ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ವಿಚಾರದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸಿ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಆದರೆ, ಕರ್ನಾಟಕ ಬಂದ್ಗೆ ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಕಾವೇರಿ ಹೋರಾಟದ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸರ್ಕಾರದ ಮನವಿಗೂ ಮಣಿಯದೇ ಕನ್ನಡ ಪರ ಮತ್ತು ರೈತ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಬಂದ್ ನಿರ್ಧರವನ್ನು ಕೈಬಿಡಲು ಜಲಸಂಪನ್ಮೂಲ ಸಚಿವರೂ ಆಗಿರುವ …
Read More »ನಿನ್ನೆ ಕೊಲೆ ಮಾಡಿ ಇಂದು ನೇಣಿಗೆ ಶರಣಾದ ವಾಚಮನ್
ಯುವಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಪರಸಪ್ಪ, ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಸಪ್ಪ (50) ನೇಣಿಗೆ ಶರಣಾದ ಆರೋಪಿಯಾಗಿದ್ದು, ನಿನ್ನೆ ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆ ಮಾಡಿದ ಆರೋಪ ಈತನ ಮೇಲಿತ್ತು. ಪೊಲೀಸರು ಈತನನ್ನು ವಶಕ್ಕೆ …
Read More »ಕಾರವಾರಕ್ಕೆ ಬಂದ ಟುಪೆಲೊವ್-142 ಯುದ್ಧವಿಮಾನ
ಕಾರವಾರ: ಬಹುನಿರೀಕ್ಷಿತ ಟುಪೆಲೊವ್-142 ಯುದ್ಧ ವಿಮಾನ ಕೊನೆಗೂ ಕಾರವಾರಕ್ಕೆ ಆಗಮಿಸಿದೆ. ನಗರದ ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಬಳಿಯೇ ಸಿದ್ಧತೆ ನಡೆದಿದೆ. ನಿರೀಕ್ಷೆಯಂತೆ ಜೋಡಣೆ ನಡೆದಲ್ಲಿ ತಿಂಗಳೊಳಗೆ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಮತ್ತೊಂದು ಗರಿ ಮೂಡಲಿದೆ. ಕರಾವಳಿಯ ಹೆಬ್ಬಾಗಿಲು ಉತ್ತರಕನ್ನಡ ಜಿಲ್ಲೆಯ ಕಾರವಾರ ಅಂದಾಕ್ಷಣ ಮೊದಲು ನೆನಪಾಗೋದೇ ಇಲ್ಲಿನ ವಿಶಾಲವಾದ ಕಡಲತೀರ. ಜೊತೆಗೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾ ನೆಲೆ. ತಾಲೂಕಿನ ಅರಗಾ ಗ್ರಾಮದ ಬಳಿ ಇರುವ ಕದಂಬ ನೌಕಾನೆಲೆ …
Read More »ಬಾಂಬ್ನಂತೆ ಸಿಡಿದ ಜಾರ್ಜಿಂಗ್ ಇಟ್ಟ ಮೊಬೈಲ್ ಫೋನ್: ಮನೆಗೆ ಭಾರಿ ಹಾನಿ, ಮೂವರಿಗೆ ತೀವ್ರ ಗಾಯ
(ಮಹಾರಾಷ್ಟ್ರ) : ಮೊಬೈಲ್ಗಳು ಸ್ಫೋಟಗೊಳ್ಳುತ್ತಿರುವ ವರದಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ನಾಸಿಕ್ನಲ್ಲೂ ಇಂಥದ್ದೊಂದು ಸುದ್ದಿಯಾಗಿದೆ. ಜಾರ್ಜ್ ಮಾಡುವ ವೇಳೆ ಮೊಬೈಲ್ ಬಾಂಬ್ನಂತೆ ಸಿಡಿದು ಇಡೀ ಮನೆಯನ್ನು ಧ್ವಂಸ ಮಾಡಿದೆ. ಮನೆಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿಟಕಿ, ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ, ಸುತ್ತಮುತ್ತ ಮನೆಗಳಿಗೂ ಹಾನಿಯಾಗಿದೆ. ಮೊಬೈಲ್ ಫೋನ್ ಸ್ಫೋಟದಿಂದಾಗಿ ಇಷ್ಟು ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರ ಪೈಕಿ ಒಬ್ಬರ ಸ್ಥಿತಿ …
Read More »ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಂಡಿಯಾಕ್ಕೆ ಬಂದ ಬಾಬರ್ ಪಡೆ..
