Breaking News

ಬಿಜೆಪಿ- ಜೆಡಿಎಸ್ ಹತಾಶೆಗೆ ಮೇಜರ್ ಆಪರೇಶನ್ ಮಾಡಬೇಕು: ಡಿ ಕೆ ಶಿವಕುಮಾರ್

ಬೆಂಗಳೂರು : “ಬಿಜೆಪಿ ಮತ್ತು ಜನತಾದಳದವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಅವರಿಗೆ ಡಾಕ್ಟರ್‌ಗಳೇ ಮೇಜರ್ ಆಪರೇಶನ್ ಮಾಡಬೇಕು” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಿಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಹಾಗೆಲ್ಲ …

Read More »

ಬೆಳಗಾವಿ ಅಬಕಾರಿ ಅಧಿಕಾರಿಗಳ ಭರ್ಜರಿ ಬೇಟೆ.. ಲಾರಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ

ಬೆಳಗಾವಿ : ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಅಕ್ರಮವಾಗಿ ಮದ್ಯ ಸಾಗಣೆ ಸದ್ದಿಲ್ಲದೇ ನಡೆಯುತ್ತಿದೆ. ಈ ಬೆನ್ನಲ್ಲೇ ಗೋವಾದಿಂದ ತೆಲಂಗಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಜಪ್ತಿ ಮಾಡುವಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.   ಕಳೆದ ತಿಂಗಳು ಲಾರಿಯಲ್ಲಿ ಪ್ಲೈವುಡ್ ನಡುವೆ ಮದ್ಯದ ಬಾಕ್ಸ್​ಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದಾಗ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ, ಅಕ್ರಮ ಜಾಲ‌ ಭೇದಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಈ …

Read More »

ದಸರಾ ರಜೆ ವಿಸ್ತರಣೆಗಾಗಿ ಸಿಎಂಗೆ ಪತ್ರ ಬರೆದ ಶಿಕ್ಷಕರ ಸಂಘ

ಹುಬ್ಬಳ್ಳಿ: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆಲ್ಲ ದಸರಾ ರಜೆ‌ ನೀಡಲಾಗಿದ್ದು, ಮಕ್ಕಳು ರಜೆಯ ಖುಷಿಯಲ್ಲಿದ್ದಾರೆ. ಮತ್ತೊಂದೆಡೆ ದಸರಾ ರಜೆ ಅವಧಿ ಕಡಿತ ಮಾಡಲಾಗಿದೆ. ರಜೆಯನ್ನ ವಿಸ್ತರಣೆ ಮಾಡಬೇಕೆಂದು ಎಂದು ಕೋರಿ ಶಿಕ್ಷಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಹಬ್ಬದ ಮರುದಿನವೇ ಶಾಲೆ ಪ್ರಾರಂಭ: ಇದೇ ತಿಂಗಳ 25ಕ್ಕೆ ಮತ್ತೆ ಶಾಲೆ ಆರಂಭ ಎಂದು ಇಲಾಖೆ ಹೇಳಿದೆ. ಆದರೆ, 24ಕ್ಕೆ ದಸರಾ ಹಬ್ಬ ಇದೆ. ಈ ಹಿಂದೆ …

Read More »

ಧಾರವಾಡ ಜೈಲಿನಲ್ಲಿ ಕೈದಿ ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ

ಧಾರವಾಡ: ಕೈದಿ ಮತ್ತು ಜೈಲು ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿರುವ ಘಟನೆ ಧಾರವಾಡ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಘಟನೆಯಲ್ಲಿ ಜೈಲು ಸಿಬ್ಬಂದಿ ಮತ್ತು ಕೈದಿ ಇಬ್ಬರಿಗೂ ಗಾಯಗಳಾಗಿವೆ. ಮೋಹನ ಸಿದ್ದಪ್ಪ ಬಡಿಗೇರ ಗಾಯಗೊಂಡ ಜೈಲು ಸಿಬ್ಬಂದಿಯಾಗಿದ್ದು, ಪ್ರಶಾಂತ ಅಲಿಯಾಸ್ ಪಾಚು ಹಲ್ಲೆ ಮಾಡಿದ ಕೈದಿಯಾಗಿದ್ದಾನೆ. ಗಾಯಗೊಂಡ ಇಬ್ಬರನ್ನೂ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಅನೇಕ ದಿನಗಳಿಂದ ಧಾರವಾಡ ಕಾರಾಗೃಹದಲ್ಲಿದ್ದ ಪ್ರಶಾಂತ ಎಂಬ ಕೈದಿ ಬಾಚಣಿಕೆಯನ್ನೇ ಚಾಕೂವಿನಂತೆ ಮಾಡಿಕೊಂಡು ಜೈಲಿನ …

