Breaking News

ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ ಕರೆ: ಆರೋಪಿ ಗುರುತು ಪತ್ತೆ ಹಚ್ಚಿದ ಬೆಳಗಾವಿ ಪೊಲೀಸರು

ಬೆಳಗಾವಿ : ಜಿಲ್ಲೆಯಲ್ಲಿರುವ ಹಿಂಡಲಗಾ ಕೇಂದ್ರ ಕಾರಾಗೃಹ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸ್ಫೋಟಿಸುವುದಾಗಿ ಹಾಗೂ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.   ಹುಕ್ಕೇರಿಯ ಕಿರಣ ಮೋಷಿ (48) ಬೆದರಿಕೆ ಕರೆ ಮಾಡಿದ್ದ ಆರೋಪಿ. ತನ್ನ ಪತ್ನಿಯ ಹೆಸರಿನಲ್ಲಿರುವ ಸೀಮ್‌ನಿಂದ ಬಂದಿಖಾನೆ ಇಲಾಖೆಯ ಉತ್ತರ ವಲಯದ ಡಿಐಜಿಪಿ ಟಿ …

Read More »

ಡಿಎಚ್​ಒ ಕಚೇರಿ ಸಿಬ್ಬಂದಿಯಿಂದ ಕಚೇರಿ ಹಿಂಭಾಗದಲ್ಲಿ ಎಣ್ಣೆ ಪಾರ್ಟಿ

ಬೆಳಗಾವಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ(ಡಿಹೆಚ್‌ಒ)ಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಸಿಬ್ಬಂದಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ನಗರದ ಟಿಳಕವಾಡಿಯಲ್ಲಿರುವ ಡಿಹೆಚ್​​ಒ ಕಚೇರಿ ಹಿಂಭಾಗದಲ್ಲಿರುವ ಕೊಠಡಿಯಲ್ಲಿನ ಗಾಂಧಿಜೀ ಫೋಟೋ ಎದುರಿಗೆಯೇ ಸಿಬ್ಬಂದಿ ಮದ್ಯಪಾನ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸರಿಯಾದ …

Read More »

ಬಿಜೆಪಿ ಶಾಸಕ ಅಭಯ್ ಪಾಟೀಲ ವಿರುದ್ಧ ಅವ್ಯವಹಾರ ಆರೋಪ: ತನಿಖೆ ಮಾಡಿಸುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಇಲ್ಲಿನ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆಯವರೆಗೆ ಮಾಡಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿವಾಜಿ ಮಹಾರಾಜ ಉದ್ಯಾನದ ಬಳಿ ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟದಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಶಾಸಕ ಅಭಯ್ ಪಾಟೀಲ ಭಾವಚಿತ್ರ ಇರುವ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಘೋಷಣೆ ಮೊಳಗಿಸಿದರು. ಮಾನವ ಸರಪಳಿ ನಿರ್ಮಿಸಿ, ಬುಟ್ಟಿಯಲ್ಲಿ ಮರಳು, ಕಡಿ, ನಕಲಿ ನೋಟುಗಳನ್ನು …

Read More »

ಅರಬ್‌ನಾಡಿನಲ್ಲಿ ಮೊದಲ ಹಿಂದು ದೇಗುಲ ನಿರ್ಮಾಣ

ಅಬುಧಾಬಿ/ಪಾಟ್ನಾ: ಅಮೆರಿಕದ ನ್ಯೂಜೆರ್ಸಿಯಲ್ಲಿ ಅಕ್ಷರಧಾಮ ಉದ್ಘಾಟನೆಯಾದ ಬೆನ್ನಲ್ಲೇ, ಇನ್ನೊಂದು ಭವ್ಯ ಹಿಂದು ದೇವಾಲಯ ಮುಸ್ಲಿಂ ರಾಷ್ಟ್ರವಾದ ಯುಎಇಯ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ದೇಗುಲವನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಬುಧಾಬಿಯಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಲು ತೆರಳಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ, ಕಾಮಗಾರಿ ನಡೆಯುತ್ತಿರುವ ಎಲ್ಲ ಭಾಗಗಳಿಗೂ ಭೇಟಿ ನೀಡಿದರು. ಮುಂದಿನ ವರ್ಷ ಮಂದಿರದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. …