ಹೈದರಾಬಾದ್: ಏಕದಿನ ವಿಶ್ವಕಪ್ಗೆ ಭಾರತ ಪ್ರವಾಸಕ್ಕೆ ವೀಸಾ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಪಾಕಿಸ್ತಾನಕ್ಕೆ ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಭಾರತ ಸರ್ಕಾರ ಪಾಕಿಸ್ತಾನ ತಂಡಕ್ಕೆ ಸೂಕ್ತ ಸಮಯಕ್ಕೆ ವೀಸಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ವಹಣಾ ಕಮಿಟಿ ಮಾತ್ರ ಎರಡು ದಿನಗಳ ಹಿಂದೆ ವೀಸಾ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಐಸಿಸಿಗೂ ಪತ್ರ ಬರೆದಿದ್ದರು. ಆದರೆ …
Read More »ಬೆಳಗಾವಿಯಲ್ಲಿ ಇಂದು ಸಾರ್ವಜನಿಕ ಅದ್ಧೂರಿಯಾಗಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇಂದು ಸಾರ್ವಜನಿಕ ಅದ್ಧೂರಿಯಾಗಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಇದಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿಂದು ನಗರದಲ್ಲಿ ಪೊಲೀಸರು ಬುಧವಾರ ಪಥ ಸಂಚಲನ ನಡೆಸಿದರು. ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಿಂದ ಆರಂಭವಾದ ಪಥ ಸಂಚಲನ ಶನಿವಾರ ಕೂಟ, ಗಣಪತಿ ಗಲ್ಲಿ, ಕಂಬಳಿಕೂಟ, ಮಾರುತಿ ಗಲ್ಲಿ, …
Read More »ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಾಟ: ತನಿಖೆ ಪ್ರಾರಂಭ
ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಪ್ರದೇಶದಲ್ಲಿ ಅಪರಿಚಿತ ಡ್ರೋನ್ ಹಾರಾಟ ಮಾಡಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಪರಿಚಿತ ಡ್ರೋನ್ ಹಾರಾಟವನ್ನು ಪತ್ತೆ ಮಾಡಲು ತನಿಖೆಯನ್ನು ಆರಂಭಿಸಲಾಗಿದೆ. ರನ್ ವೇ ಪ್ರದೇಶದಿಂದ 6 ನಾಟಿಕಲ್ ದೂರದಲ್ಲಿ ಡ್ರೋನ್ ಹಾರಾಟ ಕಂಡು ಬಂದಿದೆ. ಡ್ರೋನ್ ಹಾರಾಟ ಕಂಡು ಬಂದ ತಕ್ಷಣವೇ ವಿಮಾನದ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತ ಸಾಕಷ್ಟು ಭದ್ರತೆ ಇದ್ದರೂ …
Read More »ಕಾವೇರಿ ನೀರು ವಿಚಾರವಾಗಿ ಕಮಲ-ದಳ ಜಂಟಿ ಹೋರಾಟ; ಸರ್ಕಾರಕ್ಕೆ ಬಿಎಸ್ವೈ, ಹೆಚ್ಡಿಕೆ ಎಚ್ಚರಿಕೆ ಸಂದೇಶ
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜಂಟಿ ಪ್ರತಿಭಟನೆ ನಡೆಸಿದರು. ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಡಿಎಂಕೆ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಇದು ಮೊದಲ ಜಂಟಿ ಹೋರಾಟವಾಗಿದ್ದು, ಧರಣಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್ ಡಿ …
Read More »ಕನ್ನಡ ಶಾಲೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತ ಶಿಕ್ಷಕರು.. ವೇತನದಲ್ಲಿ ಪ್ರತಿ ತಿಂಗಳು 10 ಸಾವಿರ ರೂ. ನೀಡುವ ಗುರುಗಳು
ಮಂಗಳೂರು : ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಕನ್ನಡ ಶಾಲೆಗಳಲ್ಲಿ ವಿವಿಧ ಮೂಲ ಸೌಕರ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ತಪ್ಪಿಸಲು ಮಂಗಳೂರಿನ ಅನುದಾನಿತ ಶಾಲೆಯ ಶಿಕ್ಷಕರು ಮಾದರಿ ಕಾರ್ಯವನ್ನು ಮಾಡುತ್ತಿದ್ದಾರೆ. ಮಂಗಳೂರಿನ ಗೋರಿಗುಡ್ಡದ ಯುಬಿಯಂಸಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಜೊತೆಗೆ ಶಿಕ್ಷಕರು ನಿವೃತ್ತರಾಗುತ್ತಿದ್ದಂತೆ ಶಿಕ್ಷಕರ ಸಂಖ್ಯೆಯು ಕಡಿಮೆಯಾಗುತ್ತಿತ್ತು. ಈ …
Read More »ಬಾಕ್ಸಿಂಗ್ಸ್ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ನಿಖತ್ ಜರೀನ್.. ಡ್ರೆಸ್ಸೇಜ್ ಇಂಡಿವಿಜುವಲ್ನಲ್ಲಿ ಪದಕ ನಿರೀಕ್ಷೆ
ಹ್ಯಾಂಗ್‌ಝೌ (ಚೀನಾ): ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಚೊರೊಂಗ್ ಬಾಕ್ ವಿರುದ್ಧ 5-0 ಅಂತರದಿಂದ ಜಯಗಳಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಮಹಿಳೆಯರ 50 ಕೆಜಿ ವರ್ಗದ 16 ರ ಸುತ್ತಿನಲ್ಲಿ ನಿಖತ್ ತನ್ನ ಕೊರಿಯಾದ ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸಿದರು. ಅಂತಿಮವಾಗಿ ಅವರು 5-0 ಪಾಯಿಂಟ್‌ಗಳಿಂದ ಪಂದ್ಯವನ್ನು ಗೆದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 57-63.5 ಸುತ್ತಿನ 16 ಪಂದ್ಯಗಳಲ್ಲಿ, …
Read More »