ಬೆಂಗಳೂರು: ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ಸಲ್ಲಿಕೆಗೆ ಕಾಲ ಸನ್ನಿಹಿತವಾಗಿದ್ದು, ಎರಡು ದಿನಗಳಲ್ಲಿ ಸರಕಾರದ ಕೈ ಸೇರುವ ಸಾಧ್ಯತೆ ಇದೆ. ವರದಿಯು ಮುದ್ರಣ ಹಂತದಲ್ಲಿದ್ದು, ಎರಡು ದಿನಗಳೊಳಗೆ ಸರಕಾರಕ್ಕೆ ಸಲ್ಲಿಕೆಯಾಗಲಿದೆ. ಈ ಮೂಲಕ ಎಂಟು ವರ್ಷಗಳ ಕುತೂಹಲ ಮತ್ತು ನಿರೀಕ್ಷೆಗಳಿಗೆ ತೆರೆಬೀಳಲಿದೆ. ಬಹುತೇಕ ಅತ್ತ ಅಧಿವೇಶನ ಮುಗಿಯುತ್ತಿದ್ದಂತೆ, ಇತ್ತ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ …
Read More »ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್: ʼಕೈʼ ಅಭ್ಯರ್ಥಿಗೆ ಮತ
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆ ಎಂದು ವರದಿಯಾಗಿದೆ. ಅಡ್ಡ ಮತದಾನ ಮಾಡುವ ಮೂಲಕ ಸ್ವಪಕ್ಷಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ. “ಮತ ಚಲಾಯಿಸುವ ಮೊದಲು ಎಸ್.ಟಿ.ಸೋಮಶೇಖರ್ ಅವರು, “ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಆಗಲು ಪ್ರಯತ್ನಿಸಿದ್ದೆ. ಆದರೆ ಅವರು ಕಾಲಾವಕಾಶ ನೀಡಲಿಲ್ಲ. ಅಭಿವೃದ್ಧಿಗೆ ಯಾರು ಅನುದಾನ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದರು. ಬಿಜೆಪಿ …
Read More »3 ರಾಜ್ಯಗಳ 15 ಸ್ಥಾನಗಳಿಗೆ ಇಂದು ಚುನಾವಣೆ
ಹೊಸದಿಲ್ಲಿ: ರಾಜ್ಯಸಭೆಯ 56 ಸ್ಥಾನಗಳ ಪೈಕಿ 41 ನಾಯಕರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಮಂಗಳವಾರ ಉಳಿದ 15 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. ಈ 15 ಸ್ಥಾನಗಳು ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ್ದಾಗಿವೆ. ಉತ್ತರಪ್ರದೇಶದಲ್ಲಿ 10 ಸ್ಥಾನಗಳಿದ್ದು, 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಸ್‌ಪಿ ತನ್ನ 3 ಅಭ್ಯರ್ಥಿಗಳನ್ನು (ಜಯಾ ಬಚ್ಚನ್, ರಾಮ್‌ಜಿಲಾಲ್ ಸುಮನ್, ಅಲೋಕ್ ರಂಜನ್) ಮರುನಾಮ ನಿರ್ದೇಶನ ಮಾಡಿದೆ. ಇನ್ನು, ಬಿಜೆಪಿ 7ರ ಬದಲಾಗಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು …
Read More »“ಕಾಗದ ರಹಿತ ಪರೀಕ್ಷೆ’ಯತ್ತ ರಾಜೀವ್‌ಗಾಂಧಿ ಆರೋಗ್ಯ ವಿವಿ
ಬೆಂಗಳೂರು: “ಕಾಗದ ರಹಿತ ಪರೀಕ್ಷೆ’ ಯತ್ತ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಚಿತ್ತಹರಿಸಿದೆ. ಮಾರ್ಚ್‌ನಲ್ಲಿ ಈ ಸ್ವರೂಪದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದ್ದು, ಅದಕ್ಕಾಗಿಯೇ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ “ಡಿಜಿ ಟಲ್ ವ್ಯಾಲ್ಯೂವೇಷನ್’ ಮೂಲಕ ಚರಿತ್ರೆ ನಿರ್ಮಿಸಿರುವ ವಿವಿ ಈಗ ಕಾಗದ ರಹಿತ ಪರೀಕ್ಷೆ ಮೂಲಕ ದೇಶದ ವಿವಿಗಳ ಇತಿಹಾಸದಲ್ಲೇ ಭಿನ್ನ ರೀತಿಯ ಪ್ರಯೋಗಕ್ಕೆ ಹೆಜ್ಞೆ ಇರಿಸಿದೆ. ಫೆಲೋಶಿಫ್ ಮತ್ತು ಫಿಸಿಯೋಥೆರಪಿ ವಿಭಾಗದಲ್ಲಿ ಕಾಗದ …
Read More »BJP-JDS ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ಹುದಲಿ ಗ್ರಾಮದಲ್ಲಿ ಸೋಮವಾರ ಗ್ರಾಮದೇವಿ ಜಾತ್ರಾ ಅಂಗವಾಗಿ ಚರಂಡಿ, ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ ಹಾಗೂ ಸುಮಾರು 5 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ರಾಜ್ಯಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ …
Read More »ರಸ್ತೆ ಅಪಘಾತ: ಯುವಕ ಸಾವು, ಓರ್ವನಿಗೆ ಗಾಯ