Read More »

ಅಣ್ಣ ತಂಗಿ ಸಂಬಂಧ ತಪ್ಪಾಗಿ ಅರ್ಥೈಸಿಕೊಂಡ ಪತಿ.. ಜೋಡಿ ಕೊಲೆ, ತಂದೆ ಮಗ ಬಂಧನ

ದಾವಣಗೆರೆ/ವಿಜಯನಗರ: ಅಣ್ಣ ತಂಗಿಯ ಸಂಬಂಧವನ್ನು ಪತಿ ತಪ್ಪಾಗಿ ತಿಳಿದು ಇಬ್ಬರನ್ನು ಕೊಲೆ ಮಾಡಿದ್ದಾನೆ. ಈ ಜೋಡಿ ಕೊಲೆಗೆ ಆರೋಪಿ ತಂದೆಯೂ ಸಾಥ್​ ನೀಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಕೊಲೆ ಮಾಡಿದ ಬಳಿಕ ಅಣ್ಣ ತಂಗಿ ಇಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ತಂದೆ ಮಗ ಇಬ್ಬರು ಕಥೆ ಕಟ್ಟಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಬಳಿಕ ಸತ್ಯಾಸತ್ಯತೆ ಹೊರ ಬಿದ್ದಿದೆ. ಏನಿದು ಪ್ರಕರಣ: ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ …

Read More »

ಮೊದಲನೇ ಮಹಡಿಯಿಂದ ಬಿದ್ದು ಮಗು ಗಂಭೀರ ಗಾಯ

ಕೊಪ್ಪಳ: ಆಟವಾಡುತಿದ್ದ 3.5 ವರ್ಷದ ಮಗು ಮನೆಯ ಮೊದಲನೇ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ಗೌರಿ ನಗರದ ಮಹಡಿ ಮನೆಯೊಂದರಲ್ಲಿ ಶನಿವಾರ (7/10/2023) ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪಟ್ಟಣದ ದುರ್ಗಾ ಕಾಲೋನಿಯ ನಿವಾಸಿ ಸಂಗೀತ ಕಲಾವಿದ ಹೊಳಿಯಪ್ಪ ಗುರಿಕಾರ ಅವರು, ತಮ್ಮ ಮಗಳು ಸೇರಿದಂತೆ ಕುಟುಂಬ ಸಮೇತ ಗೌರಿ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಸೀರೆ …

Read More »

ಸರ್ಕಾರಿ ನೌಕರಿಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ: ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೊರ್ಟ್ ನಿರಾಕರಣೆ

ಬೆಂಗಳೂರು: ಹಿಂದುಳಿದ ವರ್ಗಗಳ ಜಾತಿ (ಮೊಗೇರ್)ಗೆ ಸೇರಿದ್ದರೂ ಪರಿಶಿಷ್ಟ ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಅಡಿ ಸಹಾಯಕ ಕನ್ನಡ ಶಿಕ್ಷಕರ ಹುದ್ದೆ ಪಡೆಯಲು ಮುಂದಾಗಿದ್ದ ಶಿಕ್ಷಕಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬಂಗೆರೆ ನಿವಾಸಿ ಸರಸ್ವತಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ದಾಖಲೆಗಳನ್ನು ಪರಿಶೀಲಿಸಿ …

Read More »

ಶಾಹು ನಗರ ವಂದನ ಕೊಲೊನಿಯಲ್ಲಿ ಎಲ್ಲಿ ನೋಡಿದರಲ್ಲಿ ಗಬ್ಬೆದ್ದು ನಾರುತ್ತಿರುವ ಕೊಳಚೆಗಳು ರಸ್ತೆ ಪಕ್ಕದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯಗಳು

ಬೆಳಗಾವಿಯನ್ನು ಎರಡನೇ ರಾಜಧಾನಿ ಸ್ಮಾರ್ಟ ಸಿಟಿ ಕುಂದಾನಗರಿ ಹಂಗೆ ಹಿಂಗೇ ಅಂತಾ ವರ್ಣಿಸುತ್ತಾರೆ ಆದರೆ ನಗರದಲ್ಲಿ ಕೆಲವೊಂದಿಷ್ಟು ಬೇಜವಾಬ್ದಾರಿ ಇಲಾಖೆ ಬೇಜವಾಬ್ದಾರಿ ಅಧಿಕಾರಿಗಳು ಬೆಳಗಾವಿಯನ್ನು ಸ್ವಚ್ಛವಾಗಿಡಲು ಸಹಕರಿಸುತ್ತಿಲ್ಲ ಬೆಳಗಾವಿ ಎಲ್ಲಾ ರಂಗದಲ್ಲೂ ತನ್ನ ಪ್ರಾಮುಖ್ಯತೆಯನ್ನು ಪಡೆದಿದೆ ವೀರ ರಾಣಿ ಕಿತ್ತೂರು ಚನ್ನಮ್ಮಾ ಸಂಗೊಳ್ಳಿ ರಾಯಣ್ಣ ರಂತಹ ದೇಶಭಕ್ತರ ಹುಟ್ಟಿದ ನಾಡಿದು ಬೆಳಗಾವಿ ರಾಜಕಾರಣ ಇಡೀ ರಾಜ್ಯಕ್ಕೆ ಒಂತರಾ ಡಿಫರೆಂಟ್ ಸರ್ಕಾರವನ್ನು ಕಟ್ಟುವುದರ ಜೊತೆಗೆ ಕೆಡುವುದರಲ್ಲಿ ನೈಪುಣ್ಯ ಹೊಂದಿದೆ ಎರಡೆರೆಡು ಸಚಿವರನ್ನು …

Read More »

ಮತ್ತೆ 21 ತಾಲೂಕುಗಳ ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ?

ಬೆಂಗಳೂರು : 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಕೆಲವು ತಾಲೂಕುಗಳು ಬರಪೀಡಿತವಾಗಿದ್ದರೂ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಸರಕಾರ ಇದೀಗ ಮತ್ತೆ 21 ತಾಲೂಕುಗಳನ್ನು ಗುರುತಿಸಿ ಮರು ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.   ಇದೀಗ ಮತ್ತೆ 21 ತಾಲೂಕುಗಳನ್ನು ಗುರುತಿಸಿ ಮರು ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.ಬೆಳಗಾವಿ, ಖಾನಾಪುರ, ಸಿದ್ದಾಪುರ, ದಾಂಡೇಲಿ, ಚಾಮರಾಜ ನಗರ, ಕೃಷ್ಣರಾಜ ನಗರ, ಯಳಂದೂರು, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, …

Read More »

ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ತನ್ನು ನಿಲ್ಲಿಸಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ : ಸಚಿವ ಸತೀಶ್​ ಜಾರಕಿಹೊಳಿ

ಚಿಕ್ಕೋಡಿ : ಕೇಂದ್ರದಿಂದ ಬರುವ ವಿದ್ಯುತ್ ಹಠಾತ್ತನೆ ನಿಲ್ಲಿಸಿದ ಪರಿಣಾಮವಾಗಿ ರಾಜ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.   ಸೋಮವಾರ ಸಂಜೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ ನಿಲ್ಲಿಸಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಳೆದ ಮೂರು ದಿನಗಳಿಂದ ವಿದ್ಯುತ್ ಅಭಾವ ಕಂಡುಬಂದಿದೆ. ನೀರಿನ ಅಭಾವದಿಂದ ಕೆಲವು ಕಡೆ ವಿದ್ಯುತ್ ತಯಾರಿಕೆ ಆಗುತ್ತಿಲ್ಲ. …

Read More »