Breaking News

ರೈತರ ಬಂಧನಕ್ಕೆ ಸಿಎಂ ಖಂಡನೆ: ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ.

ರೈತರ ಬಂಧನಕ್ಕೆ ಸಿಎಂ ಖಂಡನೆ: ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ. ದೆಹಲಿ(Delhi)ಯಲ್ಲಿ ನಾಳೆ(ಫೆ.13) ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿ(Hubli)ಯ ರೈತರನ್ನು ಭೋಪಾಲ್(Bhopal) ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ತಿಳಿಸಿದ್ದಾರೆ.   ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ದೆಹಲಿಯ ಜಂತರ್ ಮಂತರ್(JantharManthar) ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿಕೊಳ್ಳಲು ಕಳಿಸಿಕೊಡಬೇಕು ಎಂದು‌ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. …

Read More »

ನಿರ್ಮಲಾ ಸೀತರಾಮನ್ ಬೆಂಗಳೂರು ದಕ್ಷಿಣಕ್ಕೆ, ರಾಜೀವ್ ಚಂದ್ರಶೇಖರ್ ಸೆಂಟ್ರಲ್ ಗೆ ; ತೇಜಸ್ವಿ ಸೂರ್ಯ ಎಲ್ಲಿಗೆ?

ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿರುವ ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಹಾಗೂ ಸಯ್ಯದ್ ನಾಸಿರ್ ಹುಸೇನ್ ಅವರು ಏಪ್ರಿಲ್ 2ರಂದು ನಿವೃತ್ತರಾಗಲಿದ್ದಾರೆ ನವದೆಹಲಿ: ರಾಜ್ಯಸಭೆ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ರಾಜ್ಯಸಭೆ ಚುನಾವಣೆಗೆ ತನ್ನ 14 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಸಂಜೆ ಘೋಷಣೆ ಮಾಡಿದೆ. ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ಬಾಗಲಕೋಟೆ ಮೂಲದವರಾಗಿದ್ದು, …

Read More »

ರೋಜಗಾರ್ ಮೇಳದಡಿ 7 ಲಕ್ಷ ಯುವಕರಿಗೆ ಉದ್ಯೋಗ; ಪ್ರಲ್ಹಾದ್‌ ಜೋಶಿ

ಬೆಂಗಳೂರು: ಪ್ರಧಾನ ಮಂತ್ರಿ ಅವರ ರೋಜಗಾರ್ ಮೇಳ (ಉದ್ಯೋಗ ಮೇಳ – Rozgar Mela) ದೇಶದ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಬೆಂಗಳೂರಿನಲ್ಲಿ ಇಂದು ಬಿಎಸ್‌ಎಫ್ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಲ್ಹಾದ್‌ ಜೋಶಿ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯಡಿ ನರೇಂದ್ರ ಮೋದಿ (PM Narendra Modi) ಅವರ ಅವಧಿಯಲ್ಲಿ 7 …

Read More »

2024: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 370 ಸೀಟುಗಳನ್ನು ಗೆಲ್ಲಲಿದೆ: ಮೋದಿ

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಪ್ರದೇಶದ ಜಬುವಾ ಗೆ ಭೇಟಿ ನೀಡಿದ್ದಾರೆ. ಮಧ್ಯಪ್ರದೇಶದ ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಿಟ್ಟ ಆರು ಲೋಕಸಭಾ ಸ್ಥಾನಗಳಲ್ಲಿ ಒಂದಾದ ಝಬುವಾದಲ್ಲಿ ಆದಿವಾಸಿಗಳ ಮೆಗಾ ರ್ಯಾಲಿಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದೇ ವೇಳೆ ರಾಜ್ಯಕ್ಕೆ 7,550 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.ಮುಂಬರಲಿರುವಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಬಿಜೆಪಿಯು ಏಕಾಂಗಿಯಾಗಿ 370 ಸ್ಥಾನಗಳಲ್ಲಿ …

Read More »

ಹೇಳಿಕೆ ನೀಡುವಾಗ ಲಕ್ಷ್ಮಣ ರೇಖೆ ದಾಟಬಾರದು: ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ: ‘ಹೇಳಿಕೆ ನೀಡುವಾಗ ಯಾವ ಪಕ್ಷದ ನಾಯಕರೇ ಇರಲಿ ಲಕ್ಷ್ಮಣ ರೇಖೆ ದಾಟಬಾರದು’ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ದೇಶದ ವಿಭಜನೆ ಮಾಡುವವರನ್ನು ಗುಂಡಿಟ್ಟು ಕೊಲ್ಲುವ ಕಾಯ್ದೆ ತರಬೇಕು ಎಂದು ನೀಡಿರುವ ಹೇಳಿಕೆ ತಪ್ಪು ಎಂದರು. ಯಾರೇ ಆಗಲಿ ಹೇಳಿಕೆ ನೀಡುವಾಗ ಲಕ್ಷ್ಮಣ ರೇಖೆ ದಾಟಬಾರದು. ಗಾಂಧಿ ಅವರ ಹೆಸರನ್ನು ಹೇಳಿಯೇ ಕಾಂಗ್ರೆಸ್ ಇಷ್ಟು ವರ್ಷ …

Read More »

