Breaking News

ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್​ ನೇಮಕ

ನವದೆಹಲಿ: ಭಾರತ ಹಿರಿಯ ಪುರುಷರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ವೇಗಿ ಅಜಿತ್​ ಅಗರ್ಕರ್​ ನೇಮಕವಾಗಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಶಿಫಾರಸಿನ ಮೇರೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಂಗಳವಾರ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಪುರುಷರ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿದಾರರನ್ನು ಸಂದರ್ಶಿಸಿತು. ಮೂವರು ಸದಸ್ಯರ ಸಿಎಸಿ …

Read More »

ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ: ಶಾಲಾ, ಕಾಲೇಜುಗಳಿಗೆ ಇಂದು ರಜೆ

ಕಾರವಾರ: ರಾಜ್ಯದಲ್ಲಿ ಕೆಲವೆಡೆ ಮುಂಗಾರು ಕ್ಷೀಣವಾಗಿದ್ದರೆ, ಕರಾವಳಿ ಜಿಲ್ಲೆಗಳು ಹಾಗೂ ಘಟ್ಟದ ಮೇಲ್ಭಾಗದ ಕೆಲವು ತಾಲೂಕುಗಳಲ್ಲಿ ವರ್ಷಧಾರೆ ಬಿರುಸು ಪಡೆದಿದೆ. ಮಂಗಳವಾರ ಸುರಿದ ಭಾರಿ ಮಳೆಗೆ ಭಟ್ಕಳ, ಕಾರವಾರದ ಬಳಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿದೆ. ಕಾರವಾರದಲ್ಲಿ ಮಂಗಳವಾರ ಸಂಜೆ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಜಡಿ ಮಳೆಗೆ ನಗರದ ಗ್ರೀನ್ ಸ್ಟ್ರೀಟ್ …

Read More »

ಅಕ್ಕತಂಗೇರಹಾಳದಲ್ಲಿ ಮಂಗಳವಾರ ಜೋಡಿ ಕೊಲೆ

ಬೆಳಗಾವಿ :ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕತಂಗೇರಹಾಳದಲ್ಲಿ ಮಂಗಳವಾರ ಜೋಡಿ ಕೊಲೆ ನಡೆದಿದೆ. ಅಕ್ಕತಂಗೇರಹಾಳ ಗ್ರಾಮದ ಮಲ್ಲಿಕಾರ್ಜುನ ಜಗದಾರ(40) ಹಾಗೂ ರೇಣುಕಾ ಮಾಳಗಿ (42) ಹತ್ಯೆಗೀಡಾದವರು. ಕೊಲೆಗೈದ ವ್ಯಕ್ತಿ ಯಲ್ಲಪ್ಪ ಮಾಳಗಿ(45) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಶಂಕಿಸಿ ಪತಿ ಯಲ್ಲಪ್ಪ ಮನೆಯಲ್ಲಿದ್ದ ರೇಣುಕಾಳನ್ನು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮಲ್ಲಿಕಾರ್ಜುನ ಮನೆಗೆ ಹೋಗಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ …

Read More »

”ಬಿಜೆಪಿ ವಿರೋಧ ಪಕ್ಷವಾಗಿ ಬಾಳೆ ಹಣ್ಣು ತಿನ್ನುತ್ತಾ ಕೂತಿಲ್ಲ” ಎಂದವಿಜಯೇಂದ್ರ

ಬೆಂಗಳೂರು: ”ಬಿಜೆಪಿ ವಿರೋಧ ಪಕ್ಷವಾಗಿ ಬಾಳೆ ಹಣ್ಣು ತಿನ್ನುತ್ತಾ ಕೂತಿಲ್ಲ” ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ”ಕುಂತಲ್ಲಿ, ನಿಂತಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಮಾಡುವುದಾಗಿ ಗೊಡ್ಡು ಬೆದರಿಕೆ ಹಾಕ್ತಿದ್ದಾರೆ. ಅವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಭರವಸೆಗಳನ್ನು ನೀವು ಈಡೇರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿನ ಹಗರಣಗಳನ್ನು ತನಿಖೆ ಮಾಡುತ್ತೇವೆ ಎಂದು ಹೇಳಿ ಗ್ಯಾರಂಟಿ …

