ಮಂಡ್ಯ: ನಾಲ್ಕು ಬಾರಿ ಗರ್ಭಪಾತವಾಗಿದ್ದರಿಂದ ನೊಂದಿದ್ದ ಮಹಿಳೆಯೊಬ್ಬರು ಐದನೇ ಬಾರಿಗೆ ಇಂಥಹದ್ದೇ ಸಮಸ್ಯೆಯಾಗಬಹುದು ಎಂಬ ಭಯದಿಂದ ಏಳು ತಿಂಗಳ ಕಾಲ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿದ್ದರು. ಅವರು ಈ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆಗೆ ಮಂಡ್ಯ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ. ತಾಲೂಕಿನ ತಗ್ಗಹಳ್ಳಿ ಗ್ರಾಮದ ಮಾದೇಶ್ ಅವರ ಪತ್ನಿ ಜಯಲಕ್ಷ್ಮಿ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಸೆ. 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ. ಮಾದೇಶ್ ಹಾಗೂ …
Read More »ಣೇಶೋತ್ಸವ ಹಿನ್ನೆಲೆ ಸೋಮವಾರವೇ ರಜೆ ಇರುತ್ತದೆ: ನಿತೇಶ್ ಪಾಟೀಲ್
ಬೆಳಗಾವಿ : ಗಣೇಶೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮುಂಚಿತವಾಗಿಯೇ ಘೋಷಿಸಿರುವಂತೆ ಸೋಮವಾರವೇ ರಜೆ ಇರುತ್ತದೆ ಎಂದು ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎ ಆರ್) ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಈ ವಿಷಯವನ್ನು ಸ್ಪಷ್ಟಪಡಿದ್ದಾರೆ.
Read More »ವಿಶೇಷ ಸಂಸತ್ ಅಧಿವೇಶನ: ಹೊಸ ಕಟ್ಟಡದಲ್ಲಿ ರಿಹರ್ಷಲ್.. ಎಲ್ಲ ವ್ಯವಸ್ಥೆಗಳ ಪರಿಶೀಲನೆ!
ನವದೆಹಲಿ: ಸೆಪ್ಟೆಂಬರ್ 18 ರಂದು ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೂ ಮುನ್ನ, ‘ಅಮೃತ್ ಕಾಲ’ ಸಮಯದಲ್ಲಿ ಸರ್ಕಾರವು ಕರೆದಿರುವ ಅಧಿವೇಶನಕ್ಕೆ ಮೂರು ದಿನಗಳ ಮೊದಲು ಹೊಸ ಮತ್ತು ಹಳೆಯ ಸಂಸತ್ತಿನೊಂದಿಗೆ ಪೂರ್ವಾಭ್ಯಾಸ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಹಳೆಯ ಕಟ್ಟಡದಲ್ಲಿ ಒಂದು ದಿನ ಹಾಗೂ ಹೊಸ ಕಟ್ಟಡದಲ್ಲಿ ಎರಡು ದಿನ ತಾಲೀಮು ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಳೆ ಕಟ್ಟಡದಲ್ಲಿ ವಿಶೇಷ ಅಧಿವೇಶನಕ್ಕೆ ಈಗಾಗಲೇ …
Read More »ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ: ಸಣ್ಣಪುಟ್ಟ ಗಾಯಗಳಿಂದ ಇಬ್ಬರು ಪಾರು.. ಎಂಪಿ ರೇಣುಕಾಚಾರ್ಯರ ಭೇಟಿ
ದಾವಣಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿದ್ದು, ಸಣ್ಣಪುಟ್ಟ ಗಾಯಗಳಿಂದ ಇಬ್ಬರು ಪಾರಾಗಿರುವ ಘಟನೆ ಜಿಲ್ಲೆಯ ನ್ಯಾಮತಿಯಲ್ಲಿ ಕಳೆದ ದಿನ ರಾತ್ರಿ ನಡೆದಿದೆ. ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಚಿರತೆ ದಾಳಿ ಮಿತಿಮೀರಿದೆ. ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೂ ಎರಗುತ್ತಿವೆ. ಚಿರತೆಯ ದಾಳಿಯಿಂದ ನ್ಯಾಮತಿ ತಾಲೂಕಿನ ಜನರು ಜೀವ ಅಂಗೈಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಮತಿ ತಾಲೂಕಿನ ಹಳೇಮಳಲಿ ಗ್ರಾಮದ ಮಂಜುನಾಥ್, …
Read More »ಶಿವರಾಮ್ ಹೆಬ್ಬಾರ್ ನಮ್ಮವರು, ಕಾಂಗ್ರೆಸ್ ಬಾಗಿಲು ಅವರಿಗೆ ಸದಾ ತೆರೆದಿಟ್ಟಿದ್ದೇವೆ: ಸಚಿವ ಮಂಕಾಳು ವೈದ್ಯ
ಶಿರಸಿ (ಉತ್ತರ ಕನ್ನಡ): ಶಾಸಕ ಶಿವರಾಮ್ ಹೆಬ್ಬಾರ್ ನಮ್ಮವರು, ನಮ್ಮ ಜೊತೆ ಇದ್ದವರು. ಕಾಂಗ್ರೆಸ್ಗೆ ಬರಲು ಬಾಗಿಲು ತೆರೆದಿಟ್ಟಿದ್ದೇವೆ. ಯಾವಾಗ ಬೇಕಾದರೂ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಶಿರಸಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಮ್ ಹೆಬ್ಬಾರ್ ನಮ್ಮ ಜೊತೆಯಲ್ಲೇ ಇದ್ದಾರೆ. ನಾವೆಲ್ಲಾ ಫ್ರೆಂಡ್ಸ್, ಅವರು ಕಾಂಗ್ರೆಸ್ಗೆ ಬರುವುದು ಮಾತ್ರ ಬಾಕಿ ಇದೆ. ಯಾವಾಗ …
