ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ 16ರಂದು ಮಧ್ಯಾಹ್ನ 12ಕ್ಕೆ ತೆಲಂಗಾಣದಿಂದ ಕಲಬುರಗಿಗೆ ಬರಲಿದ್ದು, ರಾಜ್ಯದಲ್ಲಿ ಮೊದಲ ಚುನಾವಣಾ ಸಮಾವೇಶವನ್ನು ನಡೆಸಲಿದ್ದಾರೆ. ಎನ್.ವಿ. ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಕೆಕೆಆರ್ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಮಾವೇಶಕ್ಕೆ ಪಕ್ಷದ ವತಿಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನಗರದ …
Read More »ವಿಶ್ವ ಚಾಂಪಿಯನ್ಶಿಪ್ಗೆ ವಿರೂಪಾಕ್ಷಗೌಡ ಪಾಟೀಲ ಅರ್ಹತೆ
ಹುಬ್ಬಳ್ಳಿ: ಇಲ್ಲಿನ ಅಕ್ಕಿಹೊಂಡದ ತಂಬದ ಓಣಿ ನಿವಾಸಿ ವಿರೂಪಾಕ್ಷಗೌಡ ಪಾಟೀಲ ಅವರು 44ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2024ರ 80 ವರ್ಷ ಮೇಲ್ಪಟ್ಟವರ 800 ಮೀಟರ್ ಹಾಗೂ 1,500 ಮೀಟರ್ ಓಟದಲ್ಲಿ ತಲಾ ಒಂದು ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದಾರೆ. ಫೆಬ್ರುವರಿ 13ರಿಂದ 17ರವರೆಗೆ ಪುಣೆಯಲ್ಲಿ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಡೆದಿತ್ತು ಎಂದು ಪ್ರಕಟಣೆ ತಿಳಿಸಿದೆ.
Read More »ಹುಬ್ಬಳ್ಳಿ: ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ
ಹುಬ್ಬಳ್ಳಿ: ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಕಾರಣ ಇಲ್ಲಿನ ಎಸ್ಎಸ್ಎಸ್ ರೈಲು ನಿಲ್ದಾಣದಿಂದ ಅಹಮದಾಬಾದ್ ನಿಲ್ದಾಣದ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ (07311/ 07312) ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 24ರಂದು 07311 ಸಂಖ್ಯೆಯ ರೈಲು ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 7.30ಕ್ಕೆ ಹೊರಟು, ಮರುದಿನ ಸಂಜೆ 7.20ಕ್ಕೆ ಅಹಮದಾಬಾದ್ ನಿಲ್ದಾಣ ತಲುಪಲಿದೆ. ಮಾರ್ಚ್ 25ರಂದು 07312 ಸಂಖ್ಯೆಯ ರೈಲು ಅಹಮದಾಬಾದ್ ನಿಲ್ದಾಣದಿಂದ ರಾತ್ರಿ …
Read More »ಪ್ರಧಾನಿ ನರೇಂದ್ರ ಮೋದಿ ಕೊಯಮತ್ತೂರು ರೋಡ್ಶೋಗೆ ಅನುಮತಿ ನೀಡಿದ ನ್ಯಾಯಾಲಯ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ 4 ಕಿಮೀ ರೋಡ್ಶೋಗೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ಆದೇಶಿಸಿದೆ.ಕಾನೂನು-ಸುವ್ಯವಸ್ಥೆ ಮತ್ತು ಸಾರ್ವಜನಿಕ ಪರೀಕ್ಷೆಯ ನಿರ್ವಹಣೆಯನ್ನು ಉಲ್ಲೇಖಿಸಿ ಪೊಲೀಸರು ಶುಕ್ರವಾರ ಬೆಳಿಗ್ಗೆ ಪ್ರಧಾನಿ ಮೋದಿ ರೋಡ್ಶೋಗೆ ಅನುಮತಿ ನಿರಾಕರಿಸಿದ್ದರು. ಇತರ ರಾಜಕೀಯ ಪಕ್ಷಗಳಿಗೂ ಅನುಮತಿ ನಿರಾಕರಿಸಲಾಗಿದೆ, ಆದ್ದರಿಂದ ಇದರಲ್ಲಿ ರಾಜಕೀಯ ಹಿತಾಸಕ್ತಿಯ ಪ್ರಶ್ನೆಯೇ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ವಿಶೇಷ ಭದ್ರತಾ ವ್ಯವಸ್ಥೆ ಹೊಂದಿರುವ …
Read More »ಬೆಳಗಾವಿಯಿಂದ ಸ್ಪರ್ಧೆ ಖಚಿತ: ಅಧಿಕೃತ ಘೋಷಣೆಯಷ್ಟೇ ಬಾಕಿ- ಶೆಟ್ಟರ್?
