ಅಯೋಧ್ಯೆ: ಇಂದು (ಬುಧವಾರ) ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸರ್ವಾಲಂಕೃತ ಬಾಲರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶಿಸಿದ್ದು, ಸುಮಾರು 4 ನಿಮಿಷಗಳ ಕಾಲ ಸೂರ್ಯ ರಶ್ಮಿ ತಿಲಕದಂತೆ ರಾಮನ ಹಣೆಮೇಲೆ ಕಂಗೊಳಿಸಿತು. ಕಳೆದ ವಾರ ಬಾಲರಾಮನ ಹಣೆಗೆ ಸೂರ್ಯ ತಿಲಕವಿಡುವ ಪ್ರಯೋಗ ಮಾಡಲಾಗಿತ್ತು. ಇದು ಯಶಸ್ವಿಯಾಗಿತ್ತು. ಇಂದು ರಾಮ ಜನಿಸಿದ ಸಮಯಕ್ಕೆ ಸರಿಯಾಗಿ ಸೂರ್ಯನ ಕಿರಣ ಹಣೆಯನ್ನು ಸ್ಪರ್ಶಿಸಿದೆ. 58 ಮಿ.ಮೀ. ಗಾತ್ರದ ಸೂರ್ಯ ರಶ್ಮಿಯು ಬಾಲರಾಮನ ಹಣೆಯ ಕೇಂದ್ರದಲ್ಲಿ …
Read More »ಹಲವು ವರ್ಷಗಳ ತ್ಯಾಗದ ಫಲ’ : `ರಾಮನವಮಿ’ಯಂದು ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ
ನವದೆಹಲಿ: ಇಂದು ಭಗವಾನ್ ಶ್ರೀರಾಮನ ಜನ್ಮದಿನದ ಹಿನ್ನೆಲೆಯಲ್ಲಿ ರಾಮನವಮಿಗೆ ದೇಶದ ಜನತೆಗೆ ಪ್ರಧಾನಿ ಮೋದಿ ಅವರು ಶುಭ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ , “ಭಗವಾನ್ ಶ್ರೀ ರಾಮನ ಜನ್ಮ ದಿನಾಚರಣೆ, ರಾಮನವಮಿಯ ಸಂದರ್ಭದಲ್ಲಿ ದೇಶಾದ್ಯಂತ ಇರುವ ನನ್ನ ಕುಟುಂಬ ಸದಸ್ಯರಿಗೆ ಅನಂತ ಶುಭಾಶಯಗಳು! ಈ ಶುಭ ಸಂದರ್ಭದಲ್ಲಿ, ನನ್ನ ಹೃದಯವು ಮುಳುಗಿದೆ ಮತ್ತು ನೆರವೇರಿದೆ” ಎಂದು ಈ ವರ್ಷದ ಜನವರಿ 22 ರಂದು ಅಯೋಧ್ಯೆಯಲ್ಲಿ …
Read More »ಇಂದು ರಾಹುಲ್ ರಾಜ್ಯಕ್ಕೆ ; ಮಂಡ್ಯ, ಕೋಲಾರದಲ್ಲಿ ರೋಡ್‌ಶೋ, ಸಾರ್ವಜನಿಕ ಸಭೆ
ಬೆಂಗಳೂರು: ಚುನಾವಣೆ ಘೋಷಣೆ ಯಾದ ಅನಂತರ ಬುಧವಾರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಹೈವೋಲ್ಟೆàಜ್ ಕ್ಷೇತ್ರ ಗಳಲ್ಲಿ ಒಂದಾದ ಮಂಡ್ಯದಲ್ಲಿ ಚುನಾ ವಣ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಈಗಾಗಲೇ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಚುನಾವಣ ಕಹಳೆ ಮೊಳಗಿಸಿದ್ದಾರೆ. ಆದರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಇನ್ನೂ ರಾಜ್ಯದ ಅಖಾಡಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡಿರಲಿಲ್ಲ. ರಾಹುಲ್ ಗಾಂಧಿ ಆಗಮಿಸುವ ಮೂಲಕ ಪಕ್ಷದಲ್ಲಿ ಸಂಚಲನ ಮೂಡಿಸಲಿದ್ದಾರೆ.
