Breaking News

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ: ಶರದ್ ಪವಾರ್

ಮುಂಬೈ: ಶಾಂತಿ ಮತ್ತು ಸಹೋದರತ್ವವನ್ನು ಖಚಿತಪಡಿಸಿಕೊಳ್ಳಲು ದೇಶದ ಸಂವಿಧಾನವನ್ನು ರಕ್ಷಿಸುವ ಅಗತ್ಯವಿದೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಹೇಳಿದರು. ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಕೆಲ ನಾಯಕರು ಸಂವಿಧಾನದ ಬದಲಾವಣೆ ಮಾಡುವ ಮಾತುಗಳನ್ನಾಡುತ್ತಿದ್ದಾರೆ.ಇಂತಹ ಹೇಳಿಕೆಗಳು ಕಳವಳಕಾರಿಯಾಗಿದೆ’ ಎಂದು ಸಂಸದ ಅನಂತಕುಮಾರ್‌ ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿದರು. ‘ಒಬ್ಬ ವ್ಯಕ್ತಿಯ ಹಿತಕ್ಕಾಗಿ ಇಡೀ ದೇಶದ ಪ್ರಜಾಪ್ರಭುತ್ವವನ್ನೇ ನಾಶಪಡಿಸಿದ ನೆರೆಹೊರೆಯ ಕೆಲ ದೇಶಗಳ ಸ್ಥಿತಿ ನಮ್ಮ ದೇಶಕ್ಕೆ ಎಂದಿಗೂ ಬರಬಾರದು …

Read More »

ಹಿಂಡಲಗಾ ಜೈಲಿನ ಮೇಲೆ ಪೊಲೀಸರಿಂದ ದಾಳಿ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದರು. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವ ಸಲುವಾಗಿ ನಗರ ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ್ ನೇತೃತ್ವದಲ್ಲಿ ಪೊಲೀಸರಿಂದ ದಾಳಿ ನಡೆಯಿತು ಒಂದು ಗಂಟೆಗೂ ಹೆಚ್ಚು ಸಮಯ ಕಾರಾಗೃಹದಲ್ಲಿ ತಪಾಸಣೆ ಮಾಡಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹನ್ ಜಗದೀಶ, ‘ಐವರು ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಸಿಬ್ಬಂದಿ ಸೇರಿಕೊಂಡು ದಾಳಿ ಮಾಡಿದ್ದೇವೆ. …

Read More »

ಪಕ್ಷಾಂತರಿಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ: ಸಿರಿಗೆರೆ ಶ್ರೀ

ಚಿತ್ರದುರ್ಗ: ಪಕ್ಷಾಂತರಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ. ಕಾರ್ಯಕರ್ತರ ಅಸಮಾಧಾನ ಹೆಚ್ಚಾಗುತ್ತದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಸದ್ಧರ್ಮ ನ್ಯಾಯ ಪೀಠದಲ್ಲಿ ಮಾತನಾಡಿದ ಶ್ರೀಗಳು, ಪಕ್ಷಾಂತರಗಳಿಗೆ ಕಡಿವಾಣ ಬೀಳದೆ ರಾಜಕೀಯ ಶುದ್ಧೀಕರಣ ಮರೀಚಿಕೆಯಾಗಿದೆ ಎಂದು ಹೇಳಿದ್ದಾರೆ. ರಾಜಕೀಯ ಶುದ್ಧೀಕರಣ ಇಂದಿನ ಅಗತ್ಯವಾಗಿದೆ. ಇದಕ್ಕೆ ಬದ್ಧವಾಗಿರಲು ರಾಜಕಾರಣಿಗಳು ಮುಂದಾಗಬೇಕು. ಪಕ್ಷಾಂತರ ನಿಷೇಧ …

Read More »