Read More »

”ರಾಜ್ಯದಲ್ಲಿ 10,034 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 2 ಸಾವಿರ ಕೋಟಿಗೆ ಅನುದಾನ! ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ”ಪೊಲೀಸ್ ವಸತಿ ಗೃಹ- 2025 ಯೋಜನೆಯಡಿ ರಾಜ್ಯದಲ್ಲಿ 10,034 ವಸತಿ ಗೃಹಗಳನ್ನು ನಿರ್ಮಿಸಲು 2 ಸಾವಿರ ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ” ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆ ಆರಂಭವಾದ ಪ್ರಶ್ನೋತ್ತರದ ಕಲಾಪದಲ್ಲಿ ಜೆಡಿಎಸ್ ಹಿರಿಯ ಸದಸ್ಯ ಹೆಚ್.ಡಿ. ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ”9524 ಪಿಸಿ ವಸತಿ ಗೃಹಗಳು, 510 ಪಿಎಸ್‍ಐ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. …

Read More »

ತಂತ್ರಜ್ಞಾನದ ಮೊರೆಹೋದ ವ್ಯಕ್ತಿ, ಸಿಸಿಟಿವಿ ಕಣ್ಗಾವಲಿನಲ್ಲಿ ವ್ಯಾಪಾರ! TOMATO

ಹಾವೇರಿ: ಒಂದು ಸಮಯದಲ್ಲಿ ಟೊಮೆಟೋಗೆ ಬೆಲೆ ಇಲ್ಲದೆ, ರೈತರು ಕಂಗಾಲಾಗಿದ್ದರು. ಎಷ್ಟೋ ಬಾರಿ ದರ ಪಾತಾಳಕ್ಕೆ ಕುಸಿದ ಪರಿಣಾಮ ಬೇಸತ್ತು ಅನ್ನದಾತರು ಮತ್ತು ವ್ಯಾಪಾರಿಗಳು ರಸ್ತೆಗೆ ಸುರಿಯುತ್ತಿದ್ದರು. ಇನ್ನೂ ಕೆಲವೆಡೆ ಟೊಮೆಟೊವನ್ನು ರೈತರು ತಿಪ್ಪೆಗೆ ಸುರಿದಿದ್ದರು. ಮತ್ತೆ ಕೆಲವರು ಅದನ್ನು ಕಿತ್ತು ಮಾರುಕಟ್ಟೆಗೆ ಸಾಗಿಸುವುದು ಮಾರಾಟದ ದರ ಕೈಸೇರದೆ ನಷ್ಟವೇ ಹೆಚ್ಚಾಗಿರುತ್ತೆ ಎಂದು ಹೊಲದಲ್ಲೇ ಬಿಟ್ಟರೆ ಗೊಬ್ಬರವಾಗುತ್ತೆ ಅಂತಾ ತಮ್ಮ ಕೈಯಾರೆ ನೆಲಸಮ ಮಾಡಿದ್ದು ಉಂಟು.. ಹೌದು, ನಾವ್​ ಇಷ್ಟೆಲ್ಲ ಹೇಳಿದ್ದು …

Read More »

