ಬೆಂಗಳೂರು: 1972ರ ಸೆಕ್ಷನ್ 43ರ ಅಡಿ ನವಿಲು ಗರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನವಿಲು ಗರಿಗಳಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ಭಾರತ ಸರ್ಕಾರ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಸಮಾವೇಶ – ಸಿಐಟಿಇಎಸ್ ನಿಷೇಧಿಸಿದೆ. ಆದರೆ ನೈಸರ್ಗಿಕವಾಗಿ ನವಿಲುಗಳಿಂದ ಉದುರಿದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನುಬಾಹಿರವಲ್ಲ. ಆದರೆ, ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಅದು …
Read More »ಪಠ್ಯ ಪುಸ್ತಕದಲ್ಲಿ ಭಾರತ ಎಂದು ನಮೂದಿಸಿದರೆ ತಪ್ಪೇನಿಲ್ಲ- ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಬದಲಾಗಿ ಭಾರತ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಏನು ನಿರ್ದೇಶನ ಕೊಡುತ್ತೋ ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಇಂಡಿಯಾ ಅಂದರೆ ಹಿಂದೆ ಬ್ರಿಟಿಷರಿಟ್ಟ ಹೆಸರು. ಈಗ ಭಾರತ ಅಂದರೆ ತಪ್ಪೇನಿಲ್ಲ. ಇಂಡಿಯಾ ಅನ್ನುವರು ಭಾರತ ಅಂತಾರೆ. ಭಾರತಕ್ಕೆ ಹೊರದೇಶದಲ್ಲಿ ಇಂಡಿಯಾ ಅಂತಾರೆ. ಪಠ್ಯ ಪುಸ್ತಕಗಳಲ್ಲಿ ಭಾರತ ಎಂದು …
Read More »ಟಗರು ಪಲ್ಯ’ ಸಿನಿಮಾ ರಿಲೀಸ್: ಮಗಳು ಅಮೃತಾ ಜೊತೆ ಸ್ಟೆಪ್ ಹಾಕಿದ ನೆನಪಿರಲಿ ಪ್ರೇಮ್
ಟಗರು ಪಲ್ಯ’ ಸಿನಿಮಾ ರಿಲೀಸ್ ಡಾಲಿ ಧನಂಜಯ್ ನಿರ್ಮಾಣದ ಗ್ರಾಮೀಣ ಸೊಗಡಿನ ಕಥೆ ಹೊಂದಿರುವ ‘ಟಗರು ಪಲ್ಯ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಹೆಚ್ಚಿನ ಥಿಯೇಟರ್ಗಳು ಹೌಸ್ ಫುಲ್ ಆಗಿದೆ. ಚಿತ್ರ ವೀಕ್ಷಿಸಿದ ಸಿನಿಪ್ರೇಮಿಗಳಿಂದ ಕಥೆಗೆ ಮೆಚ್ಚುಗೆ ಸಿಕ್ಕಿದ್ದು, ಈ ವರ್ಷದ ಕನ್ನಡದ ಹಿಟ್ ಸಿನಿಮಾಗಳ ಸಾಲಿನಲ್ಲಿ ‘ಟಗರು ಪಲ್ಯ’ವೂ ಒಂದು ಅಂತಿದ್ದಾರೆ. ಇಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ‘ಟಗರು ಪಲ್ಯ’ ಹೌಸ್ಫುಲ್ ಪ್ರದರ್ಶನ ಕಂಡಿದೆ. …
Read More »ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು: ಹುಲಿ ಉಗುರಿನ ಮಾದರಿ ಪೆಂಡೆಂಟ್ ವಶಕ್ಕೆ
ಬೆಳಗಾವಿ/ಹುಬ್ಬಳ್ಳಿ: ಹುಲಿ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ್ದ ತಮ್ಮ ಪುತ್ರನ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಕುವೆಂಪು ನಗರದಲ್ಲಿ ಇರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಡಿಎಫ್‌ಓ ಶಂಕರ ಕಲ್ಲೋಳಿಕರ್ ಎಸಿಎಫ್ ಸುರೇಶ ತೇಲಿ ನೇತೃತ್ವದ ತಂಡ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್, ಮೃಣಾಲ್ ಹೆಬ್ಬಾಳ್ಕರ್ …
Read More »ಶಾಸಕ ಲಕ್ಷ್ಮಣ್ ಸವದಿ ಪುತ್ರನ ಕೊರಳಿನಲ್ಲೂ ಹುಲಿ ಉಗುರು ಹೋಲುವಂತಹ ಲಾಕೆಟ್
ಚಿಕ್ಕೋಡಿ (ಬೆಳಗಾವಿ): ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹಲವು ಪ್ರಭಾವಿಗಳ ಮನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೆಂಡೆಂಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಡಿಸಿಎಂ ಹಾಗೂ ಅಥಣಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಪುತ್ರನ ಕೊರಳಿನಲ್ಲೂ ಹುಲಿ ಉಗುರು ಹೋಲುವಂತಹ ಲಾಕೆಟ್ ಅನ್ನು ಹಾಕಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮದುವೆ ಸಂದರ್ಭದಲ್ಲಿ ಹುಲಿ ಉಗುರಿನ ರೀತಿ ಇರುವ …
