Breaking News

ಆಹಾರ ಉದ್ಯಮಗಳ ಮೇಲೆ ಐಟಿ ದಾಳಿ

ಬೆಂಗಳೂರು: ಜ್ಯುವೆಲ್ಲರಿ‌ ಅಂಗಡಿ ಮಾಲೀಕರು, ಗುತ್ತಿಗೆದಾರರ ಮನೆ-ಕಚೇರಿಗಳ‌ ಮೇಲೆ‌ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿತ್ತು. ಇಂದು ಆಹಾರ ಉದ್ಯಮಗಳ‌ ಮೇಲೆ ದಾಳಿ‌ ನಡೆಸಿ‌, ಕಡತಗಳ ಪರಿಶೀಲನೆ ನಡೆಸುತ್ತಿದೆ. ರಾಜಾಜಿನಗರದ ಇಂಡಸ್ಟ್ರಿಯಲ್‌ ಎಸ್ಟೇಟ್ ಬಳಿಯಿರುವ ಪಿ.ಎಸ್.ಆಗ್ರೋ ಫುಡ್ ಎಲ್​ಎಲ್​ಪಿ ಕಾರ್ಖಾನೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿರುವ ಮಾಣಿಕ್ ಮೇವಾ ಸ್ಟೋರ್ ಮೇಲೆ ದಾಳಿ ನಡೆದಿದೆ. ಈ ಎರಡು ಆಹಾರ ಕಂಪನಿಗಳು ಒಣ ಹಣ್ಣುಗಳ ವ್ಯಾಪಾರ ನಡೆಸುತ್ತಿವೆ‌. ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸದ …

Read More »

ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಂತೆ ಸಂಘಟನಾತ್ಮಕ ಚಟುವಟಿಕೆಯನ್ನು ಅಧಿಕೃತವಾಗಿ ಆರಂಭಿಸಿರುವ ಬಿ ವೈ ವಿಜಯೇಂದ್ರ, ಮೊದಲನೆ ಸಭೆಯನ್ನಾಗಿ ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಪಕ್ಷದ ಎಲ್ಲಾ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಆಹ್ವಾನ ನೀಡಿದ್ದಾರೆ.   ಇಂದು ಬೆಳಗ್ಗೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಿ. ವೈ ವಿಜಯೇಂದ್ರ ಅವರು ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ …

Read More »

ರಾಷ್ಟ್ರೀಯ ಪತ್ರಿಕಾ ದಿನ: ಮುಕ್ತ, ನಿರ್ಭೀತ, ಮೌಲ್ಯಯುತ ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆಂಬಲ

National Press Day: ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಗೊಂಡು ಇಂದಿಗೆ 12 ವರ್ಷಗಳಾಗುತ್ತಿದೆ. ನವೆಂಬರ್​ 16 ಅನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಕುರಿತ ವಿಶೇಷ ವರದಿ.   ಇಂದು ಸ್ವತಂತ್ರ ಮತ್ತು ಜವಾಬ್ದಾರಿಯುತ ಪತ್ರಿಕಾ ಉಪಸ್ಥಿತಿಯನ್ನು ಸೂಚಿಸುವ ರಾಷ್ಟ್ರೀಯ ಪತ್ರಿಕಾ ದಿನ. ಪ್ರತಿ ವರ್ಷ ನವೆಂಬರ್ 16ರಂದು ಸ್ವತಂತ್ರ ಪತ್ರಿಕಾ ಅಸ್ತಿತ್ವವನ್ನು ಸಾರುವ ಪ್ರೆಸ್ ಕೌನ್ಸಿಲ್ ಆಫ್ …

Read More »

ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್‌

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್​ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್​ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಇದುವರೆಗೆ ಒಟ್ಟು 12 ವಿಶ್ವಕಪ್​ ಕ್ರಿಕೆಟ್ ಆವೃತ್ತಿಗಳು ನಡೆದಿವೆ. ಆಸೀಸ್​ ಐದು ಬಾರಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ ನಾಲ್ಕು ಪ್ರಶಸ್ತಿಗಳು ಕಳೆದ ಆರು ಆವೃತ್ತಿಗಳಲ್ಲಿ ಬಂದಿವೆ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ನಾಲ್ಕು ಬಾರಿ ಸೆಮೀಸ್​ಗೆ ಬಂದರೂ ಸೋಲಿನ …

Read More »

ಆಸ್ತಿಗಾಗಿ ಪತ್ನಿಯನ್ನೇ ಕೊಲೆಗೈದ ಪತಿ,

ಮಂಡ್ಯ: ಪತ್ನಿ ಹೆಸರಿನಲ್ಲಿದ್ದ ಕೋಟ್ಯಂತರ ರೂ. ವೌಲ್ಯದ ಆಸ್ತಿಗಾಗಿ ಮಲಗಿದ್ದ ಸಮಯದಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಪತಿಯೇ ಹತ್ಯೆಗೈದಿರುವ ಘಟನೆ ನಗರದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಎಸ್. ಶೃತಿ (32) ಕೊಲೆಯಾದವರು. ಟಿ.ಎನ್. ಸೋಮಶೇಖರ್ (41) ಕೊಲೆ ಮಾಡಿದ ಪತಿ. ಕೊಲೆಯಾದ ಎಸ್ ಶೃತಿ ಹೆಸರಿನಲ್ಲಿ ಮೈಸೂರಿನಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ ಇದ್ದು, ಈ ಆಸ್ತಿಯಲ್ಲಿ ಒಂದನ್ನು ಮಾರಾಟ ಮಾಡಲು ಅವರು ಪ್ರಯತ್ನಿಸುತ್ತಿದ್ದರು. ಒಪ್ಪದ ಪತಿ ಸೋಮಶೇಖರ್ ಎಲ್ಲಾ ಆಸ್ತಿಯನ್ನು …