ಹುಬ್ಬಳ್ಳಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಭೇಟಿಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ. ಟಿಕೆಟ್ ನನಗೆ ನೀಡಲು ತೀರ್ಮಾನವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ’ ಎಂದು ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಳಗಾವಿಯಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದರು. ಇದಲ್ಲದೇ, ಬೆಳಗಾವಿ ನಾಯಕರ ಜೊತೆ ಚರ್ಚಿಸಿದ ನಂತರ ಸ್ಪರ್ಧಿಸಲು …
Read More »ಈಶ್ವರಪ್ಪಗೆ ತಾಕತ್ತಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ: ಆಯನೂರು
ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಹೇಳುತ್ತಿರುವುದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ. ಈಶ್ವರಪ್ಪ ಅವರಿಗೆ ಯಾರೂ ಟಿಕೆಟ್ ತಪ್ಪಿಸಲಿಲ್ಲ. 40% ಗೆ ಅವರೇ ಬಲಿದಾನ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಧಾನಸಭೆ, ಲೋಕಸಭೆ ಕೇಳಿದ್ದರು, ಎರಡೂ ತಪ್ಪಿ ಹೋಯ್ತು. ಈಗ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಕೇಳುತ್ತಿದ್ದಾರೆ. ಅದು ಸಿಗಲಿಲ್ಲವಾದರೆ ಜಿ.ಪಂ. ಇದೆಯಲ್ಲಾ. ಅದಕ್ಕಾಗಿ ಈ ರೀತಿ ಮಾತನಾಡ್ತಿದ್ದಾರೆ. ಈಶ್ವರಪ್ಪ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ಅವರಿಗೆ ಖಂಡಿತವಾಗಿ …
Read More »ಬೇರೆ ಪಕ್ಷಕ್ಕೆ ಹೋಗುವುದಿಲ್ಲ: ಸಂಗಣ್ಣ ಕರಡಿ ಸ್ಪಷ್ಟನೆ
ಕೊಪ್ಪಳ: ನಾನು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನ ಕೆಲವರು ನನ್ನ ಜೊತೆ ಸೌಜನ್ಯಕ್ಕಾಗಿ ಮಾತನಾಡಿದ್ದಾರೆ. ಆದರೆ ಪಕ್ಷ ಸೇರುವ ಬಗ್ಗೆ ಮಾತನಾಡಿಲ್ಲ. ನಾನು ಪಕ್ಷದಲ್ಲಿಯೇ ಇರುತ್ತೇನೆ. ಕೆಆರ್ಪಿಪಿ ಪಕ್ಷಕ್ಕೆ ಹೋಗುವೆ ಎನ್ನುವ ವಿಚಾರ ಎಲ್ಲವೂ ಊಹಾಪೋಹ. ನಾನು ಈಗಲೇ ಎಲ್ಲವೂ ನಿರ್ಧಾರ ಮಾಡಿಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಹೇಳಿದರು. ಮುಂದಿನ ಲೋಕಸಭೆ ಚುನಾವಣೆಗೆ ಅವರಿಗೆ ಟಿಕೆಟ್ ತಪ್ಪಿದ ಬಳಿಕ ಬೆಂಬಲಿಗರು ಪಕ್ಷದ …