ಹಾವೇರಿ: ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಹಸಿರಿನ ಮೆರುಗು

ಹಾವೇರಿ: ಏಲಕ್ಕಿನಗರಿ ಹಾವೇರಿಗೆ ಕಳಸಪ್ರಾಯವಾಗಿರುವದು ಪುರಸಿದ್ದೇಶ್ವರ ದೇವಸ್ಥಾನ. ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಚಿತ್ರಣವೇ ಬದಲಾಗಿದೆ. 25 ವರ್ಷದ ಹಿಂದೆ ಜೀರ್ಣೋದ್ದಾರಗೊಂಡ ದೇವಸ್ಥಾನದ ಆವರಣದಲ್ಲಿ ಇದೀಗ ಹಸಿರು ಕಂಗೊಳಿಸುತ್ತಿದೆ. ಬಣ್ಣ ಬಣ್ಣದ ಪುಷ್ಪಗಳು ಉದ್ಯಾನದ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ರಾಜ್ಯದ ವಿವಿಧ ರಾಜಮನೆತನಗಳ ಆಡಳಿತ ಕಂಡ ಪ್ರಾಂತ್ಯ ಹಾವೇರಿ. ರಾಜ್ಯದ ಪ್ರಥಮ ರಾಜಮನೆತನ ಕದಂಬರಿಂದ ಹಿಡಿದು ಇತ್ತೀಚಿನ ಮೈಸೂರು ಒಡೆಯರ ಕಾಲದವರೆಗೆ ವಿವಿಧ ರಾಜಮನೆತನಗಳು ಇಲ್ಲಿ ಆಳ್ವಿಕೆ …

Read More »

ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೆಟೋ, ಮೆಣಸಿನಕಾಯಿ ದರ

ಬೆಳಗಾವಿ: ರಾಜ್ಯದೆಲ್ಲೆಡೆ ಟೊಮೆಟೊ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಟೊಮೆಟೊ ಮತ್ತು ಮೆಣಸಿನಕಾಯಿ ಬೆಲೆ ನೂರರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಒಂದೆಡೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಮಳೆರಾಯನ ಆಗಮನಕ್ಕಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ‌. ಮತ್ತೊಂದೆಡೆ ಟೊಮೆಟೋ, ಮೆಣಸಿನಕಾಯಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಜುಲೈ ತಿಂಗಳ ಮೊದಲ ವಾರ ಮುಗಿಯುತ್ತ ಬಂದರೂ ಜಿಲ್ಲೆಯಲ್ಲಿ …

Read More »

ಗೋಹತ್ಯೆ, ಮತಾಂತರ ಕಾಯ್ದೆ ರದ್ದು ಮಾಡದಂತೆಮಠಾಧೀಶರ ಆಗ್ರಹ

ಕಲಬುರಗಿ : ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತದ ಸರ್ಕಾರ ಆ ಕಾನೂನು ತೆಗೆದುಹಾಕುತ್ತಿದೆ. ಹೀಗಾಗಿ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಡಗಂಚಿಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ವೀರಭದ್ರ ಶಿವಾಚಾರ್ಯರು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಮಾತೆ ದೇವರು. ದೇವರ ಹತ್ಯೆ ಮಾಡಿದವರು ಏನು ಆಗುತ್ತಾರೆ ಎಂದು …

Read More »

ಶೂಟಿಂಗ್​ ವೇಳೆ ಗಾಯಗೊಂಡ ಶಾರುಖ್​ ಖಾನ್​

ನಟ ಶಾರುಖ್​ ಖಾನ್​ ಅಮೆರಿಕದಲ್ಲಿ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಬಹಿರಂಗಪಡಿಸದ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿದ್ದಾಗ ಘಟನೆ ಸಂಭವಿಸಿದೆ. ಬಾಲಿವುಡ್​ ನಟ​ ಶಾರುಖ್​ ಖಾನ್ ಅಮೆರಿಕದಲ್ಲಿ​ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಲಾಸ್​ ಏಂಜಲೀಸ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಲಾಸ್​ ಏಂಜಲೀಸ್​​ನಲ್ಲಿ ನಡೆದ ಸಣ್ಣ ಅವಘಡದಲ್ಲಿ ಶಾರುಖ್​ ಮೂಗಿಗೆ ಗಾಯವಾಗಿದೆ. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಎಸ್​​ಆರ್​ಕೆ …

Read More »