Breaking News

ಹೊಸ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಮನವಿ

ಗಂಗಾವತಿ(ಕೊಪ್ಪಳ): ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿರಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಮನವಿ ಸಲ್ಲಿಸಿದರು. ಹೊಸಪೇಟೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಗವಿಯಪ್ಪ ಅವರ ನಿವಾಸದಲ್ಲಿ ಭೇಟಿಯಾದ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು, ಈ ಬಗ್ಗೆ ಮನವಿ ಸಲ್ಲಿಸಿ ನೂತನ ಜಿಲ್ಲೆಯ ಅಗತ್ಯತೆಯನ್ನು ಸಿಎಂಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ಸುರೇಶ ಸಿಂಗನಾಳ …

Read More »

ಕೌಟುಂಬಿಕ ಕಲಹ ಹಿನ್ನೆಲೆ: ಮನನೊಂದು ವಿವಾಹಿತ ಯುವಕ ಆತ್ಮಹತ್ಯೆ

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.‌ ನಿಖಿಲ್ ಕುಂದಗೋಳ (28) ಮನೆಯಲ್ಲೆ ಆತ್ಮಹತ್ಯೆಗೆ ಶರಣಾದ ಯುವಕ. ಮೃತ ನಿಖಿಲ್​ ಪ್ರೀತಿ ಎಂಬ ಯುವತಿಯನ್ನು‌ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ, ಕಳೆದ ಕೆಲ‌ ತಿಂಗಳಿಂದ ಪತಿ ಹಾಗೂ ಪತ್ನಿಯ ನಡುವೆ ವಿರಸ ಮೂಡಿದ್ದು, ನಿತ್ಯ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಪರಿಣಾಮ ಪತ್ನಿ ಪ್ರೀತಿ ನಿಖಿಲ್ ಕಿರುಕುಳ ನೀಡಿದ್ದಾನೆಂದು …

Read More »

ಶಾಸಕರಿಗೆ 50 ಕೋಟಿ ಆಫರ್​ ನೀಡುವ ಅಗತ್ಯವಿಲ್ಲ, ಜಗಳದಲ್ಲೇ ಸರ್ಕಾರ ಬೀಳುತ್ತೆ’: ನಳಿನ್​ ಕುಮಾರ್​ ಕಟೀಲ್​

ಹುಬ್ಬಳ್ಳಿ: “ಕಾಂಗ್ರೆಸ್​ ಶಾಸಕರಿಗೆ ಐವತ್ತು ಕೋಟಿ ಆಫರ್ ನೀಡುವ ಅವಶ್ಯಕತೆ ಆಗಲಿ, ಅನಿವಾರ್ಯತೆಯಾಗಲಿ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ವಾಗ್ದಾಳಿ ನಡೆಸಿದರು. ಬಿಜೆಪಿ ಪ್ರಶಿಕ್ಷಣ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಜನರಿಗೆ ದಾರಿ ತಪ್ಪಿಸುವ ಭಾಗವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಿದ್ಧರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ …

Read More »

ಸ್ಮಶಾನಕ್ಕಾಗಿ 2 ಎಕರೆ ನಿವೇಶನ ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ

ಗೋಕಾಕ : ಸಾರ್ವಜನಿಕ ಅನುಕೂಲಕ್ಕಾಗಿ ಎಲ್ಲ ಸಮುದಾಯದವರ ಹಿತದೃಷ್ಟಿಯಿಂದ ಸ್ಮಶಾನಕ್ಕಾಗಿ 2 ಎಕರೆ ಜಮೀನನ್ನು ಸರ್ಕಾರದಿಂದ ಖರೀದಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳನ್ನು ಕೋರಿದರು. ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಅಗತ್ಯವಿರುವ ಸ್ಮಶಾನ ನಿವೇಶನವನ್ನು ದೊರಕಿಸಿಕೊಡುವುದಾಗಿ ತಿಳಿಸಿದರು. ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಬೆಟಗೇರಿ ಗ್ರಾಮದ ಸಾರ್ವಜನಿಕರ ಬೇಡಿಕೆಗಳಿಗೆ ತಕ್ಷಣವೇ …

Read More »

ಕರುನಾಡು ರಕ್ಷಣಾ ವೇದಿಕೆ ವತಿಯಿಂದ ಗೋಕಾಕದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಗೋಕಾಕ : ನಗರದಲ್ಲಿ ಕರುನಾಡು ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಿದರು. ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರು ಚಾಲನೆ ನೀಡಿದರು. ನಗರದ ಕೊಳವಿ ಹಣಮಂತ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆದಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ, ಮಹರ್ಷಿ ವಾಲ್ಮೀಕಿಯವರ, ಡಾ. ಬಿ ಆರ್ ಅಂಬೇಡ್ಕರ್ ಅವರ, ಛತ್ರಪತಿ …

Read More »

ಮನೋಜ್ ಜಾರಂಗೆ, ಮಹಾರಾಷ್ಟ್ರ ಸಿಎಂ ಭಿನ್ನ ಹೇಳಿಕೆ: ಮರಾಠ ಮೀಸಲಾತಿ ಗಡುವಿನ ಬಗ್ಗೆ ಮೂಡಿದ ಗೊಂದಲ