BJP ಅಭ್ಯರ್ಥಿ ನರೇಂದ್ರ ಮೋದಿ ಎಂದು ಮತ ಹಾಕಿ: ಜಗದೀಶ ಶೆಟ್ಟರ್

ಬೆನಕಟ್ಟಿ: ನಮ್ಮ ದೇಶದ ಭದ್ರತೆಗೆ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ,ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಶುಕ್ರವಾರ ಬೆನಕಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದರ್ಶನವನ್ನು ಪಡೆದು ಸ್ಥಳೀಯ ಬಿಜೆಪಿ ಮುಖಂಡರ ಭೇಟಿ ಮಾಡಿ ಮಾತನಾಡಿದರು, ನರೇಂದ್ರ ಮೋದಿಯವರ ನಾಯಕತ್ವದ ಆಡಳಿತವನ್ನು ನೋಡಿದ ಪಾಕಿಸ್ಥಾನ ದೇಶದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಣೆಯಾಗಲು ಭಾರತದ ಮೋದಿಯಂತ ನಾಯಕತ್ವ …

Read More »

ಬಿಳಿ ಕೂದಲಿಗೆ ಇಲ್ಲಿದೆ ಶಾಶ್ವತ ಪರಿಹಾರ; ಪಾರ್ಲರ್​ ಹೋಗ್ಬೇಡಿ ಈ ಎಣ್ಣೆಯನ್ನು ಕಾಫಿಪುಡಿಗೆ ಬೆರೆಸಿ ಹಚ್ಚಿದ್ರೆ ಸಾಕು.

ಬೆಂಗಳೂರು: ಬಿಳಿ ಕೂದಲು ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲಮಿಕಲ್ ಇರುವ ಪ್ರಾಡೆಕ್ಟ್​​ ಬಳಕೆ ಮಾಡುತ್ತೇವೆ. ಆದರೆ ಬಿಳಿಕೂದಲು ಸಮಸ್ಯೆಗೆ ಶಾಶ್ವತವಾದ ಪರಿಹಾರ ಮಾತ್ರ ಸಿಗುವುದು ಕಡಿಮೆ. ಹೀಗಿರುವಾಗ ನಾವು ಇಂದು ಹೇಳುತ್ತಿರುವ ಮನೆ ಮದ್ದಿನಿಂದ ನೀವು ನಿಮ್ಮ ಕೂದಲಿನ ಮಸ್ಯೆಗೆ ಯಾವುದೇ ಹಾನಿ ಇಲ್ಲದೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.   ಕಾಫಿ ಪುಡಿ, ಜೇನುತುಪ್ಪ, 1 ಚಮಚ ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ …

Read More »

ಇಫ್ತಾರ್‌ ಕೂಟಕ್ಕಾಗಿ ರಸ್ತೆಯೇ ಬಂದ್‌!

ಮಂಗಳೂರು : ಇಫ್ತಾರ್‌ (iftar) ಕೂಟಕ್ಕಾಗಿ ಇಡೀ ರಸ್ತೆಯನ್ನೇ ಬಂದ್‌ ಮಾಡಿರುವ ಘಟನೆ ಮಂಗಳೂರಲ್ಲಿ(mangaluru) ನಡೆದಿದೆ. ರಸ್ತೆ ತುಂಬೆಲ್ಲಾ ಚೇರ್‌ ಹಾಕಿ ಒಂದಿಡೀ ರಸ್ತೆಯನ್ನೇ ಬಂದ್‌ ಮಾಡಿ ಆಹಾರ ಸೇವನೆಗೆ ವ್ಯವಸ್ಥೆ ಮಾಡಿರುವ ಕ್ರಮಕ್ಕೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.   ಮಂಗಳೂರಿನ ಮುಡಿಪು ಜಂಕ್ಷನ್‌ನಲ್ಲಿ (mudipu junction) ಈ ರೀತಿ ರಸ್ತೆ ಬ್ಲಾಕ್‌ ಮಾಡಿ ಇಫ್ತಾರ್‌ ಆಯೋಜಿಸಲಾಗಿದೆ. ಇದರ ಪರಿಣಾಮ ಟೂ-ವೇ ಇದ್ದ ರಸ್ತೆ ಒನ್‌-ವೇ ಆಗಿದ್ದು, ವಾಹನಗಳೆಲ್ಲಾ …

