Breaking News

ಅಪಾಯಕ್ಕೆ ಸಿಲುಕಿದ್ದ 31 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

ಮಂಗಳೂರು (ದಕ್ಷಿಣ ಕನ್ನಡ) : ನವಮಂಗಳೂರು ಬಂದರಿನಿಂದ 100 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬೋಟ್​ನ್ನು ಪತ್ತೆ ಹಚ್ಚಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಯು 31 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಅ. 24ರಂದು ಗೋವಾ ತೀರದಲ್ಲಿ ಕಾಣಿಸಿಕೊಂಡಿದ್ದ ಈ ಬೋಟ್ ಬಳಿಕ ಕಾಣೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಸಿಬ್ಬಂದಿ ಮೂಲಕ ಹುಡುಕಾಟ ಆರಂಭಿಸಿದರೂ ಪ್ರಯೋಜನವಾಗಲಿಲ್ಲ. ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ, …

Read More »

SSLC ಟಾಪರ್ಸ್​ಗೆ ದಾವಣಗೆರೆ ಸಂಸದರಿಂದ ಗಿಫ್ಟ್

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ಟಾಪರ್ಸ್​ ಆಗಿರುವ ಜಿಲ್ಲೆಯ 9 ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಐದು ದಿನಗಳ ದೆಹಲಿ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದಾರೆ. ಲೋಹದ ಹಕ್ಕಿಯಲ್ಲಿ ಪ್ರಯಾಣಿಸಬೇಕೆಂಬ ವಿದ್ಯಾರ್ಥಿಗಳ ಕನಸು ನನಸು ಮಾಡುತ್ತಿರುವ ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಗೃಹ ಕಚೇರಿಯಲ್ಲಿ ಪ್ರವಾಸಕ್ಕೆ ತೆರಳಲಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಅವರ ಅನಿಸಿಕೆಗಳನ್ನು ಆಲಿಸಿದ ಸಂಸದರು ಬಳಿಕ, ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ. …

Read More »

ಕಾನೂನು ಒಂದು ಶ್ರೇಷ್ಠ ವೃತ್ತಿ ಯಾಕೆಂದರೆ ಅದು ಜನರ ಸೇವೆ ಮಾಡುತ್ತದೆ : ನ್ಯಾಯಮೂರ್ತಿ ಸಿ. ಎಂ. ಜೋಶಿ

ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಭಾನುವಾರ, ಅಕ್ಟೋಬರ್ 26ರಂದು ಇಂಡಕ್ಷನ್ ಕಾರ್ಯಕ್ರಮವನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು. ನ್ಯಾಯಮೂರ್ತಿ ಸಿ. ಎಂ. ಜೋಶಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳಿಗೆ ಮಾತಿನಲ್ಲೂ ಅವರು ತಂತ್ರಜ್ಞಾನದ ಮಹತ್ವ ಮತ್ತು ಅದರ ಕಾನೂನು ವೃತ್ತಿಯ ಬಳಕೆಯನ್ನು ವಿವರಿಸಿದರು. ಓದು ಮತ್ತು ಡ್ರಾಫ್ಟಿಂಗ್ ಕೌಶಲ್ಯಗಳ ಮೇಲೆ ಗಮನಹರಿಸಲು ಸಲಹೆ ನೀಡಿದರು. ವಿದ್ಯಾರ್ಥಿಗಳು ಸೃಜನಾತ್ಮಕ ಮನಸ್ಸುಳ್ಳವರಾಗಿರಬೇಕು ಮತ್ತು ಸಮಯದ …

Read More »

ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶಾಂತಿಸಾಗರ ಪರಂಪರೆಯ ಕಾರ್ಯಕ್ರಮ

ರಾಯಬಾಗ ತಾಲೂಕಿನ ನಸಲಾಪೂರ ಗ್ರಾಮದಲ್ಲಿರುವ ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶಾಂತಿಸಾಗರ ಪರಂಪರೆಯ ಧರ್ಮನಗರಿ , ಪ.ಪೂ. ಆಚಾರ್ಯ ಬಾಹುಬಲಿ ಮುನಿ ಮಹಾರಾಜರ ಪರಮಶಿಷ್ಯರಾದ ಪ.ಪೂ. ಬಾಲಾಚಾರ್ಯ 108 ಡಾ. ಶ್ರೀ ಸಿದ್ಧಸೇನ ಮುನಿಮಹಾರಾಜರ ಪಾವನ ವರ್ಷಾಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

Read More »

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಇಂದು ಕ್ರಾಂತಿ ವೀರ ಶ್ರೀ ಸಂಗೊಳ್ಳಿ ರಾಯಣ್ಣ‌ ಅವರ ಕಂಚಿನ ಮೂರ್ತಿ ಲೋಕಾರ್ಪಣೆ

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಇಂದು ಕ್ರಾಂತಿ ವೀರ ಶ್ರೀ ಸಂಗೊಳ್ಳಿ ರಾಯಣ್ಣ‌ ಅವರ ಕಂಚಿನ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪಾಲ್ಗೊಂಡು, ಮಾತನಾಡಿದರು ಈ‌‌ ಸಂದರ್ಭದಲ್ಲಿ ಕವಲಗುಡ್ಡದ ಪೂಜ್ಯ ಗುರುಗಳಾದ ಶ್ರೀ ಅಮರೇಶ್ವರ ಸ್ವಾಮೀಜಿಯವರು, ಹಡಗಿನಾಳದ ಶ್ರೀ ಮುತ್ತೇಶ್ವರ ಮಹಾಸ್ವಾಮಿಗಳು ಸೇರಿ ಜನಪ್ರತಿನಿಧಿಗಳು ಮತ್ತು ಮುಖಂಡರು ‌ಉಪಸ್ಥಿತರಿದ್ದರು.

