ಬೆಂಗಳೂರು: ”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣವಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಆರ್.ಟಿ. ನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣ ಇರುವ ನಗರ. ಅಲ್ಲಿ ಹಿಂದೆ ಹಲವಾರು ಘಟನೆಗಳು ನಡೆದಿವೆ. ಇಂತಹ ಧಾರ್ಮಿಕ ಘಟನೆ ನಡೆದಾಗ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ” ಎಂದು ಆರೋಪಿಸಿದರು. …
Read More »ಟಿಳಕವಾಡಿಯ ವೀರಸೌಧದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ನಡೆಯಿತು
ಬೆಳಗಾವಿ : ಜಗತ್ತಿಗೆ ಸತ್ಯ, ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಬೋಧಿಸಿದ ಮಹಾತ್ಮ ಗಾಂಧೀಜಿಯವರ ಮಾರ್ಗವೇ ಸರಿಯಾದ ಮಾರ್ಗ. ಭಾರತೀಯರಾದ ನಾವು ಪರಸ್ಪರ ಗೌರವಿಸುವ ಮೂಲಕ ಸದಾ ಭಾರತೀಯರಾಗುವ ಜತೆಗೆ ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯಬೇಕು ಎಂದು ಶಾಸಕ ಆಸೀಫ್ ಸೇಠ್ ಕರೆ ಕೊಟ್ಟರು. ಇಂದಿನ ಯುವಪೀಳಿಗೆ ಗಾಂಧೀಜಿ ತತ್ವಗಳನ್ನು ಸ್ವೀಕರಿಸಬೇಕು. ಅವರ ಪುಸ್ತಕಗಳನ್ನು ಓದಿ ವಿಚಾರ, ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಾದರಿ ವ್ಯಕ್ತಿಗಳಾಗಲು ಕಠಿಣ ಶ್ರಮವಹಿಸಿ, ನಿರಂತರ ಅಭ್ಯಾಸ ಮಾಡಿದರೆ …
Read More »ಬೆಳಗಾವಿಯಲ್ಲಿ ಮದ್ಯ ನಿಷೇಧಿಸಲು ಮಹಿಳೆಯರ ಆಗ್ರಹ
ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಸತ್ಯ, ಅಹಿಂಸಾ ತತ್ವ, ಶಾಂತಿಮಂತ್ರದಿಂದ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿರುವ ಗಾಂಧಿ ಹೋರಾಟವನ್ನು ಎಲ್ಲೆಡೆ ಗುಣಗಾನ ಮಾಡಿ ಸ್ಮರಿಸಲಾಗುತ್ತಿದೆ. ಆದರೆ, ಬಾಪೂಜಿ ಕಂಡಿದ್ದ ಸಾರಾಯಿ/ಮದ್ಯ ಮುಕ್ತ ಗ್ರಾಮಗಳ ಕನಸು ಮಾತ್ರ ಇಂದಿಗೂ ನನಸಾಗಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿಂದು ಮಹಿಳೆಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿನ್ನೆ (ಭಾನುವಾರ) ಮಧ್ಯಾಹ್ನದಿಂದ …
Read More »ಮಲಪ್ರಭಾ ನದಿಯಿಂದ ಹೊರಬಂದ ಮೊಸಳೆ ರೈಲಿಗೆ ಸಿಲುಕಿ ಸಾವು