ಮಾತಿನಿಂದ ಮೈತ್ರಿಗೆ ಧಕ್ಕೆ ತರಬೇಡಿ: ರಾಜ್ಯ ನಾಯಕರಿಗೆ ಶಾ ಎಚ್ಚರಿಕೆ

ಮೈಸೂರು: ಜೆಡಿಎಸ್ ನೊಂದಿಗೆ (JDS) ಮೈತ್ರಿ ಹೈಕಮಾಂಡ್ ನಿರ್ಧಾರ. ಈ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಕೇಂದ್ರ ಗೃಹ ಮಂತ್ರಿ (home minister) ಅಮಿತ್‌ ಶಾ (Amit Shah) ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದರು. ಬಿಜೆಪಿ (BJP) ನಾಯಕರ ಜೊತೆ ಮೈಸೂರಿನ (mysore) ಖಾಸಗಿ ಹೊಟೇಲ್ ನಲ್ಲಿ ಮೈಸೂರು, ಚಾಮರಾಜನಗರ (chamrajnagar), ಮಂಡ್ಯ (mandya), ಹಾಸನ (hassan) ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಸಭೆ ನಡೆಸಿದ ಅವರು, ಮೈತ್ರಿ ಧರ್ಮ ಪಾಲಿಸುವಂತೆ …

Read More »

ಆರ್​ಎಸ್​ಎಸ್​ ಕಾರ್ಯಕರ್ತ ನಾರಾಯಣ ಭಾಂಡಗೆ ಬಿಜೆಪಿ ರಾಜಸಭೆ ಟಿಕೆಟ್​; ಇಲ್ಲಿದೆ ವ್ಯಕ್ತಿಚಿತ್ರ

ಬಾಗಲಕೋಟೆ, ಫೆ.11: ರಾಜ್ಯಸಭೆ ಚುನಾವಣೆಗೆ (Rajya Sabha elections) ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟ ಮಾಡಲಾಗಿದ್ದು, ಮಾಜಿ ಸಚಿವ ಸೋಮಣ್ಣಗೆರಾಜ್ಯಸಭೆ ಟಿಕೆಟ್​ ಕೈತಪ್ಪಿದೆ. ಅವರ ಬದಲು ಬಾಗಲಕೋಟೆಯ ನಾರಾಯಣ ಭಾಂಡ(Narayan Banda)ಗೆ ಟಿಕೆಟ್​​ ನೀಡಲಾಗಿದೆ. ಈ ಹಿನ್ನಲೆ ಬಾಗಲಕೋಟೆ ನಾರಾಯಣ ಬಾಂಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಾಂಡ ಅವರಿಗೆ ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಪಟ್ಟಿದ್ದಾರೆ. ಮನೆಯಲ್ಲಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರ ಪರ ಘೋಷಣೆ …

Read More »

ಬಿವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಶಾಸಕ ಯತ್ನಾಳ್

​ಹಾವೇರಿ, ಫೆಬ್ರವರಿ 11: ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗ್ರಾಮದ ಕೋಡಿಯಾಲ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಟ್ಯಾಕ್ ಮಾಡಿದ್ದಾರೆ. ಬಿವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ. ಅವರೊಂದಿಗೆ ನನ್ನದು ಯಾವುದೇ ವ್ಯವಹಾರವಿಲ್ಲ​. ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ ಎಂದು ವಾಗ್ದಾಳಿ ಮಾಡಿದ್ದಾರೆ.ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ …

Read More »

ಮನೆ ಸುಡುವ ಬಿಜೆಪಿಯನ್ನು ಮುಸ್ಲಿಂ ಸಮುದಾಯ ತಿರಸ್ಕರಿಸುತ್ತದೆ: ಉದ್ಧವ್ ಠಾಕ್ರೆ

ಮುಂಬಯಿ: ಮುಸ್ಲಿಂ ಸಮುದಾಯವು (Muslim community) ತಮ್ಮ ಮನೆಯಲ್ಲಿ ಒಲೆ ಹೊತ್ತಿಸುವ ಹಿಂದುತ್ವದ ಬ್ರ್ಯಾಂಡ್ ಅನ್ನು ಬೆಂಬಲಿಸುತ್ತಿದೆ ಮತ್ತು ತಮ್ಮ ಮನೆಗಳನ್ನು ಸುಡುವ ಭಾರತೀಯ ಜನತಾ ಪಕ್ಷವನ್ನು (BJP) ತಿರಸ್ಕರಿಸುತ್ತಿದೆ ಎಂದು ಶಿವಸೇನಾ (Shivasena-UTB) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಹೇಳಿದರು.   ಮುಂಬಯಿ ನಲ್ಲಿ (mumbai) ಶಿವಸೇನಾ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ನಮ್ಮೊಂದಿಗೆ ಬರುತ್ತಿದೆ. ನಾನು ಶಿವಸೇನೆಯ ಪಕ್ಷದ ಮುಖ್ಯಸ್ಥ ಮತ್ತು ಹಿಂದೂ …

Read More »

ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿಯೂ ಎನ್​ಡಿಎ ಗೆಲ್ಲುವ ವಿಶ್ವಾಸ: ಬಿವೈ ವಿಜಯೇಂದ್ರ

ಮೈಸೂರು, : ಬಿಜೆಪಿಯ (BJP) ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಅವರ ಮೈಸೂರು (Mysuru) ಪ್ರವಾಸ ಯಶಸ್ವಿಯಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಭಾನುವಾರ ಸಂಜೆ ತಿಳಿಸಿದರು. ಮೈಸೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ ಅವರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮುಖಂಡರ ಜತೆ ಚರ್ಚೆಯಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕೂಡ ಎನ್​ಡಿಎ ಮೈತ್ರಿಕೂಟ ಗೆಲ್ಲುವ ವಾತಾವರಣ ಇದೆ. ಪ್ರತಿ ಬೂತ್​ನಲ್ಲೂ ಶೇ 10ರ ವೋಟ್​ ಹೆಚ್ಚಳ ಮಾಡಬೇಕು …

Read More »