Read More »

ಯತೀಂದ್ರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ; ಲೀಡರ್ ಯಾರಾಗಬೇಕು ಅಂತಾ ಹೈಕಮಾಂಡ್ ತೀರ್ಮಾನಿಸುತ್ತೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಮುಂದಿನ ಉತ್ತರಾಧಿಕಾರಿ ಸತೀಶ್​ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಅವರು ಹೇಳಿದ್ದು ಸೈದ್ಧಾಂತಿಕವಾಗಿ ಮಾತ್ರ. ಲೀಡರ್ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ ಕಿತ್ತೂರು ಉತ್ಸವದ ಸಮಾರೋಪ‌ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ. ಈಗ ಅದನ್ನು ಸತೀಶ್ ಜಾರಕಿಹೊಳಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. ಸತೀಶ್​ …

Read More »

ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಿಎಂ

ಬೆಳಗಾವಿ: ಕಿತ್ತೂರು ರಾಣಿ‌ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಬೆಳಗಾವಿ ವಿಮಾನ‌ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆದು ಒಂದು‌ ವರ್ಷವಾದರೂ ಕೇಂದ್ರ‌ ಸರ್ಕಾರ ಇದುವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.‌ ಕಿತ್ತೂರು ರಾಣಿ ಚನ್ನಮ್ಮ 1824ರ ಅಕ್ಟೋಬರ್ 23ರಂದು ಬ್ರಿಟಿಷರ ವಿರುದ್ಧ ಹೋರಾಡಿ ಜಯಗಳಿಸಿದ್ದರು. ಈ ವಿಜಯದ ಸವಿನೆನಪಿಗಾಗಿ ಪ್ರತೀ ವರ್ಷ …

Read More »

ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ ಚುನಾವಣೆ: ಶಾಸಕ ಶಿವರಾಮ್ ಹೆಬ್ಬಾರ್ ಬಣಕ್ಕೆ ಮುನ್ನಡೆ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯಲ್ಲಿ ಪ್ರಕಟಗೊಂಡ ಹಾಗೂ ಮುಂಚೂಣಿಯ ಫಲಿತಾಂಶಗಳ ಪ್ರಕಾರ ಹಾಲಿ ಅಧ್ಯಕ್ಷ ಹಾಗೂ ಶಾಸಕ ಶಿವರಾಮ್ ಹೆಬ್ಬಾರ್ ನೇತೃತ್ವದ ಬಣ ಮುನ್ನಡೆ ಸಾಧಿಸಿದೆ.‌ ಸದ್ಯ 16 ಕ್ಷೇತ್ರಗಳಲ್ಲಿ ಕೇವಲ 7 ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಿದೆ.‌ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಗೆ ಶನಿವಾರ 13 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. ಕಳೆದ ಎರಡು ತಿಂಗಳಿನಿಂದ ನಡೆದ ಚುನಾವಣಾ …

Read More »

ಗಂಗಾವತಿ ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಪ್ರಮುಖ ಆರೋಪಿಗಳು ಅರೆಸ್ಟ್

ಗಂಗಾವತಿ (ಕೊಪ್ಪಳ): ಇಲ್ಲಿನ ಬಿಜೆಪಿ ಯುವ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಇಲ್ಲಿನ ಲಿಂಗರಾಜ್ ಕ್ಯಾಂಪಿನ ರವಿ ಬಸವರಾಜ ಹಾಗೂ ಗುಂಡಮ್ಮ ಕ್ಯಾಂಪಿನ ನಿವಾಸಿ ಗಂಗಾಧರ ಗೌಳಿ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಕಲಬುರಗಿಯ ಹೊರ ವಲಯದಲ್ಲಿ ಆರೋಪಿಗಳ ಚಹರೆ ಪತ್ತೆ ಹಚ್ಚಿ, ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಈ ಮೂಲಕ ಬಿಜೆಪಿ …

Read More »

ಬೆಳಗಾವಿಯ ಜಿಐಟಿಯಲ್ಲಿ ಮೆಟೀರಿಯಲ್ ಟೆಸ್ಟಿಂಗ್ ಪ್ರಯೋಗಾಲಯ ಉದ್ಘಾಟನೆ

ಬೆಳಗಾವಿಯ ಜಿಐಟಿಯಲ್ಲಿ ಮೆಟೀರಿಯಲ್ ಟೆಸ್ಟಿಂಗ್ ಪ್ರಯೋಗಾಲಯ ಉದ್ಘಾಟನೆ ಬೆಳಗಾವಿಯ ಕೆಎಲ್‌ಎಸ್ ಜಿಐಟಿ ಮಹಾವಿದ್ಯಾಲಯ ಮೆಟೀರಿಯಲ್ ಟೆಸ್ಟಿಂಗ್ ಪ್ರಯೋಗಾಲಯ ಉದ್ಘಾಟನೆ ಫಾಸ್‌ರಾಕ್ ಪ್ರಾಯೋಜಕತ್ವದಲ್ಲಿ ನಿರ್ಮಾಣ ವಿವಿಧ ಗಣ್ಯರಿಂದ ನೂತನ ಪ್ರಯೋಗಾಲಯಕ್ಕೆ ಚಾಲನೆ ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ನೂತನ ಮೆಟೀರಿಯಲ್ ಟೆಸ್ಟಿಂಗ್ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ …

Read More »