ಬೆಳಗಾವಿಯಲ್ಲಿ ಕುಟುಂಬ ರಾಜಕಾರಣದ ಹೊಸಮಜಲು ಆರಂಭಿಸಿ, ಜಾರಕಿಹೊಳಿ ‘ಸಾಹುಕಾರ್’ ರ ಭದ್ರಕೋಟೆಗೆ ನುಗ್ಗಿದ ‘ಜೊಲ್ಲೆ’ ಕುಟುಂಬ, ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿತ್ತು. ಬೆಳಗಾವಿ ಮಟ್ಟಿಗೆ ಜಾರಕಿಹೊಳಿ, ಕತ್ತಿ, ಸವದಿ, ಕೋರೆ, ಹುಕ್ಕೇರಿ ಈ ಕುಟುಂಬಗಳೇ ರಾಜಕೀಯವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದವು. ನಿಪ್ಪಾಣಿಗೆ ಕಾಲಿಟ್ಟ ಶಶಿಕಲಾ ಜೊಲ್ಲೆ, ಅಲ್ಲಿ ಗೆಲ್ಲುವ ಮೂಲಕ ಕುಟುಂಬ ರಾಜಕಾರಣದ ಹೊಸ ಪರ್ವ ಆರಂಭಿಸಿದರು. 2019ರಲ್ಲಿ ತಮ್ಮ ಗಂಡ ಅಣ್ಣಾಸಾಹೇಬ ಜೊಲ್ಲೆಯವರಿಗೆ ಚಿಕ್ಕೋಡಿ ಲೋಕಸಭೆಗೆ ಟಿಕೆಟ್ …
Read More »ಸುತ್ತಲೂ ನದಿ: ಕಳಸದಲ್ಲಿ ನೀರಿಗೆ ಕೊರತೆ
ಕಳಸ: ಪಟ್ಟಣದ ಸುತ್ತಲೂ ಕಲಶದ ಆಕಾರದಲ್ಲಿ ಭದ್ರಾ ನದಿ ಹರಿಯುವುದರಿಂದಲೇ ಕಳಸ ಎಂಬ ಹೆಸರು ಬಂದಿದೆ. ಆದರೆ, ಪ್ರತಿ ಬೇಸಿಗೆಯಲ್ಲೂ ಕಳಸ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಆಗುತ್ತಲೇ ಇದೆ. ಕಳಸ ಗ್ರಾಮ ಪಂಚಾಯಿತಿಯು ಗಣಪತಿ ಕಟ್ಟೆಯ ನೀರಿನ ಟ್ಯಾಂಕ್ ತುಂಬಿಸಲು 3 ದಶಕದ ಹಿಂದೆಯೇ ವಿದ್ಯುತ್ ಚಾಲಿತ ಪಂಪ್ ಅಳವಡಿಸಿದೆ. ಈ ಬಿಳಿಯಾನೆ ಸಾಕಲಾರದೆ ಹೊನ್ನೆಕಾಡು ನೈಸರ್ಗಿಕ ನೀರಿನ ಯೋಜನೆಯನ್ನು ಕಳೆದ ದಶಕದಲ್ಲೇ ಕೋಟ್ಯಂತರ ವೆಚ್ಚದಲ್ಲಿ …
Read More »ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ; ಶೆಟ್ಟರ್
ಹುಬ್ಬಳ್ಳಿ : ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ನಾವು ಏನೂ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬುದಕ್ಕೆ ಗುಪ್ಪಿ ಶಾಸಕರ ಬಹಿರಂಗ …
Read More »ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ವರಿಷ್ಠರು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು ಅದು ಸಿಕ್ಕೇ ಸಿಗುತ್ತದೆ ಎಂಬ ಅತೀವ ಆತ್ಮವಿಶ್ವಾಸದಲ್ಲಿದ್ದ ಸುಮಲತಾ ಅಂಬರೀಶ್(Sumalatha Ambareesh) ಅವರಿಗೆ ಭಾರೀ ನಿರಾಸೆಯಾಗಿದೆ. ತಮ್ಮ ಮುಂದಿನ ನಡೆ ಬಗ್ಗೆ ಅವರು ಇದುವರೆಗೆ ಏನೂ ಹೇಳಿಲ್ಲ, ಅವರ ಆಪ್ತರಾಗಿರುವ ಶಶಿಕುಮಾರ್ ಹನಕೆರೆ ಮಾತಾಡಿದ್ದಾರೆ. ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ (unconditional support) ಘೋಷಿಸಿದಾಗ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿರಲಿಲ್ಲ. ಬಿಜೆಪಿ ನಾಯಕರಿಗೆ …
Read More »ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಫಿಕ್ಸ್
ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ನಾಳೆ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಯಾವುದೇ ಷರತ್ತು ಇಲ್ಲದೆ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಜನಾರ್ದನ ರೆಡ್ಡಿ ಸಮಾಲೋಚನೆ ನಡೆಸಿದ್ದರು.
