Breaking News

ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ.. ಮನೆಗಳಿಗೆ ಬೆಂಕಿ, ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಲೂಟಿ

ಇಂಫಾಲ (ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾನುವಾರ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹೊಸದಾಗಿ ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿ ನಡುವೆ ಘರ್ಷಣೆ ಕೂಡ ಭುಗಿಲೆದ್ದಿದೆ. ಮೇ 3ರಿಂದ ಮಣಿಪುರ ರಾಜ್ಯಾದ್ಯಂತ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಆಗಸ್ಟ್ 29ರಂದು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಲಾಗಿದೆ. ಇದರ ನಡುವೆ ಇಂಫಾಲ ಪೂರ್ವ ಜಿಲ್ಲೆಯ ನ್ಯೂ ಲಂಬುಲೇನ್‌ ಪ್ರದೇಶದಲ್ಲಿ …

Read More »

ಸಾಲಾಬಾಧೆಯಿಂದ ಹಾವೇರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ.

ಹಾವೇರಿ : ಜಿಲ್ಲೆಯಲ್ಲಿ ರವಿವಾರ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಗಿರೀಶ್ ಮುರ್ಡೆಪ್ಪನವರ್ ಮೃತಪಟ್ಟಿದ್ದರೆ, ಮತ್ತೊಂದು ಕಡೆ ಬ್ಯಾಡಗಿ ತಾಲೂಕಿನ ಶೀಡೆನೂರು ಗ್ರಾಮದ ನಾಗೇಶಪ್ಪ ಕೊಡಗದ್ದಿ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಗಿರೀಶ್ ಬ್ಯಾಂಕ್‌ನಲ್ಲಿ ನಾಲ್ಕು ಲಕ್ಷ ರೂಪಾಯಿ ಸಾಲ ಮತ್ತು ಸೊಸೈಟಿಯಲ್ಲಿ ಎರಡು ಲಕ್ಷ ಮತ್ತು ಕೈಗಡ ಒಂದೂವರೆ ಲಕ್ಷ ಸಾಲ ಮಾಡಿದ್ದ. ತಮ್ಮ ಮನೆಯಲ್ಲಿ ಗಿರೀಶ್ ಸಾವಿಗೆ ಶರಣಾಗಿದ್ದಾರೆ. ಈ ಕುರಿತಂತೆ ಹಲಗೇರಿ …

Read More »

ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ.:H.D.K.

ರಾಮನಗರ : ರೇಷ್ಮೆನಗರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ನಾನೇ ಮೆಡಿಕಲ್ ಕಾಲೇಜಿಗೆ 100 ಕೋಟಿ ಹಣ ಕೊಟ್ಟಿದ್ದೆ. ಡಿ ಕೆ ಶಿವಕುಮಾರ್ ಆಗ ವೈದ್ಯಕೀಯ ಸಚಿವರಾಗಿದ್ದರು. ಟೆಂಡರ್ ಕೊಟ್ಟಿದ್ದೂ ಕೂಡಾ ಇನ್ನೂ ಜೀವಂತವಾಗಿದೆ. ಆ ಬಳಿಕ ಬಿಜೆಪಿ ಸರ್ಕಾರ ಬಂದು ಕನಕಪುರಕ್ಕೆ ಕೊಟ್ಟಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯಿತು. ಈಗ ನಿಮ್ಮದೇ ಸರ್ಕಾರ ಇದೆ. ನಾನು …

Read More »

ಧಾರವಾಡ ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ

ಧಾರವಾಡ : ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಮಾಹಿತಿಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.   ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆಯಲ್ಲಿ ಬಿಜೆಪಿಗರು ಕಾಂಗ್ರೆಸ್​ಗೆ ಬರುತ್ತಿದ್ದಾರೆ. ಹಾಗೇ ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿಗರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ. ಬಿಜೆಪಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡ ಕಾಂಗ್ರೆಸ್ ಪಕ್ಷಕ್ಕೆ‌ ಬರ್ತಾರೆ …

Read More »

