Breaking News

ಬಾಯಿಗೆ ಹಲ್ಲಿ ನುಗ್ಗಿ ಮಗು ಸಾವು,

ಕೊರ್ಬಾ (ಛತ್ತೀಸ್​ಗಢ) : ಹಲ್ಲಿಯೊಂದು ಬಾಯಿಯೊಳಗೆ ನುಗ್ಗಿದ ಪರಿಣಾಮ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಛತ್ತೀಸ್​ಗಢದ ಕೊರ್ಬಾದಲ್ಲಿ ನಡೆದಿದೆ. ಆದರೆ, ಹಲ್ಲಿಗೆ ಮನುಷ್ಯನನ್ನು ಸಾಯಿಸುವಷ್ಟು ವಿಷ ಇರುವುದಿಲ್ಲ. ಇದಕ್ಕೆ ಬೇರೆಯದೇ ಕಾರಣ ಇರಬೇಕು ಎಂಬುದು ವೈದ್ಯರ ಅನುಮಾನ. ಹಲ್ಲಿ ಕೂಡ ಮಗುವಿನ ಬಾಯಿಯಲ್ಲೇ ಸಾವನ್ನಪ್ಪಿದ್ದು, ಅಚ್ಚರಿ ಉಂಟು ಮಾಡಿದೆ. ಕೊರ್ಬಾ ಜಿಲ್ಲೆಯ ಸುಮೇಧಾ ನಾಗಿನ್‌ಭಂಥ ಗ್ರಾಮದಲ್ಲಿ ಈ ಅಚ್ಚರಿ ಘಟಿಸಿದೆ. ಮಲಗಿದ್ದ ವೇಳೆ ಮಗುವಿನ ಬಾಯಿಯಲ್ಲಿ ಹಲ್ಲಿ ಇರುವುದನ್ನು ತಾಯಿ …

Read More »

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಜಿಲ್ಲೆಯ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅದರಲ್ಲೂ ಅಘನಾಶಿನಿ ನದಿ ನೆರೆಗೆ ಹಲವು ಗ್ರಾಮಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಅಘನಾಶಿನಿ, ಗಂಗಾವಳಿ, ಶರಾವತಿ, ವರದಾ ಹಾಗು ಕಾಳಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಘಟ್ಟದ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಗಂಗಾವಳಿ ಹಾಗೂ ಅಘನಾಶಿನಿ …

Read More »

ಚಿಕ್ಕೋಡಿಯಲ್ಲಿ ಹಲವು ದೇವಸ್ಥಾನಗಳು ಜಲಾವೃತ

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಪ್ರಮುಖ ದೇವಾಲಯಗಳು ಜಲಾವೃತವಾಗಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಗಣೇಶ್ ಮಂದಿರ ಜಲದಿಗ್ಬಂದನ ಗೊಂಡಿದ್ದು, ಮಹಾರಾಷ್ಟ್ರ – ಕರ್ನಾಟಕ ಗಡಿಯಲ್ಲಿರುವ ನರಸಿಂಹ ಹಾಡಿ ದೇವಸ್ಥಾನ ಭಾಗಶಃ ಜಲಾವೃತವಾಗಿದೆ. ಇನ್ನು ಭಕ್ತರು ರಭಸವಾಗಿ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ, ದತ್ತ ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಕೃಷ್ಣಾ ನದಿ ಮತ್ತು ಪಂಚಗಂಗಾ ನದಿಗಳ …

Read More »

ಧಾರವಾಡದ ಸರ್ಕಾರಿ ಕಾಲೇಜೊಂದು ಮಳೆ ಬಂದರೆ ಸಾಕು ಎಲ್ಲೆಡೆ ಸೋರುತ್ತ

ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಗಳಿಸಿರುವ ಧಾರವಾಡದ ಸರ್ಕಾರಿ ಕಾಲೇಜೊಂದು ಮಳೆ ಬಂದರೆ ಸಾಕು ಎಲ್ಲೆಡೆ ಸೋರುತ್ತಿದ್ದು, ವಿದ್ಯಾರ್ಥಿನಿಯರಿಗೆ ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಗರದ ಆರ್ ಎನ್ ಶೆಟ್ಟಿ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜ್​ನ ಸ್ಥಿತಿಯಾಗಿದೆ. ಈ ಕಾಲೇಜಿನ ಕಟ್ಟಡಗಳು ಸಂಪೂರ್ಣವಾಗಿ ಹಳೆಯದಾಗಿದ್ದು, ಮೇಲ್ಛಾವಣಿ ಸಹ ಬಿರುಕು ಬಿಟ್ಟಿದ್ದು, ಮಳೆ ಬಂದರೇ ಸೋರಲಾರಂಭಿಸುತ್ತದೆ. ಧಾರವಾಡದಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಕಾಲೇಜಿನ …

Read More »

ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ

ಕಲಬುರಗಿ: ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯತ್​ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ. ಅಶೋಕ ಪ್ಯಾಟಿ (45) ಕೊಲೆಯಾದವರು. ಅಶೋಕ್ ಪ್ಯಾಟಿ ಪಕ್ಕದ ಮನೆಯ ಹಾಲಗಡ್ಲಾ ಕುಟುಂಬದ ಜಾನಪ್ಪ, ಸಿದ್ದಪ್ಪ, ಗುಂಡಪ್ಪ ಮತ್ತು ಅವರ ಸಂಬಂಧಿಗಳು ಈ ಕೊಲೆ ಮಾಡಿದ್ದಾರೆ ಎಂದು ಮೃತನ‌ ಪತ್ನಿ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏನಿದು ಪ್ರಕರಣ ?: ಕೊಲೆಯಾದ ಅಶೋಕ್ ಪ್ಯಾಟಿ …

Read More »

2022-23 ಹಣಕಾಸು ವರ್ಷಕ್ಕೆ EPF ನ ಬಡ್ಡಿ ದರವನ್ನು 8.15 ಪ್ರತಿಶತಕ್ಕೆ ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.0.05ರಷ್ಟು ಹೆಚ್ಚಾಗಿದೆ.