Read More »ಅಮಿತ್ ಶಾ ಭೇಟಿಯಾದ ಗಾಲಿ ಜನಾರ್ದನ ರೆಡ್ಡಿ
ಕೊಪ್ಪಳ : ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರೆಡ್ಡಿ ಅವರ ನಡೆ ಕುತೂಹಲ ಮೂಡಿಸಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಗೆ ಕೆಆರ್ ಪಿಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದ ರೆಡ್ಡಿ ಅವರು …
Read More »ಜಮೀನು ಮಾರಾಟದ ಹಣಕ್ಕಾಗಿ ತಂದೆಯನ್ನೇ ಕೊಂದ ಮಕ್ಕಳು
ಗದಗ: ಜಮೀನು ಮಾರಾಟದಿಂದ ಸಿಕ್ಕ ಹಣವನ್ನು ಸಮನಾಗಿ ಹಂಚಿಕೆ ಮಾಡಿಲ್ಲ ಎಂಬ ವಿಚಾರಕ್ಕೆ ಮಕ್ಕಳೇ ತಂದೆಯನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ವಿವೇಕಾನಂದ ಕರಿಯಲ್ಲಪ್ಪ (65) ಕೊಲೆಯಾದ ವ್ಯಕ್ತಿ. ವಿವೇಕಾನಂದ ಅವರ ಮೊದಲನೇ ಪತ್ನಿ ಕಸ್ತೂರಿ ಅವರ ಮಕ್ಕಳಾದ ಮಲ್ಲೇಶ ಮತ್ತು ಪ್ರಕಾಶ ಆರೋಪಿಗಳು. ವಿವೇಕಾನಂದ ಅವರು ಪಿತ್ರಾರ್ಜಿತವಾಗಿ ಬಂದಿದ್ದ ಆರು ಎಕರೆ ಜಮೀನಿನಲ್ಲಿ ಮೂರು ಎಕರೆಯನ್ನು ಮಾರಾಟ ಮಾಡಿದ್ದರು. ಅದರಿಂದ ಬಂದ …
Read More »ತಮ್ಮ ಹೆಸರಿನ ರಸ್ತೆ ತಾವೇ ಉದ್ಘಾಟಿಸಿದ ಕೋವಿಂದ್!
ಹೊಸದಿಲ್ಲಿ: ರಾಷ್ಟ್ರಪತಿ ಭವನ ಎಸ್ಟೇಟ್ನಲ್ಲಿ ತಮ್ಮ ಹೆಸರಿನಲ್ಲಿ ನಿರ್ಮಿಸಲಾದ ರಸ್ತೆಯನ್ನು ಮಾಜಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ತಾವೇ ಖುದ್ದಾಗಿ ಲೋಕಾರ್ಪಣೆಗೊಳಿಸಿದ್ದಾರೆ. ತಮ್ಮ ನೇತೃತ್ವದ ಸಮಿ ತಿಯ “ಒಂದು ದೇಶ, ಒಂದು ಚುನಾವಣೆ’ ವರದಿ ಯನ್ನು ರಾಷ್ಟ್ರಪತಿಗೆ ಹಸ್ತಾಂತರಿಸಲು ಕೋವಿಂದ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. “ಅನಿರೀಕ್ಷಿತವಾದ ಈ ಘಟನೆ ನನ್ನ ಪಾಲಿನ ವಿಧಿ ಆಗಿದ್ದಿರಬಹುದು. ಅಚ್ಚರಿಯ ಅವಕಾಶವನ್ನು ನೀಡಿದ ರಾಷ್ಟ್ರಪತಿ ಭವನಕ್ಕೆ ಕೃತಜ್ಞ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
Read More »
Laxmi News 24×7