ಮಸ್ಕಿ: ತಾಲೂಕಿನ ಮುದಬಾಳ ಕ್ರಾಸ್ ಸಮೀಪ ನಿಂತಿದ್ದ ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಯುವಕ ಸ್ಥಳದಲ್ಲಿಯೇ ಸಾವನಪ್ಪಿದ್ದು ಮತ್ತೊಬ್ಬನಿಗೆ ಗಾಯಗಳಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಮೃತ ಯುವಕ ಮಂಜುನಾಥ ಭೋವಿ (26) ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಮಂಜುನಾಥ ಮತ್ತು ಬಾಬು ಮಸ್ಕಿಯ ಭ್ರಮರಾಂಭ ಬಾರ್ ಆಯಂಡ್ ರೆಸ್ಟೋರೆಂಟ್ ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕೆಲಸ ಮುಗಿಸಿಕೊಂಡು ಸ್ವ …
Read More »ರಾಜ್ಯಸಭಾ ಚುನಾವಣೆ: ಬಿಜೆಪಿ, ಜೆಡಿಎಸ್ ವಿರುದ್ಧ ಡಿಕೆಶಿ ‘ಆಪರೇಷನ್ ಬಾಂಬ್’ ಆರೋಪ
ಬೆಂಗಳೂರು: ಇಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದೇ ವೇಳೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ, ಜೆಡಿಎಸ್ ವಿರುದ್ಧ ಆಪರೇಷನ್ ಬಾಂಬ್ ಆರೋಪ ಮಾಡಿದ್ದಾರೆ. ಈ ಕುರಿತಂತೆ ಬೆಂಗಳೂರಿನ ಹಿಲ್ಟನ್ ಹೋಟೆಲ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಮ್ಮ 42 ಶಾಸಕರನ್ನು ಬಿಜೆಪಿ, ಜೆಡಿಎಸ್ ನವರು ಸಂಪರ್ಕಿಸಿ, ಆಪರೇಷನ್ ಮಾಡೋ ಪ್ರಯತ್ನ ನಡೆಸಿದ್ದಾರೆ. ಅವರಿಗೆ ರಾಜಕೀಯದ ಬಗ್ಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು. ಹಣ ಇದೆ …
Read More »ಮಹದಾಯಿ ಹೋರಾಟಗಾರರಿಂದ ಪ್ರಹ್ಲಾದ್ ಜೋಶಿ ಕಾರಿಗೆ ಮುತ್ತಿಗೆ
ಹುಬ್ಬಳ್ಳಿ, ಫೆಬ್ರವರಿ 26: ನವಲಗುಂದ-ನರಗುಂದ ಮಹದಾಯಿ (Mahadayi) ಹೋರಾಟಗಾರರ ಆಕ್ರೋಶ ಮತ್ತೆ ಭುಗಿಲೆದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಅವರ ಕಾರಿಗೆ ಮುತ್ತಿಗೆ ಹಾಕಿ, ಚುನಾವಣೆಗೂ ಮುನ್ನ ಕಳಸಾ-ಬಂಡೂರಿ ಕಾಮಗಾರಿ (Kalasa-banduri work) ಆರಂಭಿಸುವಂತೆ ಒತ್ತಾಯಿಸಿದರು. ಕಳಸಾ-ಬಂಡೂರಿ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ರೈತರು ಹುಬ್ಬಳ್ಳಿಯ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಮಗಾರಿ ಆರಂಭವಾಗದೆ, ಮತ ಕೇಳಲು ಬನ್ನಿ ಪಾಠ ಕಲಿಸುತ್ತೇವೆ ಎಂದು ಗುಡುಗಿದರು. ರೈತರ ಎಚ್ಚರಿಕೆಗೆ ತಬ್ಬಿಬ್ಬಾದ ಕೇಂದ್ರ ಸಚಿವ …
Read More »ರಾಜ್ಯಸಭೆ ಚುನಾವಣೆರೆಡ್ಡಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಬೆಂಗಳೂರು: ರಾಜ್ಯಸಭೆ ಚುನಾವಣೆ ಭಾರೀ ಕುತೂಹಲವನ್ನು ಮುಡಿಸಿದ್ದು, ಈಗ ಕೆ ಆರ್ ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಇನ್ನಿಲ್ಲ ಬೇಡಿಕೆ ಶುರುವಾಗಿದೆ. ಅವರಿಗೆ ಮೂರು ಪಕ್ಷದ ಮುಖಂಡರು ಸಂಪರ್ಕಿಸಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತ ನೀಡುವಂತೆ ಕೇಳಿದ್ದಾರೆ. ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ನ ಘಟಾನುಘಟಿ ನಾಯಕರು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅವರು ನೀಡಿರುವ ಹೇಳಿಕೆ ರಾಜಯಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, …
Read More »ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ಆಸ್ತಿ ಏರಿಕೆ ಬಗ್ಗೆಯೂ ಸ್ಪಷ್ಟನೆ ಕೊಟ್ಟ ರಮೇಶ ಜಿಗಜಿಣಗಿ
ವಿಜಯಪುರ, ಫೆ.26:ಲೋಕಸಭೆ ಚುನಾವಣೆಗೆ(Lok Sabha Election 2024) ಅಣಿಯಾಗುತ್ತಿರುವ ಬಿಜೆಪಿ (BJP) ಹೈಕಮಾಂಡ್ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಅದರಂತೆ, ಈ ಬಾರಿ ಬಿಜೆಪಿ ವಿಜಯಪುರ (Vijayapur) ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಷೇತ್ರದ ಹಾಲಿ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ವಿಜಯಪುರ ಲೋಕಸಭಾ ಕ್ಷೇತ್ರದ …
Read More »
Laxmi News 24×7