Read More »ಕೇಂದ್ರ ಸರ್ಕಾರದ ಬರ ನಿರ್ವಹಣೆ ಮಾನದಂಡದಿಂದ ಬರಗಾಲ ಘೋಷಣೆ ವಿಳಂಬವಾಗಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಿಜೆಪಿ ಆರೋಪಕ್ಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ …
Read More »ತಮಿಳುನಾಡಿನ ಪ್ರಭಾವ ರಾಜ್ಯ ಸರ್ಕಾರದ ಮೇಲೆ ವಿಪರೀತ ಇದ್ದ ಹಾಗೆ ಇದೆ: ಬೊಮ್ಮಾಯಿ
ಬೆಂಗಳೂರು: ತಮಿಳುನಾಡಿನ ಪ್ರಭಾವ ರಾಜ್ಯ ಸರ್ಕಾರದ ಮೇಲೆ ವಿಪರೀತ ಇದ್ದ ಹಾಗೆ ಇದೆ. ಸುಪ್ರೀಂ ಕೊರ್ಟ್ ಆದೇಶ ಆಗಿಲ್ಲ. ಸಿಡಬ್ಲ್ಯೂಎಂಎ ಸಭೆ ಆಗಿಲ್ಲ. ಆದರೂ ಕಾಂಗ್ರೆಸ್ ಸರ್ಕಾರ ನೀರು ಬಿಡುವ ನಿರ್ಧಾರ ಮಾಡಿ ರಾಜ್ಯದ ಜನತೆಗೆ ದೋಖಾ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ವಿರುದ್ಧ ನಮ್ಮ ಪಕ್ಷ ತೀವ್ರ ವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಹೇಳಿದರು. ಮೊದಲು …
Read More »ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವತಿಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕುಡಚಿ ಪಟ್ಟಣದ ಲಾಡ್ಜ್ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸಿಇಎನ್ ಇನ್ಸ್‌ಪೆಕ್ಟರ್ ಬಿ ಆರ್ ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿ ಗುಜರಾತ್, ಪಶ್ಚಿಮ ಬಂಗಾಳ ಮೂಲದ ತಲಾ ಇಬ್ಬರು ಯುವತಿಯರನ್ನು …
Read More »ಹುಬ್ಬಳ್ಳಿಯಲ್ಲಿ 12 ಲಕ್ಷ ಮೌಲ್ಯದ ಅಮೆರಿಕನ್ ಡೈಮಂಡ್ ಹರುಳುಗಳ ಗಣೇಶನ ಮೂರ್ತಿಯನ್ನು ತಯಾರಿಸಿ, ಬೆಂಗಳೂರಿಗೆ ರವಾನಿಸಿದ್ದಾರೆ.
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ.ಗಳ ಮೌಲ್ಯದ ಅಮೆರಿಕನ್ ಡೈಮಂಡ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ರವಾನಿಸಲಾಗಿದೆ. ಬಮ್ಮಾಪುರ ನಿವಾಸಿ ಮೂರ್ತಿ ಕಲಾವಿದ ಮಹೇಶ ಮುರಗೋಡ ಹಾಗೂ ಅವರ ತಂಡದವರು ಈ ಗಣೇಶ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದಿಂದ ಸೆ.18 ರಂದು …
Read More »ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ 25 ಲಕ್ಷ ಹಣ ಪಡೆದು ಮೋಸ ಮಾಡಿರುವ ಆರೋಪದಡಿ ಪ್ರಕರಣವೊಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲ
ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿರುವ ಮಾದರಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕೊಪ್ಪಳದ ಕಾರಾಟಗಿಯ ತಿಮ್ಮಪ್ಪ ರೆಡ್ಡಿ ಎಂಬುವವರು ವಂಚನೆಗೊಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಶಾಲ್ ನಾಗ್, ಗೌರವ್ ಹಾಗೂ ಜೀತು ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಇರುವುದೇನು?: ಕನಕಗಿರಿ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಸ್ಫರ್ಧಿಸಲು ತಿಮ್ಮಪ್ಪ ರೆಡ್ಡಿ ಪತ್ನಿ ಗಾಯತ್ರಿ ತಿಮ್ಮರೆಡ್ಡಿ ಆಕ್ಷಾಂಕಿಯಾಗಿದ್ದರು. ಟಿಕೆಟ್ …
Read More »