ಗದಗ, (ಅಕ್ಟೋಬರ್ 02): ಮಲಪ್ರಭಾ ನದಿಯಿಂದ ಹೊರಬಂದ ಮೊಸಳೆ(crocodile) ರೈಲಿಗೆ (Train) ಸಿಲುಕಿ ಮೃತಪಟ್ಟಿದೆ. ಗದಗ(Gadag) ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ಹಳಿದಾಟುವ ವೇಳೆ ರೈಲಿಗೆ ಸಿಲುಕಿ 8 ಅಡಿ ಉದ್ದದ ಮೊಸಳೆ ಸಾವನ್ನಪ್ಪಿದೆ. ಮಲಪ್ರಭಾ ನದಿಯಿಂದ ಆಚೆ ಬಂದಿದ್ದ ಮಸೂಳೆ, ಹಳಿದಾಟುವ ವೇಳೆ ಅದೇ ಸಂದರ್ಭದಲ್ಲಿ ಬಂದ ರೈಲು ಮೇಲೆ ಹರಿದಿದೆ. ಪರಿಣಾಮ ಮಸೂಳೆಯ ದೇಹ ಎರಡು ಭಾಗವಾಗಿದೆ. ಇನ್ನು ಸ್ಥಳೀಯರು ನೋಡಿ ಮೃತಪಟ್ಟ ಮಸೂಳೆಯನ್ನು ರೈಲ್ವೇ …
Read More »ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಹೈನುಗಾರ ರೈತರಿಂದ ಬಲ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ದಿನನಿತ್ಯ ಹಾಲು ಪೂರೈಕೆ ಮಾಡುವ ಮೂಲಕ ಸಂಘಗಳ ಏಳ್ಗೆಗೆ ಹೈನುಗಾರರು ಶ್ರಮಿಸಬೇಕು. ನಮ್ಮ ಮೂಡಲಗಿ ತಾಲೂಕಿನಿಂದ ಎರಡು ಸಂಘಗಳು ಜಿಲ್ಲೆಯಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ತಾಲೂಕಿಗೆ ಹೆಮ್ಮೆಯ ಸಾಧನೆ ಮಾಡಿವೆ ಎಂದು ಕೆಎಂಎಫ್ ನಿರ್ದೇಶಕರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ನಾಗನೂರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈನುಗಾರರು ಮತ್ತು ಗ್ರಾಹಕರಿಂದ ನಮ್ಮ …
Read More »ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ, ಹೆಚ್. ವಿಶ್ವನಾಥ್ಗೆ ಹುಚ್ಚಾಸ್ಪತ್ರೆಗೆ ಕಳುಹಿಸಿ -ಶಾಸಕ ಶಾಮನೂರು
ದಾವಣಗೆರೆ, ಅ.02: ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (shamanur shivashankarappa) ಅವರು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯನವರು (Siddaramaiah), ನಮ್ಮ ಸರ್ಕಾರದಲ್ಲಿ 7 ಮಂದಿ ಲಿಂಗಾಯತರೇ ಸಚಿವರಿದ್ದಾರೆ. ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ನನ್ನ …
Read More »ಜೆಡಿಎಸ್-ಬಿಜೆಪಿ ಮೈತ್ರಿಗೆ ಪಕ್ಷದ ಮುಖಂಡರಿಂದ ಬೆಂಬಲ: ‘ರಾಜ್ಯದ ಜ್ವಲಂತ ಸಮಸ್ಯೆಗೆ ಮೈತ್ರಿಯಿಂದ ಪರಿಹಾರ’- ಕುಮಾರಸ್ವಾಮಿ
ರಾಮನಗರ: ಬಿಜೆಪಿ ಜತೆ ಮೈತ್ರಿ ಸಂಬಂಧಿಸಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಉಂಟಾಗಿದ್ದ ಕೆಲವು ಗೊಂದಲಗಳನ್ನು ಜೆಡಿಎಸ್ ವರಿಷ್ಠ ನಾಯಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿವಾರಿಸಿದರು. ಪಕ್ಷದ ಹಿತಕ್ಕಾಗಿ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ಅವರ ನಿರ್ಧಾರಕ್ಕೆ ನಾವು ಬದ್ಧ ಎಂದು ಎಲ್ಲಾ ಮುಖಂಡರು ಒಕ್ಕೊರಲ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಬಿಜೆಪಿಯೊಂದಿಗೆ ಮೈತ್ರಿ ವಿಚಾರದಲ್ಲಿ ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ, …