ಜಪ್ತಿ ಮಾಡಿದ ಡ್ರಗ್ಸ್​ ಮಾರಾಟಕ್ಕೆ ಯತ್ನ ಆರೋಪ: ಹೈದರಾಬಾದ್​ನಲ್ಲಿ ಎಸ್​ಐ ಅರೆಸ್ಟ್​​

ಹೈದರಾಬಾದ್​ (ತೆಲಂಗಾಣ): ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಡ್ರಗ್ಸ್​ ಪ್ರಕರಣದಲ್ಲಿ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​​ವೊಬ್ಬರು ಸಿಕ್ಕಿ ಬಿದ್ದಿದ್ದಾರೆ. ಪೊಲೀಸ್​ ದಾಳಿ ವೇಳೆ ವಶಪಡಿಸಿಕೊಂಡ ಡ್ರಗ್ಸ್​ ಕದ್ದು ಅದನ್ನೇ ಮಾರಾಟ ಮಾಡಲು ಎಸ್​ಐ ಯತ್ನಿಸುತ್ತಿದ್ದ. ಆರೋಪಿ ಮನೆಯಲ್ಲಿ ಪತ್ತೆಯಾದ ಸುಮಾರು 1,775 ಗ್ರಾಂ ಎಂಡಿಎಂಎ ಡ್ರಗ್ಸ್​ಅನ್ನು ತಮ್ಮ ಬಳಿ ಈ ಎಸ್​ಐ ಇಟ್ಟುಕೊಂಡಿದ್ದ ಎಂದು ವರದಿಯಾಗಿದೆ. ಸೈಬರಾಬಾದ್‌ ಪೊಲೀಸ್ ಕಮಿಷನರೇಟ್‌ನ ಸೈಬರ್ ಕ್ರೈಂ ವಿಭಾಗದಲ್ಲಿ (ಸಿಸಿಎಸ್) ಕಾರ್ಯನಿರ್ವಹಿಸುತ್ತಿದ್ದ ಕೆ.ರಾಜೇಂದರ್ ಎಂಬಾತನೇ ಬಂಧಿತ ಎಸ್‌ಐ. ರಾಜೇಂದರ್​ …

Read More »

ಶಾಲಾ ಕೊಠಡಿ ಕಾಮಗಾರಿಗೆ ಪಂಚರು ಗ್ರಾಮಸ್ಥರ ಸಮ್ಮುಖದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಪೂಜೆ

ಶಾಲಾ ಕೊಠಡಿ ಕಾಮಗಾರಿಗೆ ಪಂಚರು ಗ್ರಾಮಸ್ಥರ ಸಮ್ಮುಖದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದ ಹಾಳದಲ್ಲಿ ಸರಕಾರಿ ಪ್ರೌಢಶಾಲೆಗೆ ಅವಶ್ಯಕತೆವಿರುವ ಒಂದು ಕೊಠಡಿ ಮಂಜೂರುಗೊಂಡಿರುವದರಿಂದ ಅದಕ್ಕೆ ಸ್ಥಳಾವಕಾಶದ ಕೊರತೆ ಇತ್ತು. ಸ್ಥಳಕ್ಕೆ ಭೂಮಿ ಅವಶ್ಯವಿರುವದರಿಂದ ಭಾನುವಾರದಂದು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಕರೆದು ಭೂಮಿಯನ್ನ ಗ್ರಾಮದ ಬ್ರಹ್ಮದೇವರ ಗಡ್ಡೆ ಶ್ರೀವಿಠ್ಠಲ ದೇವರ ತರ್ಪಿ ಇರುವ ಐದು ಜನರ ಪಂಚರ ಹೆಸರಿನಲ್ಲಿರುವ ದೇವಸ್ಥಾನ ಭೂಮಿಯಲ್ಲಿ ಕಟ್ಟಡಕ್ಕೆ ಒಕ್ಕೋರಲ …

Read More »

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ: ಯುವತಿ ಜೊತೆ ಹೋಗಿದ್ದಕ್ಕೆ ಹಲ್ಲೆ, 6 ಜನರ ಬಂಧನ

ಬೆಳಗಾವಿ, ಆಗಸ್ಟ್ 27:​ ಜಿಲ್ಲೆಯ ಖಂಜರ್​ಗಲ್ಲಿ ದರ್ಗಾ ಬಳಿ ನೈತಿಕ ಪೊಲೀಸ್​ಗಿರಿ(moral policing)ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಕೇಸ್ ದಾಖಲಿಸಿ 6 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಅನ್ಯಕೋಮಿನ ಮಹಿಳೆ ಜೊತೆ ಬಂದಿದ್ದಕ್ಕೆ ತಪ್ಪು ತಿಳುವಳಿಕೆಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಕ್ಷಣ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಯುವಕನನ್ನು …

