Breaking News

ಈ ವಾರದ ರಾಶಿ ಭವಿಷ್ಯ ಹೀಗಿದೆ..

  ಮೇಷ : ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನ ಸಮಸ್ಯೆಗಳಿಂದ ಹೊರಬರಲಿದ್ದು ನಿರಾಳತೆಯನ್ನು ಅನುಭವಿಸಲಿದ್ದಾರೆ. ನೀವು ಮತ್ತು ನಿಮ್ಮ ಕುಟುಂಬದ ನಡುವೆ ಒಂದಷ್ಟು ಅಂತರ ಮತ್ತು ಕೆಲವೊಂದು ತಾತ್ವಿಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ಮನೆಗೆ ಸಂಬಂಧಿಸಿದಂತೆ ವೆಚ್ಚಗಳು ಉಂಟಾಗಬಹುದು. ನಿಮ್ಮ ಜವಾಬ್ದಾರಿಗಳು ನಿಮ್ಮ ಗಮನ ಸೆಳೆಯಲಿವೆ. ಇದೇ ವೇಳೆ ನಿಮ್ಮ ಕೆಲಸದಲ್ಲಿ ಸಮನ್ವಯ ಕಾಪಾಡಲು ಯತ್ನಿಸಲಿದ್ದೀರಿ. ಮನೆ ಮತ್ತು ಕಚೇರಿ ಎರಡೂ ಕಡೆಯಲ್ಲಿ ನಿಮ್ಮ ಅಗತ್ಯವಿದೆ. ಇವುಗಳನ್ನು ಚೆನ್ನಾಗಿ ನಿಭಾಯಿಸಿದಾಗಲೇ ಪರಿಸ್ಥಿತಿಯಲ್ಲಿ ಸುಧಾರಣೆ …

Read More »

ಬರಪೀಡಿತ ಪಟ್ಟಿಗೆ ಮತ್ತೆ 7 ತಾಲೂಕುಗಳು ಸೇರ್ಪಡೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದಲ್ಲಿ ಬರದ ತೀವ್ರತೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೆ ಏಳು ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಎಂದು ಶನಿವಾರ ಸರ್ಕಾರ ಘೋಷಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಂತಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆಯ (Ground Truthing) ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ …

Read More »

ಡಿ.ಕೆ.ಶಿವಕುಮಾರ್‌ ಹೆಸರಲ್ಲಿ ಬಿಬಿಎಂಪಿ ಮುಖ್ಯ ಇಂಜಿನಿಯರ್ ದುಡ್ಡು ವಸೂಲಿ: ಕೆಂಪಣ್ಣ ಆರೋಪ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಇಂಜಿನಿಯರ್ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಲಂಚದ ಆರೋಪ ಮಾಡಿದ್ದಾರೆ. ಸದಾಶಿವನಗರದಲ್ಲಿ ಶನಿವಾರ ಖಾಸಗಿ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಬಳಿಕ ಮಾತನಾಡಿದ ಅವರು, “ನಾನು ಸಿನಿಯಾರಿಟಿ ಪ್ರಕಾರ ಹಣ ಕೊಡಿ ಅಂತ ಕೇಳಿದ್ದೇನೆ. ಸ್ವಲ್ಪ ಹಣ ರಿಲೀಸ್ ಮಾಡಿದ್ದಾರೆ. ನಮಗೆ ತೃಪ್ತಿ ಇದೆ ಅಂತ ಹೇಳಲ್ಲ, ಗುತ್ತಿಗೆದಾರರ ಹಣವನ್ನು ಪೂರ್ತಿಯಾಗಿ ಕ್ಲಿಯರ್ ಮಾಡೋಕೆ ಹೇಳಿದ್ದೇನೆ. ಡಿಸೆಂಬರ್‌ ಒಳಗಡೆ …

Read More »

40 ವರ್ಷಗಳ ಅನುಭವ ಹೊಂದಿದ ಭಾರತ ವಾಹನ ತರಬೇತಿ ಶಾಲೆ ಆರಂಭ

೪೦ ವರ್ಷಗಳ ಅನುಭವ ಹೊಂದಿದ್ದ ಭಾರತ ವಾಹನ ತರಬೇತಿ ಶಾಲೆ ಸಮಾಜಮುಖಿ ಕೆಲಸ ಮಾಡುತ್ತಿದೆ ಮುಂಚೆ ದೇಶಸೇವೆ ಮಾಡಿದ್ದೇನೆ ಈ ವೃತ್ತಿಯಲ್ಲಿ ಅನೇಕ ಏರಳಿತಗಳನ್ನು ನೋಡಿದ್ದೇನೆ ಅಪಘಾತ ರಹಿತ ತರಬೇತಿ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಎಂದು ಭಾರತ ವಾಹನ ತರಬೇತಿ ಮಾಲೀಕ ಬಸವರಾಜ ಕಡ್ಲಿ ಹೇಳಿದರು . ಬೆಳಗಾವಿ ನೆಹರು ನಗರದ ೨ ನೇ ಕ್ರಾಸನಲ್ಲಿ ಭಾರತ ವಾಹನ ತರಬೇತಿ ಶಾಲೆಯ ಭವ್ಯ ಉದ್ಘಾಟನೆಯನ್ನು ಬೆಳಗಾವಿ ನಾಗನೂರ ಮಠದ …

Read More »

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅರಭಾವಿ ಶಾಸಕ ಮೂಡಲಗಿ : ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಡಲು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಸಂಜೆ ತಹಶೀಲ್ದಾರ ಕಛೇರಿಯ ಸಭಾಗೃಹದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ …

Read More »

ಅರಭಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ನ. 20 ಕ್ಕೆ ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಅರಭಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ನ. 20 ಕ್ಕೆ ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾವಿ ಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಡಾ. ಸಿದ್ಧರಾಮ ಮಹಾಸ್ವಾಮಿಗಳು ಸೇರಿದಂತೆ ಅನೇಕ ಶ್ರೀಗಳು ಭಾಗಿ. ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಭಕ್ತರ ಪಾಲಿಗೆ ಕಾಮಧೇನುವಾಗಿದ್ದರು- ಡಾ. ಸಿದ್ಧರಾಮ ಮಹಾಸ್ವಾಮಿಗಳ ಬಣ್ಣನೆ ಘಟಪ್ರಭಾ : ಅರಭಾವಿ ದುರದುಂಡೀಶ್ವರ ಮಠದ ಪೀಠಾಧಿಪತಿಯಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ನಿಧನದಿಂದ ಅರಭಾವಿ ಮಠದ ನೂತನ ಪೀಠಾಧಿಪತಿಗಳ …

Read More »

50 ಶಾಸಕರು BJP ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ – ಕಾಂಗ್ರೆಸ್‌ ಸರ್ಕಾರದ ಪತನ ಗ್ಯಾರಂಟಿ: ನಿರಾಣಿ ಬಾಂಬ್‌

ವಿಜಯಪುರ: ಕಾಂಗ್ರೆಸ್‌ (Congress) ಹೇಳುವುದು ಒಂದು ಮಾಡುವುದು ಇನ್ನೊಂದು, ಈ ಸರ್ಕಾರ 5 ವರ್ಷ ಉಳಿಯಲ್ಲ. ಈಗಾಗಲೇ 50 ಕಾಂಗ್ರೆಸ್‌ ಶಾಸಕರು ಬಿಜೆಪಿ ಹೈಕಮಾಂಡ್‌ (BJP HighCommand) ಸಂಪರ್ಕದಲ್ಲಿದ್ದು, ಪತನ ಆಗೋದು ಗ್ಯಾರಂಟಿ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ (Murugesh Nirani) ಹೊಸ ಬಾಂಬ್‌ ಸಿಡಿಸಿದ್ದಾರೆ.ವಿಜಯಪುರದ ಜುಮನಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು‌, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಎರಡು ಬಣವಿದ್ದರೂ, ಒಳಗೆ ನಾಲ್ಕು …

Read More »

ಗ್ರಾಹಕರ ಸೋಗಿನಲ್ಲಿ ಹಾಡಹಗಲೇ ಬಟ್ಟೆ ಅಂಗಡಿಗೆ ಬಂದ ಖತರ್ನಾಕ ಕಳ್ಳರ ಲೇಡಿ ಗ್ಯಾಂಗ್​

ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಹಾಡಹಗಲೇ ಬಟ್ಟೆ ಅಂಗಡಿಗೆ ಬಂದ ಖತರ್ನಾಕ ಕಳ್ಳರ ಲೇಡಿ ಗ್ಯಾಂಗ್​ವೊಂದು ಲಕ್ಷಾಂತರ ಮೌಲ್ಯದ ಸೀರೆಗಳನ್ನು ಅಂಗಡಿ ಮಾಲೀಕರ ಕಣ್ಮುಂದೆಯೇ ಕದ್ದೊಯ್ದಿರುವ ಘಟನೆ ಬೆಳಗಾವಿ ನಗರದಲ್ಲಿ ನಿನ್ನೆ ನಡೆದಿದೆ. ಬೆಳಗಾವಿಯ ಖಡೇ ಬಜಾರ್​ನಲ್ಲಿರುವ ಮಹೇಶ ವಿರೂಪಾಕ್ಷಿ ಎಂಬುವವರಿಗೆ ಸೇರಿದ ವಿರೂಪಾಕ್ಷಿ ಬಟ್ಟೆ ಅಂಗಡಿಗೆ ಶುಕ್ರವಾರ ಮಧ್ಯಾಹ್ನ 1.21ರ ಸುಮಾರಿಗೆ ಬಂದ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗಿದೆ. ಈ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು ಎರಡು ಲಕ್ಷ …

Read More »

ಬೆಳಗಾವಿಯಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಗರಂ

ಬೆಳಗಾವಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದರು. “ಈ ಪ್ರಶ್ನೆಯನ್ನು ನೀವು ನನ್ನ ಬಳಿ ಕೇಳಬಾರದು, ಸಾರ್ವಜನಿಕ ಹಿತಾಸಕ್ತಿ ಪ್ರಶ್ನೆಗಳಿಗೆ ಮಾತ್ರ ನಾನು ಉತ್ತರಿಸುವೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ವ್ಯಕ್ತಿತ್ವ ನನ್ನದಲ್ಲ” ಎಂದಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ನಡೆಯಲಿದ್ದ ಸಭೆಗೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳನ್ನು ಸರಿಪಡಿಸುವುದು, ಉನ್ನತೀಕರಣ, …

Read More »

ಜಾಲತಾಣದಲ್ಲಿ ಜಾತಿ ನಿಂದನೆ ಪ್ರಕರಣ : ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಸಂಬಂಧ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ನೀಡಿರುವ ದೂರಿನನ್ವಯ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಶುಕ್ರವಾರ ಸಂಜೆ ಸಂಪಿಗೆಹಳ್ಳಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂಪರ ಕಾರ್ಯಕರ್ತನಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಇತ್ತೀಚಿಗೆ ರೌಡಿಪಟ್ಟಿ ತೆರೆದು ಬಂಧಿಸಲಾಗಿತ್ತು. ಆ …

Read More »