​( ಮಹಾರಾಷ್ಟ್ರ): ಸರ್ಕಾರದ ನಿಯೋಗ ಮರಾಠಾ ಮೀಸಲಾತಿ ಬಗ್ಗೆ ಅದಷ್ಟು ಬೇಗ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ ಹಿನ್ನೆಲೆ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮೊಟಕುಗೊಳಿಸಿದ್ದಾರೆ. ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಲು ಡಿಸೆಂಬರ್ 24ರ ತನಕ ಗಡುವು ನೀಡಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ, ಮರಾಠ ಮೀಸಲಾತಿಗೆ ಮನೋಜ್ ಜಾರಂಗೆ …

Read More »

ನೆದರ್ಲೆಂಡ್ಸ್-ಅಫ್ಘಾನಿಸ್ತಾನ ಮಧ್ಯೆ ಇಂದು ಪೈಪೋಟಿ; ಟಾಸ್​ ಗೆದ್ದ ಡಚ್ ಟೀಂ ಬ್ಯಾಟಿಂಗ್

ಲಖನೌ(ಉತ್ತರಪ್ರದೇಶ): ಐಸಿಸಿ ವಿಶ್ವಕಪ್ ಕ್ರಿಕೆಟ್ 2023ರ 34ನೇ ಪಂದ್ಯ ನೆದರ್ಲ್ಯೆಂಡ್ಸ್ ಮತ್ತು ಅಫ್ಘಾನಿಸ್ತಾನ ನಡುವೆ ಇಂದು ಲಖನೌದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದ ನೆದರ್ಲೆಂಡ್ಸ್ ಬ್ಯಾಟಿಂಗ್​ ಆಯ್ದುಕೊಂಡಿತು. ನೆದರ್ಲೆಂಡ್ಸ್ ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಿಕ್ರಮಜೀತ್ ಬದಲಿಗೆ ಬ್ಯಾರೆಸಿ ಸ್ಥಾನ ಪಡೆದಿದ್ದಾರೆ. ನಾಲ್ವರು ಸ್ಪಿನ್ನರ್‌ಗಳೊಂದಿಗೆ ಅಫ್ಘಾನಿಸ್ತಾನ ಮೈದಾನಕ್ಕಿಳಿಯಲಿದೆ. ಎರಡೂ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಟೂರ್ನಿಯಲ್ಲಿ ಇತ್ತಂಡಗಳಿಗೂ ಇದು 7ನೇ ಪಂದ್ಯ. ಹಶ್ಮತುಲ್ಲಾ …

Read More »

ಯುವತಿಯಿಂದ ಅಶ್ಲೀಲ ವಿಡಿಯೋ ಕರೆ; 12 ಲಕ್ಷ ರೂಪಾಯಿ ಕಳ್ಕೊಂಡ ವೃದ್ಧ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ಸೈಬರ್​ ಕ್ರೈಂ ಮತ್ತು ಹನಿಟ್ರ್ಯಾಪ್​ನಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ದೆಹಲಿಯಲ್ಲಿ ಸೈಬರ್​ ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಸಂಪೂರ್ಣ ವಿವರ: ಶಾಹದಾರಾ ಜಿಲ್ಲೆಯ ಸೈಬರ್ ಸೆಲ್ ಠಾಣೆ ಪೊಲೀಸರು ರಾಜಸ್ಥಾನದ ವಂಚಕ ತಂಡದ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಾಜಸ್ಥಾನ ನಿವಾಸಿಗಳಾದ ಬರ್ಖತ್ ಖಾನ್ (32) …

Read More »

ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ:B.S.Y.

ಬೆಂಗಳೂರು/ಶಿವಮೊಗ್ಗ: ವಿರೋಧ ಪಕ್ಷದ ನಾಯಕರನ್ನು ಹೈಕಮಾಂಡ್ ಆದಷ್ಟು ಬೇಗ ನೇಮಿಸುತ್ತದೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ವಿರೋಧ ಪಕ್ಷದ ನಾಯಕರನ್ನು ಯಾವಾಗ ಆಯ್ಕೆ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ಈಗಾಗಲೇ ಪ್ರಕ್ರಿಯೆ ತಡವಾಗಿದೆ. ಆದಷ್ಟು ಬೇಗ ಆಯ್ಕೆ ಮಾಡಲಾಗುವುದು ಎಂದರು. ನಮ್ಮ ಪಕ್ಷದ ವತಿಯಿಂದ ಇಂದಿನಿಂದ ಹತ್ತಾರು ತಂಡಗಳು ಬರ ಅಧ್ಯಯನಕ್ಕಾಗಿ ರಾಜ್ಯದಲ್ಲಿ ಪ್ರವಾಸ ಮಾಡಲಿವೆ. ನಾನು …

Read More »

ರಾಜ್ಯೋತ್ಸವದಂದು ಕರಾಳ ದಿನಾಚರಣೆ ಮೆರವಣಿಗೆ, ಆಕ್ಷೇಪಾರ್ಹ ಘೋಷಣೆ; ಎಂಇಎಸ್​ನ 18 ಜನರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಿಸಿ, ನಾಡದ್ರೋಹಿ ಘೋಷಣೆಗಳನ್ನು ಕೂಗಿದ ಮಹಾರಾಷ್ಟ್ರ ಏಕೀಕಕರಣ ಸಮಿತಿಯ (ಎಂಇಎಸ್) 18 ಸದಸ್ಯರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತದಿಂದ ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಲಾಗಿತ್ತು. ಅನುಮತಿ ಇಲ್ಲದೇ ಇದ್ದರೂ ಕೂಡ ನಗರದಲ್ಲಿ ಕರಾಳ ದಿನ ಹೆಸರಲ್ಲಿ ಮೆರವಣಿಗೆ ಮಾಡಿ ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದರು. ಎಂಇಎಸ್ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ …

Read More »