Read More »

ಅನ್ಯಕೋಮಿನ 10 ರಿಂದ 12 ಜನ ಯುವಕರ ತಂಡ ಹಿಂದೂ ಯುವಕನ ಮೇಲೆ ದಾಳಿ

ಬೆಳಗಾವಿ, ಆ.27: ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ(Moral Policing) ಪ್ರಕರಣಗಳು ಹೆಚ್ಚುತ್ತಲೇ ಇವೆ. ಅನ್ಯಕೋವಿನ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಆರೋಪಿಸಿ ಅದೇ ಸಮುದಾಯದ ವಿದ್ಯಾರ್ಥಿಗಳು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದ ಘಟನೆ ಮಂಗಳೂರಿನಲ್ಲಿ ನಡೆದಿತ್ತು(Group Attack). ಈಗ ಬೆಳಗಾವಿ ನಗರದ ಖಂಜರ್ ಗಲ್ಲಿ ದರ್ಗಾ ಬಳಿ ನೈತಿಕ ಪೊಲೀಸ್​ಗಿರಿ ಪ್ರಕರಣ ಕಂಡು ಬಂದಿದೆ. ಅನ್ಯಕೋವಿನ ಯುವತಿ ಜೊತೆ ಬಂದಿದ್ದ ಹಿಂದೂ ಯುವಕನ ಮೇಲೆ 10ರಿಂದ 12 ಯುವಕರ ಗುಂಪು ಹಲ್ಲೆ ನಡೆಸಿದೆ. …

Read More »

ಬೆಳಗಾವಿಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಊಟದಲ್ಲಿ ಹುಳು: ವಿದ್ಯಾರ್ಥಿಗಳಿಂದ ದೂರು

: ಬೆಳಗಾವಿಯ (Belagavi) ಬೈಲಹೊಂಗಲ ತಾಲೂಕಿನ ಸರ್ಕಾರಿ ವಸತಿ ನಿಲಯದ ಊಟದಲ್ಲಿ ಹುಳುಗಳು ಪತ್ತೆಯಾಗಿವೆ. ತಾಲೂಕಿನ ಎಸ್ಸಿ ಎಸ್ಟಿ (SC, ST) ಪೋಸ್ಟ್ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ (Post-matric SC-ST boys hostel) ನೀಡುವ ಆಹಾರದಲ್ಲಿ ಹುಳುಗಳು ಪತ್ತೆಯಾಗಿವೆ. ಅದಷ್ಟೇ ಅಲ್ಲದೆ ಹಾಸ್ಟೆಲ್​ನಲ್ಲಿ ಹಸಿ ರೊಟ್ಟಿ, ಅರೆಬೆಂದ ಇಡ್ಲಿ, ಮಸಾಲೆಗಳಿಲ್ಲದ ಸಾರನ್ನು ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅರೆ ಬೆಂದ ಹುಳು ಮಿಶ್ರಿತ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. …

Read More »

ಬೆಳಗಾವಿ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ; ಕವಟಗಿಮಠ

ಚಿಕ್ಕೋಡಿ: ರೈತರಿಗೆ ಏಳು ಗಂಟೆ ಅನಿಯಮಿತ ವಿದ್ಯುತ್ ನೀಡಬೇಕು ಮತ್ತುಬೆಳಗಾವಿಯನ್ನು (Belagavi) ಬರಪೀಡಿತ ಜಿಲ್ಲೆಯಂತ ಘೋಷಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ (Mahantesh Kavatagimath) ನೇತೃತ್ವದಲ್ಲಿ ಬಿಜೆಪಿ (BJP) ಮುಖಂಡರು ಚಿಕ್ಕೋಡಿ ಉಪವಿಭಾಗಧಿಕಾರಿ ಮಾಧವ್ ಗಿತ್ತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಳಿಕ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಜನರಿಗೆ ಹಲವು ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ನಿನಗೂ ಫ್ರೀ, ನನಗೂ ಫ್ರೀ ಅಂತ …

Read More »