Read More »“ಒಲಿಂಪಿಕ್ಸ್ ಕ್ರೀಡಾಕೂಟ ಆತಿಥ್ಯ ವಹಿಸಲು ಭಾರತ ಸಿದ್ಧ”: ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಿದ ಪ್ರಧಾನಿ ಮೋದಿ
ಪಣಜಿ (ಗೋವಾ): ಮೊದಲ ಬಾರಿಗೆ ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 37ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಿದರು. ದಕ್ಷಿಣ ಗೋವಾದ ಮಾರ್ಗಾವೊದಲ್ಲಿರುವ ಪಂಡಿತ್ ಜವಾಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ಅ. 26ರಿಂದ ನ. 9ರವರೆಗೆ ನಡೆಯಲಿರುವ ಕ್ರೀಡಾಕೂಕ್ಕೆ ದೇಶದ ಅಥ್ಲೀಟ್ಗಳು ಹಸ್ತಾಂತರಿಸಿದ ಆಟಗಳನ್ನು ಪ್ರತಿನಿಧಿಸುವ ಜ್ಯೋತಿ(Infinity Flame) ಯನ್ನು ಸ್ವೀಕರಿಸುವ ಮೂಲಕ ಮೋದಿ ಚಾಲನೆ ನೀಡಿದರು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಭಾರತದ ಸಂಕಲ್ಪ ಹಾಗೂ …
Read More »ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್.. ಅರಣ್ಯಾಧಿಕಾರಿಗಳಿಂದ ತನಿಖೆ
ಸುಳ್ಯ (ದಕ್ಷಿಣ ಕನ್ನಡ): ಕೊರಳಲ್ಲಿ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿರುವ ಪ್ರಕರಣಗಳು ಸದ್ಯ ಸದ್ದು ಮಾಡುತ್ತಿವೆ. ಸುಳ್ಯ ನಗರ ಪಂಚಾಯತ್ ಸಿಬ್ಬಂದಿಯೊಬ್ಬರು ಇದೇ ಮಾದರಿಯ ಪೆಂಡೆಂಟ್ ಧರಿಸಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಅರಣ್ಯ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಶಶಿಕಲಾ ಅವರು ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆಗುತ್ತಿದ್ದು, ಅರಣ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಈಟಿವಿ ಭಾರತದ …
Read More »ಬಿ.ಎಸ್.ಯಡಿಯೂರಪ್ಪಗೆ ‘Z’ ಶ್ರೇಣಿಯ ಭದ್ರತೆ: ಶೀಘ್ರವೇ ಸಿಆರ್ಪಿಎಫ್ ಕಮಾಂಡೋ ಸೆಕ್ಯೂರಿಟಿ
ನವದೆಹಲಿ: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯನ್ನು ಒಳಗೊಂಡಿರುವ ‘ಝೆಡ್’ ಶ್ರೇಣಿಯ ಭದ್ರತೆ ಕಲ್ಪಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶಿಸಿದೆ. ಕರ್ನಾಟಕದಲ್ಲಿ ಮಾತ್ರವೇ ಉನ್ನತ ಭದ್ರತೆಯ ಸೌಲಭ್ಯವನ್ನು ಬಿಎಸ್ವೈ ಹೊಂದಿರಲಿದ್ದು, ಸಿಆರ್ಪಿಎಫ್ ಸಿಬ್ಬಂದಿ ಶೀಘ್ರವೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬಿ.ಎಸ್.ಯಡಿಯೂರಪ್ಪನವರಿಗೆ ಬೆದರಿಕೆ ಇರುವ ಕುರಿತ ಮಾಹಿತಿಯನ್ನು ಗುಪ್ತಚರ ವಿಭಾಗವು ಕೇಂದ್ರ ಗೃಹ ಇಲಾಖೆಯೊಂದಿಗೆ ಹಂಚಿಕೊಂಡಿದೆ. ಇದರ …
Read More »ವಿಜುಗೌಡ ಪಾಟೀಲ್ ನಿವಾಸದಲ್ಲಿ ಅರಣ್ಯಾಧಿಕಾರಿಗಳಿಂದ ತಪಾಸಣೆ
ವಿಜಯಪುರ: ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ (ಗುರುವಾರ) ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಕೆಲಹೊತ್ತು ಶೋಧ ನಡೆಸಿದ್ದಾರೆ. ಜಿಲ್ಲಾ ಉಪ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ಸಿಬ್ಬಂದಿ ಪರಿಶೀಲಿಸಿದರು. ವಿಜುಗೌಡ, ಪುತ್ರ ಶಾಶ್ವತಗೌಡ ಹಾಜರಿದ್ದು …
Read More »ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು.
ಬೆಂಗಳೂರು : ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಇದರಲ್ಲಿ ಪ್ರಾದೇಶಿಕ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಜಾತಿ, ಧರ್ಮ, ಲಿಂಗದವರಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಸಿಎಂ ಮಾತನಾಡಿದರು. ಈ ವೇಳೆ ಕರ್ನಾಟಕ ಎಂದು …
Read More »