Read More »

ಇಸ್ರೇಲ್​​ನಿಂದ ತಾಯ್ನಾಡಿಗೆ ಬಂದ ಬೆಳಗಾವಿ ಯುವಕ: ಯುದ್ಧದ ಭಯಾನಕತೆ ಬಿಚ್ಚಿಟ್ಟ ‘ಮಹಾವೀರ’

ಚಿಕ್ಕೋಡಿ (ಬೆಳಗಾವಿ): ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಬೆಳಗಾವಿಯ ಜಿಲ್ಲೆಯ ಯುವಕ ಸುರಕ್ಷಿತವಾಗಿ ಮರಳಿ ತಮ್ಮೂರಿಗೆ ಹಿಂತಿರುಗಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಸರ್ಕಾರದ ಆಪರೇಷನ್ ಅಜಯ್ ಕಾರ್ಯಾಚರಣೆ ಮುಂದುವರಿಸಿದ್ದು, ಅದರ ನೆರವಿನಿಂದ ಯುವಕ ತಾಯ್ನಾಡಿಗೆ ಮರಳಿದ್ದಾನೆ. ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ಮಹಾವೀರ ಹಲಕರ್ಣಿ ಎಂಬ ಯುವಕ ಭಾನುವಾರ ತಮ್ಮೂರಿಗೆ ಮರಳಿ ಬಂದಿದ್ದಾರೆ. ಇಸ್ರೇಲ್​​ ದೇಶದ ಬೀರಶೇವಾ ಪ್ರದೇಶದ ಬೆನ್ ಗೋರಿನ್ ವಿಶ್ವವಿದ್ಯಾಲಯದಲ್ಲಿ …

Read More »

ಕಿತ್ತೂರು ಉತ್ಸವದ ಸಿದ್ಧತೆ ಪರಿಶೀಲಿಸಿದ ಡಿಸಿ; ಕೋಟೆ ಆವರಣ ಸ್ವಚ್ಛತೆ, ದೀಪಾಲಂಕಾರಕ್ಕೆ ಸೂಚನೆ

ಬೆಳಗಾವಿ : ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣ, ಕೆರೆ, ಕುಸ್ತಿ ಕಣ, ಮಾಧ್ಯಮ‌ ಕೇಂದ್ರ, ವಸ್ತು ಪ್ರದರ್ಶನ ಮಳಿಗೆ, ಆಹಾರ ಮಳಿಗೆ, ಕೋಟೆ ಆವರಣ ಸ್ವಚ್ಛತೆ, ಪಾರ್ಕಿಂಗ್, ಬಂದೋಬಸ್ತ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಪರಿಶೀಲಿಸಿದ್ದು, ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.   ಚ.ಕಿತ್ತೂರಿನ ಕೋಟೆ ಆವರಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯೂ …

Read More »

ಸೋಷಿಯಲ್​ ಮೀಡಿಯಾದ ವಿಡಿಯೋ ನೋಡಿ ಬಂಗಾರದಂಥ ಬೆಳೆ ಬೆಳೆದ ದಂಪತಿ

ಚಿಕ್ಕೋಡಿ: ಕೃಷಿಯಲ್ಲಿ ಲಾಭವಿಲ್ಲ ಎಂದು ಹೊಲಗದ್ದೆ ಮಾರಿ ಪಟ್ಟಣ – ನಗರ ಪ್ರದೇಶ ಸೇರುವವರ ನಡುವೆ ಇಲ್ಲೊಬ್ಬ ರೈತ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ, ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬಾ ಆದಾಯ ಪಡೆದುಕೊಂಡು ಉಳಿದ ರೈತರಿಗೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ್ ಗ್ರಾಮದ ರಾವಸಾಬ್ ಅಪ್ಪಾಸಾಬ ಐಗಳಿ ಎಂಬುವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್​ ಬೆಳೆದು ವರ್ಷಕ್ಕೆ 24 ಲಕ್ಷ ಆದಾಯವನ್ನು …

