Breaking News

ಜೆಡಿಎಸ್‌ ನಾಯಕ ಎಚ್. ಡಿ. ದೇವೇಗೌಡರ ಶುಭಾಶಯ ಕನ್ನಡಿಗರ ಗಮನ ಸೆಳೆದಿದೆ.

Spread the love

ನವದೆಹಲಿ(ಜು.10): ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಗೆ ಇಂದು 69ನೇ ಹುಟ್ಟುಹಬ್ಬ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ಗಣ್ಯರು ರಾಜನಾಥ್‌ ಸಿಂಗ್‌ಗೆ ಶುಭ ಕೋರಿದ್ದಾರೆ. ಆದರೆ ಈ ಎಲ್ಲಾ ಶುಭಾಶಯಗಳ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ನಾಯಕ ಎಚ್. ಡಿ. ದೇವೇಗೌಡರ ಶುಭಾಶಯ ಕನ್ನಡಿಗರ ಗಮನ ಸೆಳೆದಿದೆ.

ಹೌದು ಮಾಜಿ ಪ್ರಧಾನಿ ದೇವೇಗೌಡರು ರಕ್ಷಣಾ ಸಚಿವರಿಗೆ ಕನ್ನಡದಲ್ಲೇ ಹುಟ್ಟುಹಬ್ಬದಶುಭಾಶಯ ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ದೇವೇಗೌಡರು ‘ರಾಜನಾಥ್‌ ಸಿಂಗ್‌ಜೀ ನಿಮ್ಮ ಜೀವನ ಸದಾ ಸುಖ, ಸಂತೋಷ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಆಶಿಸುವೆ’ ಎಂದು ಬರೆದಿದ್ದಾರೆ.

ಕನ್ನಡದಲ್ಲೇ ಧನ್ಯವಾದ ಎಂದ ರಕ್ಷಣಾ ಸಚಿವ

ಇನ್ನು ದೇವೇಗೌಡರ ಶುಭಾಶಯದ ಈ ಟ್ವೀಟ್‌ಗೆ ರಾಜನಾಥ್‌ ಸಿಂಗ್‌ ಕೂಡಾ ‘ಧನ್ಯವಾದಗಳು ನಿಮ್ಮ ಶುಭ ಹಾರೈಕೆಗಳಿಗೆ..’ ಎಂದು ಕನ್ನಡದಲ್ಲೇ ಉತ್ತರಿಸಿದ್ದಾರೆ. ಒಟ್ಟಾರೆಯಾಗಿ ಕನ್ನಡದ ಈ ಶುಭಾಶಯ ಸದ್ಯ ಕರ್ನಾಟಕ ಮಂದಿಗೆ ಖುಷಿ ಕೊಟ್ಟಿದೆ.


Spread the love

About Laxminews 24x7

Check Also

SSLC ಪರೀಕ್ಷೆ| 625 ಅಂಕದ ಬದಲು 525ಕ್ಕೆ ಇಳಿಕೆ

Spread the loveಬೆಂಗಳೂರು: ಇನ್ನು ಮುಂದೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ  625ರ ಬದಲಿಗೆ 525 ಅಂಕಗಳಿಗೆ ನಡೆಸಲು ಕರ್ನಾಟಕ ಸರ್ಕಾರ ಮಹತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