ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370 ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂಕೋರ್ಟ್ ನಿತ್ಯ ವಿಚಾರಣೆ ನಡೆಸುತ್ತಿದ್ದು, ಮುಖ್ಯ ಅರ್ಜಿದಾರರಾಗಿರುವ ಬಾರಾಮುಲ್ಲಾ ಕ್ಷೇತ್ರದ ಸಂಸದ ಮುಹಮದ್ ಅಕ್ಬರ್ ಲೋನ್ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಖಂಡಿಸಿ, ದೇಶದ ಸಂವಿಧಾನದ ಮೇಲೆ ಇರುವ ನಿಷ್ಠೆಯ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೋರ್ಟ್ ಸೂಚಿಸಿದೆ. 15ನೇ ದಿನದ ವಿಚಾರಣೆಯಲ್ಲಿ ಮುಖ್ಯ ಅರ್ಜಿದಾರ ಅಕ್ಬರ್ ಲೋನ್ ವಿರುದ್ಧವೇ ಭಾರತ ವಿರೋಧಿ …
Read More »ಚುನಾವಣಾ ಅಕ್ರಮ ನಡೆಸಿ ಗೆದ್ದ ಆರೋಪ : ಹೆಚ್ಡಿ ರೇವಣ್ಣಗೆ ಹೈಕೋರ್ಟ್ ಸಮನ್ಸ್
ಬೆಂಗಳೂರು : ಚುನಾವಣಾ ಅಕ್ರಮಗಳನ್ನು ನಡೆಸಿ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರು ಆಯ್ಕೆಯಾಗಿದ್ದು, ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ. ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ, ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಕೂಡ …
Read More »ಕೆಎಸ್ಆರ್ಟಿಸಿಗೆ ಮುಡಿಗೆ ‘ಸಪ್ಲೈಚೈನ್ ಲೀಡರ್ ಶಿಪ್ -ಎಕ್ಸ್ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿ
ಬೆಂಗಳೂರು : ದೇಶದ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ವಹಣೆಯಲ್ಲಿ ಪ್ರಶಸ್ತಿಗಳ ಬೇಟೆಯನ್ನು ಮುಂದುವರೆಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿಯೂ ಲಭಿಸಿದೆ. ಕಾಮಿಕಾಜೆ ಬಿ2ಬಿ ಮೀಡಿಯಾ ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಕೆಎಸ್ಆರ್ಟಿಸಿ ಮುಡಿಗೇರಿದ್ದು, ಸೆಪ್ಟೆಂಬರ್ 14ರಂದು ಮುಂಬೈನಲ್ಲಿರುವ …
Read More »ರಾಜ್ಯಪಾಲರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ: ಪ್ರಕರಣ ದಾಖಲು
ಬೆಂಗಳೂರು: ಸಾಮಾನ್ಯವಾಗಿ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು, ಸಿನಿಮಾ ತಾರೆಗಳು ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸುತ್ತಿದ್ದ ಸೈಬರ್ ವಂಚಕರು ಇದೀಗ ರಾಜ್ಯಪಾಲರ ಹೆಸರಿನಲ್ಲಿಯೂ ನಕಲಿ ಖಾತೆ ತೆರೆದಿರುವ ವಿಚಾರ ಬೆಳಕಿಗೆ ಬಂದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರ ಫೋಟೋ, ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಕರ್ನಾಟಕ ಪ್ರದೇಶ …
Read More »ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ: ಹೈಕೋರ್ಟ್‌ನಲ್ಲಿ ದಾವೆ ಹೂಡುತ್ತೇವೆ ಎಂದ ಮುತಾಲಿಕ್
ಧಾರವಾಡ : ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ದಾವೆ ಹೂಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲು ಮಾಡುತ್ತೇವೆ. ಉದಯನಿಧಿ ಸಂವಿಧಾನಿಕ ಜವಾಬ್ದಾರಿಯ ಸ್ಥಾನದಲ್ಲಿದ್ದಾರೆ. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಈ …
Read More »ಛಾಯಾಗ್ರಾಹಕನ ವಿರುದ್ಧ ಹಾರ್ಡ್ ಡಿಸ್ಕ್ ಕೊಡದೇ ವಂಚನೆ ಪ್ರಕರಣ: ಆರೋಪ ಅಲ್ಲಗಳೆದ ಸಹ ನಿರ್ಮಾಪಕಿ