Read More »ಸಿದ್ದರಾಮಯ್ಯ ಇಳಿಸುವವರು ಕಾಂಗ್ರೆಸ್‌ನಲ್ಲೇ ಇದ್ದಾರೆ: ಆರ್.ಅಶೋಕ
ಬೆಂಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಅಲ್ಲಿ ಐವರು ಛಾಯಾ ಮುಖ್ಯಮಂತ್ರಿಗಳಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು. ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸದಿದ್ದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಾಗುತ್ತದೆ’ ಎಂಬ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕದ ಕಾಂಗ್ರೆಸ್ ಒಡೆದ ಮನೆಯಾಗಿದೆ’ ಎಂದರು. ‘ಮುಖ್ಯಮಂತ್ರಿಯವರ ಕಾಲೆಳೆಯಲು ಬೇರೆಯವರು …
Read More »ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ ಕಾಂಗ್ರೆಸ್
ನವದೆಹಲಿ:ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ಕಾಂಗ್ರೆಸ್ ಶನಿವಾರ ನೇಮಕ ಮಾಡಿದೆ. ಲೋಕಸಭಾ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಿಸಲಾಗಿದೆ. ಈ ನೇಮಕದಲ್ಲಿ ಜಾತಿ ಹಾಗೂ ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಕಗ್ಗಂಟನ್ನು ಕೈ ಪಾಳಯ ಬಹುತೇಕ ಬಗೆಹರಿಸಿದೆ. ಅದರ ಬೆನ್ನಲ್ಲೇ, ಪಕ್ಷದ ಸಂಘಟನಾತ್ಮಕ ಬದಲಾವಣೆ ಮಾಡಿದೆ. ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬುದು ಕಾಂಗ್ರೆಸ್‌ನಲ್ಲಿರುವ ನಿಯಮ. ಅನುಕೂಲಕ್ಕೆ ತಕ್ಕಂತೆ ಈ …
Read More »ಜಿಲ್ಲಾಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ಎಚ್ಡಿಡಿ ದೂರು;
ಹಾಸನ: ಗಂಭೀರ ಸ್ವರೂಪದ ಆರೋಪ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ಹಾಸನ ಜಿಲ್ಲಾಧಿಕಾರಿ (Hassan DC ) ಹಾಗೂ ಚುನಾವಣಾಧಿಕಾರಿ ಸತ್ಯಭಾಮಾ (Sathyabhama) ವಿರುದ್ಧ ಮಾರ್ಚ್ 20ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Deve gowda) ಅವರು ದೂರು ನೀಡಿದ್ದಾರೆ.ಉಸ್ತುವಾರಿ ಸಚಿವರ (Minister Rajanna) ಅಣತಿಯಂತೆ ಮಾತ್ರ ಸತ್ಯಭಾಮಾ ಕೆಲಸ ಮಾಡುತ್ತಾರೆ. ಜನರ ಜತೆ ಡಿಸಿ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ವಿರುದ್ಧ …
Read More »ಮಳೆ ಪ್ರಮಾಣ ಕಡಿಮೆ ಬತ್ತಿದ ಮಲಪ್ರಭೆ; ಬಾಯಾರಿದ ಜನತೆ
ರಾಮದುರ್ಗ: ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಮಲಪ್ರಭಾ ನದಿ ಬತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಯಲ್ಲಿ ನೀರು ಆಳಕ್ಕೆ ಇಳಿದಿದೆ. ಇದರಿಂದ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಏಪ್ರಿಲ್ ಕೊನೆಯ ವಾರಕ್ಕೆ ಸಮಸ್ಯೆ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲವಾದ ಮಲಪ್ರಭೆ ಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿದೆ. ಈ ಯೋಜನೆಯಡಿ ಒಳಪಡುವ ಒಟ್ಟು …
Read More »ರಸ್ತೆಗೆ ಬಂದ ಒಂಟಿಸಲಗ
ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಡ- ಬೀಡಿ ರಸ್ತೆಯ (ಬೆಳಗಾವಿ- ತಾಳಗುಪ್ಪ ರಾಜ್ಯ ಹೆದ್ದಾರಿ) ಬೇಕವಾಡ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ಒಂಟಿಸಲಗ ಕಾಣಿಸಿಕೊಂಡಿತು. ಆನೆ ಜುಂಜವಾಡ- ಬೇಕವಾಡ ಮಧ್ಯದಲ್ಲಿ ರಸ್ತೆ ದಾಟಿ ಜುಂಜವಾಡ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಗಳಲ್ಲಿ ನುಗ್ಗಿದೆ. ಆನೆ ಕಂಡು ಜನ ಅದರ ಫೋಟೊ, ವಿಡಿಯೊ ಮಾಡಿಕೊಳ್ಳಲು ಮುಂದಾದರು. ಇದರಿಂದ ಸ್ಥಳದಲ್ಲಿ ಜನಜಂಗುಳಿ ಏರ್ಪಟ್ಟಿತು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಆನೆಯನ್ನು …
Read More »
Laxmi News 24×7