Breaking News

ಚಿನ್ನಸ್ವಾಮಿಯಲ್ಲಿ ಇಂದು ಆಸ್ಟ್ರೇಲಿಯಾ – ಪಾಕ್ ಮುಖಾಮುಖಿ: ಉಭಯ ತಂಡಗಳಿಗೆ ಮಹತ್ವದ ಪಂದ್ಯ

ಬೆಂಗಳೂರು: ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್‌ನ 18ನೇ ಪಂದ್ಯಕ್ಕೆ ರಾಜಧಾನಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಟೂರ್ನಿಯಲ್ಲಿ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಉಭಯ ತಂಡಗಳು ಇಂದು ಚಿನ್ನಸ್ವಾಮಿಯಲ್ಲಿ ಸೆಣಸಾಡಲಿದ್ದು, ಕ್ರಿಕೆಟ್ ಅಭಿಮಾನಿಗಳ ಕಾತರವನ್ನ ಮತ್ತಷ್ಟು ಹೆಚ್ಚಿಸಿದೆ. ಆಸ್ಟ್ರೇಲಿಯಾ Vs ಪಾಕ್: ಈವರೆಗೂ ಏಕದಿನ ಮಾದರಿಯಲ್ಲಿ 107 …

Read More »

ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್: ಅದ್ಭುತ ಪ್ರೇಮಕಥೆ ವೀಕ್ಷಿಸಲು ಪ್ರೇಕ್ಷಕರ ಕಾತರ

ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ ದಿನಾಂಕವನ್ನು ನಟ ರಕ್ಷಿತ್​ ಶೆಟ್ಟಿ ಬಹಿರಂಗಪಡಿಸಿದ್ದಾರೆ. ರಕ್ಷಿತ್​​ ಶೆಟ್ಟಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ಏಳು ಬೀಳುಗಳನ್ನು ಎದುರಿಸಿ, ಪ್ರಸ್ತುತ ಸ್ಟಾರ್​ ನಟನಾಗಿ ಹೊರ ಹೊಮ್ಮಿದ್ದಾರೆ. ರಕ್ಷಿತ್​​ ಶೆಟ್ಟಿ ಮುಖ್ಯಭೂಮಿಕೆಯ ಬಹುತೇಕ ಸಿನಿಮಾಗಳು ಹಿಟ್ ಸಾಲಿಗೆ ಸೇರಿವೆ. ಪ್ರತೀ ಸಿನಿಮಾಗಳು ಕೂಡ ಅದ್ಭುತ ಅಂತಾರೆ ಅಭಿಮಾನಿಗಳು. ಪ್ರತೀ ಪಾತ್ರಗಳಿಗೂ ಅಚ್ಚುಕಟ್ಟಾಗಿ ಜೀವ ತುಂಬೋ ಮುಖೇನ ಆ ಪಾತ್ರವನ್ನು, ಸಿನಿಮಾವನ್ನು ವಿಶೇಷವಾಗಿಸುತ್ತಾರೆ. ಕಥೆ …

Read More »

ಬಾಗಲಕೋಟೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ: ಅ.19 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಬಾಗಲಕೋಟೆಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 23 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಕಾಲಾವಕಾಶವಿದೆ. ಅಧಿಸೂಚನೆಹುದ್ದೆಗಳ ವಿವರ: ಬಾದಾಮಿಯಲ್ಲಿ 3, ಬಾಗಲಕೋಟೆಯಲ್ಲಿ 2, ಬೀಳಗಿಯಲ್ಲಿ 2, ಇಲಕಲ್ಲ 2, ಗುಳೇದ ಗುಡ್ಡ 2, ಹುನಗುಂದ 4, ಜಮಖಂಡಿ 3, ಮುಧೋಳ 3, ರಬಕವಿ, …

Read More »

