಂದಖಾನವರ ಅವರು ಮಿಚ್ಕೀನ್ ಕಂಪೌಂಡ್ ಪರಿಸರದಲ್ಲಿನ ಸಾರ್ವಜನಿಕರಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಅದಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ಮಿಚ್ಕೀನ್ ಕಾಂಪೌಂಡ್ ನಲ್ಲಿನ ರಸ್ತೆಗಳಿಗೆ ಫೇವರ್ಸ ಹಾಕುವುದು …

Read More »

ಸಣ್ಣ ಕಾರಣಕ್ಕೆ ಮಹಿಳಾ ಪ್ರಯಾಣಿಕರು ಕಂಡಕ್ಟರ್ನ ಕತ್ತು ಹಿಡಿದು ಎಳೆದಾಡಿದ

ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸ್ತ್ರೀ ಶಕ್ತಿ ಯೋಜನೆ ಸೌಂದತ್ತಿಯಲ್ಲಿ ವಿಪರಿತ ಪರಿಣಾಮವನ್ನು ಕಂಡಿದೆ. ಸಣ್ಣ ಕಾರಣಕ್ಕೆ ಮಹಿಳಾ ಪ್ರಯಾಣಿಕರು ಕಂಡಕ್ಟರ್ನ ಕತ್ತು ಹಿಡಿದು ಎಳೆದಾಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಹೌದು, ರಾಜ್ಯ ಸರ್ಕಾರದ ಸ್ತ್ರೀ ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಬಸ್ ಪ್ರಯಾಣ ಹೆಚ್ಚಿದ್ದು, ಬೆಳಗಾವಿ ಜಿಲ್ಲೆಯ ಸೌಂದತ್ತಿ ಯಲ್ಲಮ್ಮ ಬೆಟ್ಟದಲ್ಲಿ ಜೂನ್ 23 ರಂದು ಮಧ್ಯಾಹ್ನ ಸಣ್ಣ ವಿಚಾರಕ್ಕೆ ಮಹಿಳಾ ಪ್ರಯಾಣಿಕರು-ಕಂಡಕ್ಟರ್ ನಡುವೆ …

Read More »