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಲ್ಲಿನ ಹಣದ ಮೇಲಿನ ಬಡ್ಡಿ ದರವನ್ನು (EPFO Interest rate) ಅಂತಿಮಗೊಳಿಸಲಾಗಿದೆ. 2022-23ನೇ ಹಣಕಾಸು ವರ್ಷಕ್ಕೆ ಶೇ 8.15 ಬಡ್ಡಿ ನೀಡಲು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಸಂಬಂಧ ಇಪಿಎಫ್‌ಒ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಇಪಿಎಫ್ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) 2022-23ರ ಹಣಕಾಸು ವರ್ಷಕ್ಕೆ ಶೇ 8.15 …

Read More »

ವರುಣನ ಆರ್ಭಟಕ್ಕೆ ಕೆಲ ಮನೆಗಳಿಗೆ ನೀರು ನುಗ್ಗಿದರೆ, ಮತ್ತೊಂದಿಷ್ಟು ಮನೆಗಳು ಧರೆಗುರುಳಿವೆ.

ಬೆಳಗಾವಿ: ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ವರುಣನ ಆರ್ಭಟಕ್ಕೆ ಕೆಲ ಮನೆಗಳಿಗೆ ನೀರು ನುಗ್ಗಿದರೆ, ಮತ್ತೊಂದಿಷ್ಟು ಮನೆಗಳು ಧರೆಗುರುಳಿವೆ. ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಹತ್ತು ದಿನಗಳಿಂದ ಬೆಳಗಾವಿ ನಗರ ಮತ್ತು ಜಿಲ್ಲಾದ್ಯಂತ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಅಲ್ಲದೇ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಹದಾಯಿ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಪರಿಣಾಮ …

Read More »

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್​ ಹುದ್ದೆಗೆ ಅರ್ಜಿ

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಒಟ್ಟು ಖಾಲಿ ಇರುವ 13 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.   ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿ ನಡೆಸುವ ಡಿಪ್ಲೊಮಾ ಇನ್​ ಕಮರ್ಷಿಯಲ್​ ಪ್ರಾಕ್ಟೀಸ್​ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸುವ ಕನ್ನಡ ಮತ್ತು ಇಂಗ್ಲಿಷ್​ ಭಾಷೆಯ ಶೀಘ್ರಲಿಪಿ ಮತ್ತು ಶಾರ್ಟ್​ಎಂಡ್​​ …

Read More »

ವಿಶ್ವ ಕುಬ್ಜರ ಕ್ರೀಡಾಕೂಟಕ್ಕೆ ಬೆಳಗಾವಿ ಯುವತಿ ಆಯ್ಕೆ

ಬೆಳಗಾವಿ : ಸಾಧಿಸುವ ಛಲವಿರುವ ಜನರಿಗೆ ಯಾವುದೂ ಅಡ್ಡಿಯಾಗದು ಅಂತಾರೆ. ಈ ಮಾತನ್ನು ಜಿಲ್ಲೆಯ ಯುವತಿ ತೋರಿಸಿಕೊಟ್ಟಿದ್ದಾರೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ವಿಶ್ವ ಕುಬ್ಜರ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರ ಹೆಸರು ಮಂಜುಳಾ ಶಿವಾನಂದ ಗೊರಗುದ್ದಿ. ಕರದಂಟು ನಾಡು ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ನಿವಾಸಿ. ಜುಲೈ 28ರಿಂದ ಜರ್ಮನಿಯಲ್ಲಿ ಆರಂಭವಾಗುತ್ತಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಮಂಜುಳಾ, ಚಕ್ರ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ …

Read More »

ಹಾಲ್ನೊರೆಯಂತೆ ಚಿಮ್ಮುತ್ತಿದೆ ಗೋಕಾಕ್ ಜಲಪಾತ

ಬೆಳಗಾವಿ: ಅಮೆರಿಕ ದೇಶದ ಪ್ರಸಿದ್ಧ ನಯಾಗರ ಜಲಪಾತವನ್ನು ಹೋಲುವುದರಿಂದ ಭಾರತದ ನಯಾಗಾರವೆಂದೇ ಕರೆಯಲ್ಪಡುವ ನಯನ ಮನೋಹರ ಗೋಕಾಕ್​ ಫಾಲ್ಸ್ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಕರ್ಷಕ ದೃಶ್ಯ ಕಂಡು ಜನ ಪುಳಕಗೊಳ್ಳುತ್ತಿದ್ದಾರೆ. ಹಾಸುಗಲ್ಲುಗಳ ಮೇಲೆ ಹರಿದು ಬರುವ ಜಲಧಾರೆಯ ಸೊಬಗು ನೋಡುವುದೇ ಒಂದು ಸಡಗರ. ಪಶ್ಚಿಮ ಘಟ್ಟದಲ್ಲಿ ಅಕ್ಷರಶಃ ವರುಣರಾಯ ಅಬ್ಬರಿಸುತ್ತಿದ್ದಾನೆ. ಜಿಲ್ಲೆಯ ಘಟಪ್ರಭಾ, ಹಿರಣ್ಯಕೇಶಿ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಅಪಾರ ಪ್ರಮಾಣದ ನೀರು ಗೋಕಾಕ್ …

Read More »