Breaking News

ನಾಡಿನ ಶಕ್ತಿ ದೇವತೆಯಲ್ಲಿ ಒಬ್ಬಳಾದ ಸವದತ್ತಿ ಎಲ್ಲಮ್ಮಾ ದೇವಿಗೆ ಇಂದು ವಿಷೇಶ ಪೂಜಾ ಅಲಂಕಾರ

ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮ ದೇವಸ್ಥಾನದಲ್ಲಿ ಶರ ನವರಾತ್ರಿ ಹಬ್ಬದ ಅಂಗವಾಗಿ ಘಟಸ್ಥಾಪನೆ ಮಾಡಲಾಯಿತು. ನಾಡಿನ ಶಕ್ತಿ ದೇವತೆಯಲ್ಲಿ ಒಬ್ಬಳಾದ ಸವದತ್ತಿ ಎಲ್ಲಮ್ಮಾ ದೇವಿಗೆ ಇಂದು ವಿಷೇಶ ಪೂಜಾ ಅಲಂಕಾರ ,ಅಭಿಷೇಕ ನೆರವೆರಿಸುವ ಮೂಲಕ ಘಟಸ್ಥಾಪನೆ ಮಾಡಲಾಯಿತು. ಸವದತ್ತಿ ಎಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸಿ ದೀಪಕ್ಕೆ ಎಣ್ಣೆ ಹಾಕಿದ ನಂತರ ಭಕ್ತರು ತಮ್ಮ ಮನೆಗಳಲ್ಲಿ ಘಟಸ್ಥಾಪನೆ ಮಾಡುವ ಪ್ರತೀತಿ ಇರುವದರಿಂದ ಇಂದು ಬೆಳಗಿನ ಜಾವ ಸಾವಿರಾರು ಜನ ದೇವಿ ದರ್ಶನ ಮಾಡಿ …

Read More »

ನಾಡಹಬ್ಬದ ಮಹತ್ವ ಕಡಿಮೆಯಾಗಬಾರದೆಂದು ಸಾಂಪ್ರದಾಯಿಕ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ದಸರಾ ಆಚರಿಸುತ್ತಿಲ್ಲ. ಆದ್ರೆ ದಸರಾ ಮಹತ್ವಕ್ಕೆ ಯಾವುದೇ ಕುಂದು ಉಂಟಾಗದಂತೆ ಸಾಂಪ್ರದಾಯಿಕವಾಗಿ ನಾಡಹಬ್ಬವನ್ನು ಸರ್ಕಾರ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ದಸರಾ ಹಬ್ಬಕ್ಕೆ ನಾದಬ್ರಹ್ಮ ಹಂಸಲೇಖ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮುಖ್ಯಮಂತ್ರಿ ಅವರು ಭಾಷಣ ಮಾಡಿದರು. ಈ ವೇಳೆ, ದುರಾದೃಷ್ಟವಶಾತ್​ ಈ ಬಾರಿ ಮಳೆಯಾಗಲಿಲ್ಲ. ಬರಗಾಲ ಬಂದಿದೆ. …

Read More »

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: ಡೆತ್‌ನೋಟ್‌ ಆಧರಿಸಿ ಏಳು ಜನರ ವಿರುದ್ಧ ಎಫ್​ಐಆರ್ ದಾಖಲು

ಕೊಪ್ಪಳ: ಗುತ್ತಿಗೆದಾರರ ಉಪಗುತ್ತಿಗೆ ಕೆಲಸ ಮಾಡಿಕೊಂಡು ಹಣಕಾಸಿನ ತೊಂದರೆಗೆ ಸಿಲುಕಿದ್ದ ಪರಿಣಾಮ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನು ಬರೆದಿಟ್ಟಿದ್ದ ಡೆತ್‌ನೋಟ್‌ ಆಧರಿಸಿ ಏಳು ಜನರ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಶನಿವಾರ ಎಫ್ ಐಆರ್ ದಾಖಲಿಸಲಾಗಿದೆ.   ಕೊಪ್ಪಳದ ಬಿ ಟಿ ಪಾಟೀಲ ನಗರದ ನಿವಾಸಿ ರಾಜೀವ ಬಗಾಡೆ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡವ. ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದರು. ಮನೆಯವರು ಗಮನಿಸಿ ಅವರನ್ನು ಹುಬ್ಬಳ್ಳಿಯ …

Read More »

ಐವರು ಮತದಾರರಿರುವ ಈ ಮತಗಟ್ಟೆ ದೇಶದಲ್ಲೇ ಅತಿ ಚಿಕ್ಕದು; ಎಲ್ಲಿದೆ ಗೊತ್ತಾ?