ಕಳ್ಳತನ‌ದಲ್ಲಿ ಭಾಗಿಯಾದ ಪೊಲೀಸ್ ಕಾನ್​ಸ್ಟೆಬಲ್; ಸೇವೆಯಿಂದ ವಜಾಗೊಳಿಸಲು ಶಿಫಾರಸು

ಬೆಂಗಳೂರು: ಕ್ಯಾಸಿನೋ ಆಟಕ್ಕಿಳಿದು ನಷ್ಟಕ್ಕೊಳಗಾಗಿ ಲಕ್ಷಾಂತರ ರೂ. ಸಾಲ ತೀರಿಸಲು ಮನೆ ಕಳವು ಮಾಡಿದ ಆರೋಪದಡಿ ಪೊಲೀಸ್ ಕಾನ್​ಸ್ಟೆಬಲ್‌ನನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ಸೇವೆಯಿಂದ ವಜಾಗೊಳಿಸಲು ಪೊಲೀಸ್ ಇಲಾಖೆ ಶಿಫಾರಸು ಮಾಡಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮೂಲದ ಯಲ್ಲಪ್ಪ 2023ರ ಫೆಬ್ರವರಿಯಲ್ಲಿ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಅಭಿಷೇಕ್ ಅಲಿಯಾಸ್ ಅಭಿ ಜತೆ ಸೇರಿ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಆದರೆ, ಕಚೇರಿಯಲ್ಲಿಟ್ಟಿದ್ದ ಅಲಾರಾಂ ಗಂಟೆ ಜೋರಾಗಿ …

Read More »

ನಗರ ಪ್ರದೇಶಗಳಲ್ಲಿನ‌ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡಲು ಸರ್ಕಾರ ಮುಂದಾಗಿದೆ.

ಬೆಂಗಳೂರು: ಹೆಚ್ಚಿನ ಆದಾಯ ಸಂಗ್ರಹದ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲಿನ‌ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 2,000 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಹೊರತುಪಡಿಸಿ ನಗರಪಾಲಿಕೆ, ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿ ಅಕ್ರಮ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿ ಸೌಲಭ್ಯ ಪಡೆಯುತ್ತಿರುವ ಮಾಲೀಕರಿಗೆ ನಿರ್ವಹಣಾ ಶುಲ್ಕ ವಿಧಿಸುವ ಕುರಿತಂತೆ ಗುರುವಾರ ನಡೆದ ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಲಾಯಿತು. ಅರಣ್ಯ, ಜೀವಿಶಾಸ್ತ್ರ …

Read More »

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 26,000 ರನ್‌ ಗಳಿಕೆ!

ಹೈದರಾಬಾದ್: ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ ಹೆಸರಿಗೆ ತಕ್ಕಂತೆ ಮತ್ತೊಂದು ಇನಿಂಗ್ಸ್​ ಕಟ್ಟಿದರು. ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಅತಿ ವೇಗವಾಗಿ 26 ಸಾವಿರ ರನ್​ ಪೂರೈಸಿದ ಆಟಗಾರ ಎನಿಸಿಕೊಂಡರು. ಈ ಮೂಲಕ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನೂ ಮುರಿದರು. ಭಾರತದ ಸ್ಟಾರ್ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ 77 ರನ್ ಗಳಿಸಿದಾಗ …

Read More »

ಘೋಸ್ಟ್​’ ಸಿನಿಮಾದಲ್ಲಿ ಶಿವಣ್ಣ ಆಯಕ್ಟಿಂಗ್​ ನೋಡಿ ಮಗಳು ನಿವೇದಿತಾ ಹೇಳಿದ್ದೇನು?

ಬೆಂಗಳೂರು: ಟೈಟಲ್​, ಕಾಸ್ಟ್, ಟ್ರೇಲರ್​​ನಿಂದಲೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸದ್ದು ಮಾಡಿದ್ದ ‘ಘೋಸ್ಟ್’ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿ ಭರ್ಜರಿ ಓಪನಿಂಗ್​ ಕೂಡಾ ಪಡೆದುಕೊಂಡಿದೆ. ಮಧ್ಯರಾತ್ರಿಯಿಂದಲೇ ‘ಘೋಸ್ಟ್​’ ಸ್ಪೆಷಲ್​ ಶೋನ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ನೋಡಿದ ಶಿವಣ್ಣ ಅಭಿಮಾನಿಗಳು ಹ್ಯಾಟ್ರಿಕ್​ ಹೀರೋನ ಗ್ಯಾಂಗ್​ಸ್ಟರ್​ ಅವತಾರಕ್ಕೆ ಫಿದಾ ಆಗಿದ್ದಾರೆ. ಶಿವಣ್ಣ ಮೂರು ಶೇಡ್​ನಲ್ಲಿ ಕಾಣಿಸಿಕೊಂಡಿರುವ ‘ಘೋಸ್ಟ್’​ ಸಿನಿಮಾವನ್ನು ನಿವೇದಿತಾ ಶಿವ ರಾಜ್​ಕುಮಾರ್​, ಧೀರೇನ್​ ರಾಮ್​ …