Read More »ಗಾಂಧಿ ಜಯಂತಿ 2023: ‘ಬಾಪು’ ನೆನಪು.. ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತ
ಹೈದರಾಬಾದ್: ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಮೋಹನ್ದಾಸ ಕರಮಚಂದ್ ಗಾಂಧಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅಹಿಂಸಾತ್ಮಕವಾಗಿ ಹೋರಾಟ ಮಾಡಿ ಒಂದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ಸಂತ. ಅವರ ಈ ಹೋರಾಟ ಜನಮಾನಸದಲ್ಲಿ ಎಂದೂ ಅಳಿಸಲಾಗದ ಒಂದು ಹೆಜ್ಜೆ ಗುರುತು. ಮಹಾತ್ಮ ಗಾಂಧಿ ಅಥವಾ ಬಾಪು ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ್ …
Read More »ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಣೆ.. 12 ವರ್ಷದ ಬಳಿಕ ಚಪ್ಪಲಿ ಧರಿಸಿದ ರೈತ
ನಿಜಾಮಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಭಾನುವಾರ ಮಹಬೂಬ್‌ನಗರದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೇ ಸುಮಾರು 12 ವರ್ಷಗಳ ನಂತರ ರೈತರೊಬ್ಬರು ಕಾಲಿಗೆ ಚಪ್ಪಲಿ ಹಾಕಿದ್ದಾರೆ. ಉತ್ತಮ ಬೆಲೆಯಿಲ್ಲದೆ ಅರಿಶಿನ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಪಡೆಯಲು ರಾಜ್ಯದಲ್ಲಿ ಮಂಡಳಿ ಸ್ಥಾಪಿಸಬೇಕು ಎಂದು ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ಮಂಡಲದ ಪಾಲೆಂ ಗ್ರಾಮದ ರೈತ ಮುತ್ಯಾಲ ಮನೋಹರರೆಡ್ಡಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪನೆ ಮಾಡಬೇಕೆಂಬ …
Read More »ಬೆಳಗಾವಿ: ಇದು ಮಹಾತ್ಮ ಗಾಂಧೀಜಿ ಕಾಲಿಟ್ಟ ಊರು. ಖಾದಿ ಇಲ್ಲಿನ ಜನರ ಉಸಿರು. ಇಲ್ಲಿನ ಮನೆ – ಮನದಲ್ಲೂ ಪಠಿಸುತ್ತಿದೆ ಗಾಂಧಿ ಮಂತ್ರ.
ಬೆಳಗಾವಿ: ಇದು ಮಹಾತ್ಮ ಗಾಂಧೀಜಿ ಕಾಲಿಟ್ಟ ಊರು. ಖಾದಿ ಇಲ್ಲಿನ ಜನರ ಉಸಿರು. ಇಲ್ಲಿನ ಮನೆ – ಮನದಲ್ಲೂ ಪಠಿಸುತ್ತಿದೆ ಗಾಂಧಿ ಮಂತ್ರ. ಅಷ್ಟಕ್ಕೂ ಆ ಗಾಂಧಿ ಗ್ರಾಮ ಯಾವುದು? ರಾಷ್ಟ್ರಪಿತ ಅಲ್ಲಿಗೆ ಬಂದಿದ್ದೇಕೆ? ಎಷ್ಟು ದಿನ ತಂಗಿದ್ದರು? ಎಂಬುದನ್ನು ತಿಳಿಯುವ ಕುತೂಹಲವೇ. ಹಾಗಾದರೆ ಓದಿ ಈ ಅಪರೂಪದ ಊರಿನ ಹೆಸರು ಹುದಲಿ. ಬೆಳಗಾವಿಯಿಂದ 22 ಕಿ.ಮೀ. ಅಂತರದಲ್ಲಿರುವ ಇದು ಕ್ರಾಂತಿಯ ನೆಲ, ಸ್ವಾತಂತ್ರ್ಯ ಹೋರಾಟಗಾರರ ತವರು, ಖಾದಿಗೆ ಪುನಶ್ಚೇತನ ನೀಡಿದ …
Read More »