ರಾಯಪುರ (ಛತ್ತೀಸ್​ಗಢ) : ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅಮೂಲ್ಯ. ಹೀಗಾಗಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ, ಚುನಾವಣಾ ಆಯೋಗ, ಸಂಘಸಂಸ್ಥೆಗಳು ಜನರಲ್ಲಿ ಭಿನ್ನವಿಸಿಕೊಳ್ಳುತ್ತವೆ. ಓರ್ವ ಮತದಾರ ಇದ್ದರೂ, ಅಲ್ಲಿ ಚುನಾವಣಾಧಿಕಾರಿಗಳು ಕೆಲಸ ಮಾಡಿ ಅವರ ಮತವನ್ನು ಪಡೆದುಕೊಳ್ಳುತ್ತಾರೆ. ಇಂಥದ್ದೇ ಒಂದು ಮತಗಟ್ಟೆ ಛತ್ತೀಸ್​​ಗಢದಲ್ಲಿದೆ. ಇಲ್ಲಿ ಕೇವಲ 5 ಮತದಾರರಿದ್ದು, ಇದು ದೇಶದಲ್ಲಿಯೇ ಅತಿ ಚಿಕ್ಕ ಮತಗಟ್ಟೆ ಎಂಬ ಖ್ಯಾತಿ ಹೊಂದಿದೆ. ಛತ್ತೀಸ್‌ಗಢದ ಮೊದಲ ವಿಧಾನಸಭಾ ಕ್ಷೇತ್ರವಾದ ಭರತ್‌ಪುರ್ ಸೋನ್‌ಹತ್‌ನ ಶೆರಾದಂಡ್ ಎಂಬ …

Read More »

ರಾಶಿ ಭವಿಷ್ಯ ನಿಮ್ಮ ಪರಿಶ್ರಮಕ್ಕೆ ಫಲ ಸಿಗುವ ಶುಭ ದಿನ

ಮೇಷ: ಈ ವಾರದಲ್ಲಿ ವ್ಯವಹಾರದಲ್ಲಿ ಸಾಕಷ್ಟು ಸಕ್ರಿಯರಾಗಲಿದ್ದೀರಿ. ದೂರದ ಊರುಗಳಿಗೆ ಪ್ರಯಾಣಿಸಲು, ಹೊಸ ವ್ಯಕ್ತಿಗಳನ್ನು ಸಂಪರ್ಕಿಸಲು ಮತ್ತು ಹಳೆಯ ಸಂಬಂಧಗಳನ್ನು ಪರಿಶೋಧಿಸಲು ನೀವು ಯತ್ನಿಸಲಿದ್ದು ನಿಮ್ಮ ವ್ಯವಹಾರಕ್ಕೆ ಒಳ್ಳೆಯ ಡೀಲ್‌ ಅಂತಿಮಗೊಳಿಸಲಿದ್ದೀರಿ. ಉದ್ಯೋಗಿಗಳು ಸಹ ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ಕೆಲವು ಎದುರಾಳಿಗಳು ತಮ್ಮ ತಲೆ ಎತ್ತಬಹುದು. ಆದರೆ ನೀವು ತಾಳ್ಮೆಯಿಂದ ಇದ್ದು ನಿಮ್ಮ ವ್ಯವಹಾರಕ್ಕೆ ಮಾತ್ರವೇ ಗಮನ ನೀಡಬೇಕು. ಕಾಲ ಕಳೆದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವೈವಾಹಿಕ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. …

Read More »

ನಿಂತಿದ್ದ 2 ಖಾಸಗಿ ಬಸ್​ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲು

ಕಲಬುರಗಿ: ಖಾಸಗಿ ಕಂಪನಿಗೆ ಸೇರಿದ ಎರಡು ಸ್ಲೀಪರ್ ಬಸ್​ಗಳಿಗೆ ಬೆಂಕಿ ತಗುಲಿ ಧಗಧಗಿಸಿ ಸುಟ್ಟು ಕರಗಲಾದ ಘಟನೆ ಕಲಬುರಗಿ ನಗರದ ಹಾಗರಗಾ ರಸ್ತೆಯ ಮಹೆಫಿಲ್​ ಎ ಖಾಸ್ ಡಾಬಾದ ಬಳಿ ಶನಿವಾರ ನಡೆದಿದೆ. ಅಕ್ಕಪಕ್ಕದಲ್ಲಿ ನಿಂತಿದ್ದ ಎರಡು ಬಸ್​ಗಳು ಬೆಂಕಿಯ ಕೆನ್ನಾಲೆಗೆಯಿಂದ ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ದಟ್ಟವಾದ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವ …

Read More »