Read More »

ದಸರಾ ಪ್ರಯುಕ್ತ 2 ಸಾವಿರಕ್ಕೂ ಹೆಚ್ಚು ಕೆಎಸ್​ಆರ್​ಟಿಸಿ ವಿಶೇಷ ಬಸ್ ಸೌಲಭ್ಯ; ಪೂಜೆ ಸಲ್ಲಿಸಿ ಚಾಲನೆ

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಹಾಗು ದಸರಾ ರಜೆ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ 2,000ಕ್ಕೂ ಹೆಚ್ಚು ಬಸ್​ಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್​ಆರ್​ಟಿಸಿ) ಕಲ್ಪಿಸಿದ್ದು, ನಿಗಮದ ಎಲ್ಲಾ ವಿಭಾಗಗಳಲ್ಲಿ ದಸರಾ ವಿಶೇಷ ಕಾರ್ಯಾಚರಣೆಗೆ‌ ವಿಧ್ಯುಕ್ತವಾಗಿ‌ ಬಸ್​ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.   ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ಅಲಂಕೃತ ವಾಹನಗಳಿಗೆ …

Read More »

ನ್ಯಾಯಾಲಯದ ಆದೇಶವಿದ್ದರೂ, ಪತಿಯೊಂದಿಗೆ ಬಾರದ ಪತ್ನಿ: ವಿಚ್ಛೇದನಕ್ಕೆ ಆಧಾರ- ಹೈಕೋರ್ಟ್

ಬೆಂಗಳೂರು: ಪತಿಯನ್ನು ಸೇರುವಂತೆ ನ್ಯಾಯಾಲಯದ ಆದೇಶವಿದ್ದರೂ ಸಹ ಪತ್ನಿ ಅದನ್ನು ಪಾಲಿಸದಿರುವುದು ವಿವಾಹ ವಿಚ್ಚೇದನಕ್ಕೆ ಆಧಾರವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್.ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ್ ಅವರಿದ್ದ ವಿಭಾಗೀಯಪೀಠ ಇತ್ತೀಚೆಗೆ ಈ ಆದೇಶ ನೀಡಿ, ವಿಚ್ಚೇದನ ಮಂಜೂರು ಮಾಡಿತು. ನ್ಯಾಯಾಲಯ ವೈವಾಹಿಕ ಹಕ್ಕು ಪುನರ್‌ಸ್ಥಾಪನೆ ಸಂಬಂಧ ಏಕಪಕ್ಷೀಯ ಆದೇಶ ಹೊರಡಿಸಿ ಪತಿಯನ್ನು ಸೇರುವಂತೆ ಪತ್ನಿಗೆ ಆದೇಶಿಸಿದೆ. ಪತ್ನಿ ಒಂದುವರೆ ವರ್ಷ ಕಳೆದರೂ ಆದೇಶವನ್ನು …

Read More »

ಮಹಾರಾಷ್ಟದ ಗಡಿ ತಾಲೂಕು ಜತ್ತದಲ್ಲಿ ಕನ್ನಡದ ಶಾಲೆಗಳಲ್ಲಿ ಶಿಕ್ಷರ ಕೊರತೆ

ಚಿಕ್ಕೋಡಿ: ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರದ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ. ಗಡಿನಾಡು ಕನ್ನಡಿಗರ ಒತ್ತಾಯದ ಮೇರೆಗೆ ದಶಕಗಳ ಹಿಂದೆ ಕನ್ನಡ ಭಾಷೆ ಕಲಿಕೆಯ ಶಾಲೆಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಆ ಶಾಲೆಗಳಿಗೆ ಶಿಕ್ಷಕರ ಕೊರತೆ ಇರುವುದರಿಂದ ಕ್ರಮೇಣ ಮಕ್ಕಳು ಮರಾಠಿ ಭಾಷೆಗಳತ್ತ ಒಲವು ತೋರುತ್ತಿದ್ದಾರೆ. ಪರಿಣಾಮ, ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವಂತಹ ಕುತಂತ್ರ ನಡೆಸುತ್ತಿದೆ ಎಂದು ಜತ್ತ ತಾಲೂಕಿನ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತ್ತ ತಾಲೂಕಿನಲ್ಲಿ 82 …

Read More »