ಬೆಂಗಳೂರು: ಚಿತ್ರೀಕರಣವಾದ ಸಿನಿಮಾ ದೃಶ್ಯಗಳ ಹಾರ್ಡ್ ಡಿಸ್ಕ್ ಕೊಡದೇ, ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಛಾಯಾಗ್ರಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ. ‘ಸಮುದ್ರಂ’ ಸಿನಿಮಾದ ನಿರ್ಮಾಪಕಿ ರಾಜಲಕ್ಷ್ಮಿ ನೀಡಿರುವ ದೂರಿನನ್ವಯ ಛಾಯಾಗ್ರಾಹಕ ರಿಷಿಕೇಷ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ‘ಸಮುದ್ರಂ’ ಸಿನಿಮಾವನ್ನು ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಈ ಚಿತ್ರಕ್ಕೆ ರಿಷಿಕೇಷ್ ಛಾಯಾಗ್ರಾಹಕನಾಗಿದ್ದು, ರಾಜಲಕ್ಷ್ಮಿ ಎಂಬುವವರು ಬಂಡವಾಳ ಹೂಡಿದ್ದರು. …
Read More »ಗಣೇಶ ಮತ್ತು ಈದಮಿಲಾದ್ ಹಬ್ಬವನ್ನು ಶಾಂತತೆಯಿಂದ ಆಚರಿಸಿ
ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಭಾಗದ ಸರಹದ್ದಿನಲ್ಲಿ ಗಣೇಶ ಮತ್ತು ಈದ ಮಿಲಾದ ಹಬ್ಬವನ್ನು ಹಿಂದೂ ಮುಸ್ಲಿಂ ಸಮಾಜದವರು ಭಾವಕ್ಯದಿಂದ ಆಚರಿಸ ಬೇಕು ಎಂದು ಯಮಕನಮರ್ಡಿ ಪೋಲಿಸ್ ಠಾಣೆಯ ಇನ್ಸಪೇಕ್ಟರ ರಮೇಶ ಛಾಯಾಗೋಳ ಹೇಳಿದರು. ಅವರು ಇಂದು ಯಮಕನಮರ್ಡಿ ಪೋಲಿಸ್ ಠಾಣೆಯಲ್ಲಿ ಜರುಗಿದ ಶಾಂತತಾ ಸಭೆಯಲ್ಲಿ ಭಾಗವಹಿಸಿ ಮುಂಬರುವ ಸೆಪ್ಟೆಂಬರ್ 19 ರಿಂದ ಗಣೇಶ ಚತುರ್ಥಿ ಮತ್ತು 28 ರಂದು ಜರಗಲಿರುವ ಈದ ಮಿಲಾದ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಶ್ರದ್ದಾ …
Read More »ಬೈಕ್ ಸವಾರರ ಮೇಲೆ ನರಿ ದಾಳಿ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷ
ಬೆಳಗಾವಿ- ಇತ್ತೀಚಿಗೆ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿಯ ವೀರಭದ್ರ ನಗರದಲ್ಲಿ ನರಿ ದಾಳಿ ಮಾಡಿದ್ದು ಇಬ್ಬರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಇಬ್ಬರು ಬೈಕ್ ಸವಾರರ ಮೇಲೆ ನರಿಯೊಂದು ದಾಳಿ ಮಾಡಿದ್ದು ಕಾಲಿಗೆ ಕಚ್ಚಿ ಪರಾರಿಯಾಗಿದೆ.ನರಿ ದಾಳಿಯಿಂದ ಅಲ್ಪ ಗಾಯಗೊಂಡ ಇಬ್ಬರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ರಾತ್ರಿ ಹೊತ್ತು ವೀರಭದ್ರ ನಗರದಲ್ಲಿ ಇಬ್ಬರು ಬೈಕ್ ಮೇಲೆ ಹೋಗುತ್ತಿರುವಾಗ …
Read More »ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಘಟನೆಗಳು ಬಿಜೆಪಿ & ದಳದವರು ಎಲ್ಲಿ ಹೋಗಿದ್ರಿ: ಡಿ ಕೆ ಶಿ
ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಘಟನೆಗಳು ಬಿಜೆಪಿ & ದಳದವರು ಎಲ್ಲಿ ಹೋಗಿದ್ರಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಪ್ರಶ್ನಿಸಿದ್ದಾರೆ ನಾವು ಕರ್ನಾಟಕದ ರೈತರ್ ಹಿತರಕ್ಷಣೆಗೆ ಏನು ಮಾಡಬೇಕು ಅದನ್ನು ಮಾಡಿದ್ದೇವೆ ಮೇಕೆದಾಟು ನೀರಿಗಾಗಿ ಯಾರು ಹೋರಾಟ ಮಾಡಿಲ್ಲ ನಾವು ಮಾಡುವಾಗ ಸಂಘಟನೆಗಳು ಬಿಜೆಪಿ & ದಳದವರು ಎಲ್ಲಿ ಹೋಗಿದ್ರಿ ಇವರೆಲ್ಲ ಕಾವೇರಿ ಬಗ್ಗೆ ಮಾತನಾಡುತ್ತಿದ್ದಾರೆ ಯಾಕೆ ಮೇಕೆದಾಟು ಬಗ್ಗೆ ಮಾತನಾಡುತ್ತಿಲ್ಲ ನಮ್ಮ ಅಧಿಕಾರಿಗಳು …
Read More »ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ.
ಚಿತ್ರದುರ್ಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ದುರಂತ ಘಟನೆಯೊಂದು ಸಂಭವಿಸಿದೆ. ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದು ತಿಳಿದುಬಂದಿದೆ. ಈ ಅಪಘಾತ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಪೇಟೆ ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಕಾರೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ದುರಂತ ಘಟನೆಯಲ್ಲಿ …
Read More »