ಕ್ಷುಲ್ಲಕ ಕಾರಣಕ್ಕೆ ಹರಿತವಾದ ಕುಡುಗೋಲಿನಿಂದ ಇರಿದು ಕೊಲೆಗೈದ

ರಾಜು ಬಂಡು ನಾಯ್ಕ್ (ವಯಸ್ಸು 32) ಮತ್ತು ಮಾರುತಿ ನಾಯ್ಕ್ (ವಯಸ್ಸು 32) ಎಂಬುವರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ನಡೆಯುತ್ತಿದ್ದಾಗ ರಾಜು ಹರಿತವಾದ ಕುಡುಗೋಲಿನಿಂದ ಮಾರುತಿಯ ಹೊಟ್ಟೆಗೆ ಇರಿದಿದ್ದಾನೆ. ಇದರಿಂದ ಮಾರುತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರುತಿಯನ್ನು ದ್ವಿಚಕ್ರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರುತಿ ನಾಯ್ಕನ ಕುಟುಂಬದವರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಾರುತಿ ನಾಯ್ಕ್ ಸಾವನ್ನಪ್ಪಿದ್ದಾರೆ ಎಂದು …

Read More »

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಅಗರಬತ್ತಿ ಕಾರ್ಖಾನೆ

ಬೆಂಗಳೂರು: ಆನೇಕಲ್​ನ ಅತ್ತಿಬೆಲೆ ಪಟಾಕಿ ಬೆಂಕಿ ದುರಂತ ಮಾಸುವ ಮುನ್ನವೇ ಮತ್ತೇ ಇಂತಹದೇ ಘಟನೆ ನಡೆದಿದೆ. ಇಂದುಬೆಳ್ಳಂಬೆಳಗ್ಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಅಗರಬತ್ತಿ ಫ್ಯಾಕ್ಟರಿಗೆ ಹೊತ್ತಿ ಉರಿದ ಘಟನೆ ಜೋಗುಪಾಳ್ಯದ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಅವಘಡದಿಂದಾಗಿ ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್ ಲಿಕ್ವಿಡ್ ಹರಿದು ರಸ್ತೆಗೂ ಬೆಂಕಿ ಹಬ್ಬಿದ್ದು, 8 ಬೈಕ್​ ಅಗ್ನಿಗಾಹುತಿಯಾಗಿವೆ. ತಕ್ಷಣ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ವಾಹನದ ಸಿಬ್ಬಂದಿ ಬೆಂಕಿ …

Read More »

ದಾವಣಗೆರೆ: ಮತ್ತಿ ಗ್ರಾಮದಲ್ಲಿ ವಾಂತಿ – ಭೇದಿಯಿಂದ ಇಬ್ಬರ ಸಾವು

ದಾವಣಗೆರೆ: ತಾಲೂಕಿನ ಮತ್ತಿ ಗ್ರಾಮದ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಒಂದೇ ವಾರದಲ್ಲಿ ಇಬ್ಬರು ವೃದ್ಧರು ವಾಂತಿಬೇಧಿಯಿಂದ ಸಾವನಪ್ಪಿದ್ದಾರೆ ಎಂಬ ಆರೋಪವನ್ನು ಇಲ್ಲಿನ ಗ್ರಾಮಸ್ಥರು ಮಾಡುತ್ತಿದ್ದಾರೆ. ವಾಂತಿ – ಭೇದಿಯಿಂದ ಕಳೆದ ಶನಿವಾರ ಮತ್ತು ಭಾನುವಾರ ಮತ್ತಿ ಗ್ರಾಮದ (80) ವರ್ಷದ ಶಾಂತಮ್ಮ ಹಾಗೂ (70) ವರ್ಷದ ಸೋಮಣ್ಣ ಎಂಬವರು ತೀವ್ರ ಅಸ್ವಸ್ಥರಾಗಿ ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈಗಾಗಲೇ ಗ್ರಾಮದಲ್ಲಿ 30-40 ಜನ ವಾಂತಿ – ಭೇದಿಯಿಂದ …

Read More »

ಲಷ್ಕರ್-ಎ-ತೊಯ್ಬಾ ಇಬ್ಬರು ಭಯೋತ್ಪಾದಕರ ಬಂಧನ: ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳ ವಶಕ್ಕೆ

ಅಮೃತಸರ (ಪಂಜಾಬ್): ಕೇಂದ್ರ ಗುಪ್ತಚರ ಸಂಸ್ಥೆಗಳ ನೆರವಿನಿಂದ ಪಂಜಾಬ್​ನ ಎಸ್​ಎಸ್​ಒಸಿ ತಂಡವು ಲಷ್ಕರ್-ಎ-ತೊಯ್ಬಾ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಅಮೃತಸರದಲ್ಲಿ ಬಂಧಿಸಿದೆ. ಬಂಧಿತ ಭಯೋತ್ಪಾದಕರಿಂದ 2 ಐಇಡಿಗಳು, 2 ಹ್ಯಾಂಡ್ ಗ್ರೆನೇಡ್‌ಗಳು, 1 ಪಿಸ್ತೂಲ್, 2 ಮ್ಯಾಗಜೀನ್‌ಗಳು, 24 ಕಾರ್ಟ್ರಿಡ್ಜ್‌ಗಳು, 1 ಟೈಮರ್ ಸ್ವಿಚ್, 8 ಡಿಟೋನೇಟರ್‌ಗಳು ಮತ್ತು 4 ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಂಜಾಬ್ …

Read More »