Read More »

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕಿಗೆ ಜ್ಞಾನಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ

ಮೈಸೂರು : ನಂಜನಗೂಡು ತಾಲ್ಲೂಕಿನ ಹುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕಿ ಪದ್ಮ ನೆಲ್ಲಿತಾಳಪುರ ಅವರಿಗೆ ಜ್ಞಾನ ಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ ಲಭಿಸಿದೆ. ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕೀಯರನ್ನು ಗುರುತಿಸಿ ಸುಮಾರು 29 …

Read More »

ಎಸೆಸೆಲ್ಸಿ ಪರೀಕ್ಷೆ ನಕಲಿಗೆ ಸಹಕಾರ: ನಾಲ್ವರು ಸಹ ಶಿಕ್ಷಕರ ಅಮಾನತು

ಚಿತ್ರದುರ್ಗ: ಎಸೆಸೆಲ್ಸಿ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ಆರೋಪದಲ್ಲಿ ನಾಲ್ವರು ಸಹ ಶಿಕ್ಷಕರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಚಳ್ಳಕೆರೆ ತಾಲೂಕು ಪರಶುರಾಂಪುರ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಳ್ಳಕೆರೆ ತಾಲೂಕು ಪಿ.ಈಬನಹಳ್ಳಿ ಶಾಲೆಯ ಚಂದ್ರಶೇಖರ್‌, ಕೊರ್ಲಕುಂಟೆ ಶಾಲೆಯ ಪ್ರಕಾಶ್‌, ಗೋಸಿಕೆರೆ ರಾಧಾಕೃಷ್ಣ ಶಾಲೆಯ ರಾಘವೇಂದ್ರ ಹಾಗೂ ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ರೇವಣ್ಣ ಅಮಾನತುಗೊಂಡ …

Read More »

BJP: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಈಶ್ವರಪ್ಪ, ಅನಂತ್‌ ಹೆಗಡೆಗಿಲ್ಲ ಅವಕಾಶ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಟಿಕೆಟ್‌ ವಂಚಿತರಾದ ನಳಿನ್‌ ಕುಮಾರ್‌ ಕಟೀಲು ಹಾಗೂ ಪ್ರತಾಪಸಿಂಹ ಅವರಿಗೆ ಅವಕಾಶ ನೀಡಿದೆ. ಆದರೆ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಅನಂತ್‌ ಕುಮಾರ್‌ ಹೆಗಡೆ ಹಾಗೂ ಕೆ.ಎಸ್‌.ಈಶ್ವರಪ್ಪ ಅವರನ್ನು ಪರಿಗಣಿಸದೆ ನಿರ್ಲಕ್ಷಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹಿತ 40 ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಕರ್ನಾಟಕದಲ್ಲಿ ಬಿಜೆಪಿ ಪರ …

Read More »

ಬಿಜೆಪಿ ದೂರಿನ ಬೆನ್ನಲ್ಲೇ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ‌ನಿಂಬಾಳ್ಕರ್ ವರ್ಗಾವಣೆ

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ‌ಇಲಾಖೆಯ ನೂತನ ಆಯುಕ್ತರಾಗಿ 2012ರ ಐಎಎಸ್‌ ಬ್ಯಾಚ್ ನ ಸೂರಳ್ಕರ್ ವಿಕಾಸ್ ಕಿಶೋರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ಗಮಿತ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ನೂತನ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಶನಿವಾರ ಸಂಜೆ ಅಧಿಕಾರ ಹಸ್ತಾಂತರಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿ ಕರ್ತವ್ಯ …

Read More »