Read More »

ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ: ಸಚಿವ ರಾಜಣ್ಣ

ತುಮಕೂರು: “ನನಗೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ. ಹೈಕಮಾಂಡ್​ನವರು ಸ್ಪರ್ಧೆಗೆ ಅವಕಾಶ ನೀಡಿದರೆ ನಿಲ್ಲುತ್ತೇನೆ. ಇಲ್ಲ ಎಂದರೆ ಸುಮ್ಮನ್ನೇ ಇರ್ತೇನಿ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಮುಂದೆ ರಾಜ್ಯ ವಿಧಾನಸಭೆ ಸೇರಿದಂತೆ ಯಾವ ಚುನಾವಣೆಗೂ ನಿಲ್ಲಲ್ಲ, ಈಗ ಲೋಕಸಭೆಯ ಅನುಭವಕ್ಕಾಗಿ ಚುನಾವಣೆ ಸ್ಪರ್ಧಿಸಲು ಬಯಸಿದ್ದೇನೆ” ಎಂದು ತಿಳಿಸಿದರು. “ರಾಜ್ಯದಲ್ಲಿ ಬಹಳ ದಿನದಿಂದ ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು …

Read More »

ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ ಗೃಹ ಲಕ್ಷ್ಮಿ ಯೋಜನೆ ಗೊಂದಲ ವಿಚಾರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ​ಹೇಳೋದೇನು

ಧಾರವಾಡ : ಗೃಹಲಕ್ಷ್ಮಿ ಯೋಜನೆ ಗೊಂದಲ ವಿಚಾರ ಈಗ ಎಲ್ಲವೂ ಸರಳ ಮಾಡಿದ್ದೇವೆ. ಈಗಾಗಲೇ 1.9 ಕೋಟಿ ಜನರಿಗೆ ತಲುಪಿದ್ದೇವೆ. ಇನ್ನಾದರೂ ಐದಾರು ಲಕ್ಷ ಜನರದ್ದು ಕ್ಲಿಯರ್ ಆಗಬೇಕಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಅನುದಾನದ ಕೊರತೆ ಇಲ್ಲ. ಆದರೆ ತಾಂತ್ರಿಕ ತೊಂದರೆ ಕಾರಣಕ್ಕೆ ವಿಳಂಬ ಆಗಿದೆ. 15 ಲಕ್ಷ ಜನ ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆ ನೀಡಿದ್ದರು. …

Read More »

ಬೀದಿ ನಾಯಿ ದಾಳಿಗೆ ತುತ್ತಾದವರಿಗೆ 5 ಸಾವಿರ, ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ: ಸರ್ಕಾರದಿಂದ ಮಾಹಿತಿ

ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ 5 ಸಾವಿರ ರೂ. ಹಾಗೂ ಜೀವ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವಿವರಿಸಿದೆ. ಪ್ರಾಣಿಗಳ ಜನ ನಿಯಂತ್ರಣ (ನಾಯಿ) ಅಧಿನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎಲ್. ರಮೇಶ್ ನಾಯ್ಕ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು …

Read More »

ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. INDIA

ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್​ ಸೆಮೀಸ್​ ಸೇಡನ್ನು ರೋಹಿತ್​ ಪಡೆ ತೀರಿಸಿಕೊಂಡಿದ್ದು, 70 ರನ್​ನಿಂದ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಅಲ್ಲದೇ ಟೀಮ್​ ಇಂಡಿಯಾ 2023ರ ವಿಶ್ವಕಪ್​ನಲ್ಲಿ 10ನೇ ಜಯ ದಾಖಲಿಸಿದೆ. ಚಾಂಪಿಯನ್​ ಪಟ್ಟವನ್ನು ಅಲಂಕರಿಸಲು, ಇನ್ನು ಒಂದು ಹೆಜ್ಜೆ ಮಾತ್ರ ಹಿಂದಿದೆ.     ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ನೆರವಾಗಿದ್ದು ಮೊಹಮ್ಮದ್​ ಶಮಿ. ಸೋಲಿನ ಆತಂಕದಲ್ಲಿದ್ದ ಭಾರತಕ್ಕೆ ಶಮಿ 7 ವಿಕೆಟ್​ ಪಡೆದು ಜಯಕ್ಕೆ …

Read More »

ಸಗಣಿಯಲ್ಲಿ ಹೊಡೆದಾಡಿಕೊಂಡ ಜನ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗಡಿ ಅಂಚಿನಲ್ಲಿರುವ ತಮಿಳುನಾಡಿನ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷತೆ. ಗೊರೆ ಹಬ್ಬ ಅಚ್ಚ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಇಲ್ಲಿ ಬಲಿಪಾಡ್ಯಮಿಯ ಮಾರನೇ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಹಬ್ಬದ ದಿನ ಬೆಳಿಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ …

Read More »