Read More »ಮೋದಿ ಭ್ರಷ್ಟಾಚಾರದ ವಿಶ್ವ ಚಾಂಪಿಯನ್ ; ರಾಹುಲ್
ಗಾಜಿಯಾಬಾದ್, ಏ. 17 (ಪಿಟಿಐ) : ಚುನಾವಣಾ ಬಾಂಡ್‍ಗಳ ಯೋಜನೆಯು ವಿಶ್ವದಲ್ಲೆ ಅತ್ಯಂತ ದೊಡ್ಡ ಸುಲಿಗೆ ಯೋಜನೆಯಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಚಾಂಪಿಯನ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಇಂಡಿಯಾ ಬಣದ ಪರವಾಗಿ ಬಲವಾದ ಒಳಹರಿವು ಇದೆ ಮತ್ತು ಬಿಜೆಪಿ 150 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು …
Read More »ಶಾಸಕ ವಸಂತ್ ಆಸ್ನೋಟಿಕರ್ ಶೌಟೌಟ್ ಕೇಸ್: ಆರೋಪಿಗೆ ಜೀವಾವಧಿ ಶಿಕ್ಷೆ ಕಾಯಂ
ಬೆಂಗಳೂರು, ಏಪ್ರಿಲ್ 17: ಕಳೆದ 24 ವರ್ಷದ ಹಿಂದೆ ಕಾರವಾರ ಶಾಸಕರಾಗಿದ್ದ ವಸಂತ್ ಆಸ್ನೋಟಿಕರ್ ಶೂಟೌಟ್ ಪ್ರಕರಣದ ಆರೋಪಿ ಶಾರ್ಪ್ ಶೂಟರ್ ರಾಜನ್ ಅಲಿಯಾಸ್ ಸಂಜಯ್ ಕಿಶನ್ ಮೊಹಿತೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೊರ್ಟ್ ಎತ್ತಿಹಿಡಿದಿದೆ.ಹಾಗಾಗಿ ಆತ ಶಿಕ್ಷೆಯನ್ನು ಅನುಭವಿಸಲೇಬೇಕಾಗಿದೆ. ಪ್ರಕರಣದ ಆರನೇ ಆರೋಪಿಯಾಗಿದ್ದ ಮುಂಬೈ ಪಶ್ಚಿಮದ ಅಂಧೇರಿಯ ಮೂಲದ ಸಂಜಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಮತ್ತು ರಾಮಚಂದ್ರ ಹುದ್ದಾರ್ ಅವರಿದ್ದ …
Read More »ಧಾರವಾಡ: ಮನೆಯೊಂದರಲ್ಲಿ ಕಂತೆ ಕಂತೆ ಹಣ ಪತ್ತೆ; ಸುಮಾರು ₹ 18 ಕೋಟಿ?
ಧಾರವಾಡ: ನಗರದ ನಾರಾಯಣಪುರ ಮುಖ್ಯರಸ್ತೆಯ ಆರ್ನಾ ರೆಸಿಡೆನ್ಸಿಯ ಮೂರನೇ ಅಂತಸ್ತಿನ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಚೀಲಗಳಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ. ಸುಮಾರು ₹ 18 ಕೋಟಿ ಹಣ ಇದೆ ಎಂದು ಹೇಳಲಾಗುತ್ತಿದ್ದು, ಎಣಿಕೆ ಪೂರ್ಣಗೊಂಡ ಬಳಿಕ ನಿಖರ ಮಾಹಿತಿ ಸಿಗಲಿದೆ. ಮನೆಯಲ್ಲಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಮನೆಗೆ ತೆರಳಿ ತಪಾಸಣೆ ನಡೆಸಿದರು. ಆಗ ತಿಜೋರಿಯ ಚೀಲಗಳಲ್ಲಿ ಹಣದ ಕಂತೆಗಳು ಸಿಕ್ಕವು. ಆದಾಯ …
Read More »ಯುಪಿಎಸ್ಸಿ: ಹುಬ್ಬಳ್ಳಿಯ ಕೃಪಾ ಜೈನ್‌ಗೆ 440ನೇ ರ‍್ಯಾಂಕ್
ಹುಬ್ಬಳ್ಳಿ: ಯುಪಿಎಸ್ಸಿಯಲ್ಲಿ 440ನೇ ರ‍್ಯಾಂಕ್ ಪಡೆಯುವ ಮೂಲಕ ಇಲ್ಲಿನ ರಾಜನಗರದ ನಿವಾಸಿ ಕೃಪಾ ಜೈನ್ ಜಿಲ್ಲೆಗೆ ಹೆಸರು ತಂದಿದ್ದಾರೆ. ಇವರ ತಂದೆ ಅಭಯ ಪಾರ್ಲೆಚಾ ಇಲ್ಲಿನ ಎಪಿಎಂಸಿಯಲ್ಲಿ ದಿನಸಿ ಹೋಲ್‌ಸೇಲ್ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಇಂದಿರಾ ಗೃಹಿಣಿ. ಮೂಲತಃ ಹೊಸಪೇಟೆಯವರು. ಬಹಳ ವರ್ಷಗಳ ಹಿಂದೆಯೇ ಹುಬ್ಬಳ್ಳಿಗೆ ಬಂದು ನೆಲೆಯೂರಿದ್ದಾರೆ. ಕೃಪಾ ಜೈನ್ ಹುಬ್ಬಳ್ಳಿಯಲ್ಲಿಯೇ ಜನಿಸಿದ್ದಾರೆ. ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಡಿ.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರೇರಣಾ ಕಾಲೇಜಿನಲ್ಲಿ 2016ರಲ್ಲಿ ಪಿಯುಸಿ …
Read More »ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ
ಚನ್ನಮ್ಮನ ಕಿತ್ತೂರು: ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ತಡೆರಹಿತ ರಾಜಹಂಸ ಬಸ್ ತಾಲ್ಲೂಕಿನ ತಿಮ್ಮಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು 10 ಪ್ರಯಾಣಿಕರಿಗೆ ಗಾಯಗಳಾಗಿವೆ. ಹೆದ್ದಾರಿ ಬದಿಗಿರುವ ಕಬ್ಬಿಣದ ತಡೆ ಸರಳುಗಳನ್ನು ಕಿತ್ತುಕೊಂಡು ಸರ್ವೀಸ್ ರಸ್ತೆಗೆ ಬಂದು ಬಸ್ ಬಿದ್ದಿದೆ. ಭಾರಿ ಸಪ್ಪಳವಾಗಿದ್ದರಿಂದ ತಿಮ್ಮಾಪುರ ಗ್ರಾಮಸ್ಥರು ಧಾವಿಸಿ ಬಂದು ವಾಹನದಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕರನ್ನು ಹೊರತೆಗೆಯುವಲ್ಲಿ ನೆರವಾದರು. ಗಾಯಾಳುಗಳನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. …
Read More »ನಿಪ್ಪಾಣಿ | ಸಿಇಟಿ ಪರೀಕ್ಷೆ: ಉಚಿತ ಬಸ್‍ಗಳ ವ್ಯವಸ್ಥೆ
ನಿಪ್ಪಾಣಿ: ಏ.18 ಹಾಗೂ 19ರಂದು ಜರುಗಲಿರುವ ಸಿಇಟಿ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ(ವಿಎಸ್‍ಎಂಎಸ್‍ಆರ್‌ಕೆಐಟಿ)ದಿಂದ ಬಸ್‍ಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಉಮೇಶ ಪಾಟೀಲ ತಿಳಿಸಿದ್ದಾರೆ. ತಾಂತ್ರಿಕ ಮಹಾವಿದ್ಯಾಲಯ (ಪರೀಕ್ಞಾ ಕೇಂದ್ರ ಸಂಖ್ಯೆ – 315)ದಲ್ಲಿ ವಿದ್ಯಾರ್ಥಿಗಳ ಹಾಗೂ ಪಾಲಕರ ಅನುಕೂಲಕ್ಕಾಗಿ ಬಸ್‍ಗಳನ್ನು ಉಚಿತವಾಗಿ ಬಿಡಲಾಗುವುದು. ಪರೀಕ್ಷೆಗಳು ನಡೆಯಲಿರುವ ಎರಡೂ ದಿನ ಬೆಳಿಗ್ಗೆ 8.30 ರಿಂದ 9.30ರ ವರೆಗೆ ಸ್ಥಳೀಯ ಬಸ್ …
Read More »ಚಿಕ್ಕೋಡಿ ಲೋಕಸಭಾ ಕ್ಷೇತ್ರ | ತಿಂಗಳಲ್ಲಿ 79 ಪ್ರಕರಣ:₹1.17 ಕೋಟಿ ವಶ
ಚಿಕ್ಕೋಡಿ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ಏಪ್ರಿಲ್ 16ರವರೆಗೆ ₹1.17 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು ₹ 1.17 ನಗದು, ₹ 7.05 ಲಕ್ಷ ಮೌಲ್ಯದ 1948.151 ಲೀಟರ್ ಮದ್ಯ, ₹ 2.21 ಲಕ್ಷ ಮೌಲ್ಯದ 8.813 ಕೆ.ಜಿ. ಮಾದಕ, ಅಮಲು ಪದಾರ್ಥಗಳು ಹಾಗೂ ₹ 9.88 …
Read More »
Laxmi News 24×7