Read More »

ಕಾಂಗ್ರೆಸ್​​ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿ : ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಇದು ಲೂಟಿ ಸರ್ಕಾರ, 80 ಪರ್ಸೆಂಟ್ ಕಮಿಷನ್ ಸರ್ಕಾರ, ಎಟಿಎಂ ಸರ್ಕಾರ ಎಂದೆಲ್ಲ ಆರೋಪಿಸಿ ತಮ್ಮ ಸಿಟ್ಟನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದೆ ಮಂಗಲಾ ಅಂಗಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, …

Read More »

ನಟಿ ಜಯಪ್ರದಾ ಕೇಸ್: ಕಾರ್ಮಿಕರಿಗೆ ಇಎಸ್‌ಐ ಪಾವತಿಸಿದರೆ ಜೈಲುಶಿಕ್ಷೆ ರದ್ದು- ಮದ್ರಾಸ್​ ಹೈಕೋರ್ಟ್​

ಚೆನ್ನೈ (ತಮಿಳುನಾಡು): ಖ್ಯಾತ ನಟಿ ಜಯಪ್ರದಾ ಅವರ ಇಎಸ್​ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ವಿನಾಯಿತಿಯೊಂದನ್ನು ನೀಡಲು ಸಜ್ಜಾಗಿದೆ. ಕಾರ್ಮಿಕರಿಗೆ ನೀಡಬೇಕಾದ ಬಾಕಿ ಇರುವ ಇಎಸ್‌ಐ ಅನ್ನು ಸಂಪೂರ್ಣವಾಗಿ ಪಾವತಿಸಿದರೆ, ನಟಿಗೆ ವಿಧಿಸಲಾದ 6 ತಿಂಗಳ ಜೈಲುಶಿಕ್ಷೆಯನ್ನು ರದ್ದುಗೊಳಿಸುವುದಾಗಿ ಹೇಳಿದೆ. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಪ್ರಸಿದ್ಧ ನಟಿ, ಸಂಸತ್​ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನೈನ ಅಣ್ಣಾಸಲೈನಲ್ಲಿ ರಾಮ್​​ಕುಮಾರ್ ಮತ್ತು ರಾಜ್​​ಬಾಬು ಅವರೊಂದಿಗೆ ಥಿಯೇಟರ್​ ನಡೆಸುತ್ತಿದ್ದಾರೆ. ಆದ್ರೆ ಕೆಲ ವರ್ಷಗಳಿಂದ ಥಿಯೇಟರ್ ಕಾರ್ಮಿಕರಿಗೆ …

Read More »

ಹೆತ್ತ ಮಗಳನ್ನೇ ನೀರಿನ ಸಂಪಿಗೆ ತಳ್ಳಿ ಕೊಲೆ ಮಾಡಿದ ಹೆತ್ತವ್ವ

ರಾಯಚೂರು: ಮಾನಸಿಕ ಅಸ್ವಸ್ಥೆಯಾಗಿರುವ ಹೆತ್ತ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ಕವಿತಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.   ಜಿಲ್ಲೆಯ ಸಿರವಾರ ತಾಲೂಕಿನ ದೋತ್ರಬಂಡಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು 3ನೇ ತರಗತಿಯ ಓದುತ್ತಿದ್ದ ಶ್ರೀದೇವಿ ಎಂದು ಗುರುತಿಸಲಾಗಿದೆ. ತಾಯಿ ಲಲಿತಾ ಎಂಬ ಆರೋಪಿ ತನ್ನ ಮಗಳನ್ನು ತನ್ನ ಕೈಯಿಂದಲೇ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಮನೆಯ ಪಕ್ಕದಲ್ಲಿ ಇದ್ದ ನೀರಿನ …

Read More »