Breaking News

ಫೆ.8ರಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Spread the love

ಬೆಳಗಾವಿ:ನಗರದ ಕೆಎಲ್‌ಎಸ್ ಗೊಗಟೆ ಕಾಲೇಜಿನ ಕೆ.ಕೆ.ವೇಣುಗೋಪಾಲ ಸಭಾಂಗಣದಲ್ಲಿ ಫೆ.8ರಿಂದ 13ರ ವರಗೆ ಅಕಾಡೆಮಿ ಆಫ್ ಕಂಪೇರೆಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ (ಎಸಿಪಿಆರ್) ಮತ್ತು ಕೇಂದ್ರ ಸಂಸ್ಕೃತ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರಮಟ್ಟದ ತತ್ವಜ್ಞಾನಿ ಅಧಿವೇಶನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸಿಪಿಆರ್ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಝಿರಲಿ  ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಮಕ್ಕಳಿಗೆ, ಯುವಕರಿಗೆ ಭಕ್ತಿ ಮತ್ತು ಯೋಗದ ಕುರಿತು ಹಲವು ವಿಚಾರವನ್ನು ಪರಿಚಯಿಸುವ ಉದ್ದೇಶದಿಂದ ಈ ರಾಷ್ಟ್ರಮಟ್ಟದ ವಿಚಾರ ಸಂಕಿರಣ  ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಫೆ. 8ರಂದು ಜರುಗಲಿರುವ ರಾಷ್ಟ್ರಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಇದರಲ್ಲಿ ಭಕ್ತಿ ಪಂಥದಲ್ಲಿ ಕೆಲಸ ಮಾಡಿದಂತಹ ಎಲ್ಲಾ ಧರ್ಮದವರ ಸಂತರ ಭಾವಚಿತ್ರ ಬಿಡಿಸಲು ಅವಕಾಶ ಕಲ್ಪಿಸಲಾಗಿದೆ. ಫೆ. 9ರಂದು ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆ ಹಾಗೂ ಫೆ.10 ಸಂಗೀತ ಸ್ಪರ್ಧೆಗಳು ನಡೆಯಲಿದ್ದು,ಈ ಎಲ್ಲಾ ಸ್ಪರ್ಧೆಗಳಿಗೂ ಒಂದರಿಂದ ಮೂರು ಆಕರ್ಷಕ ಬಹುಮಾನ, ಸ್ಮರಿಣಿಕೆಗಳು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ಫೆ.11ರಿಂದ 13ರವರೆಗೆ ಮೂರು ದಿನಗಳ ನಡೆಯಲಿರುವ ರಾಷ್ಟ್ರಮಟ್ಟದ ತತ್ವಜ್ಞಾನಿಗಳ ಅಧಿವೇಶನಕ್ಕೆ  ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸಿ.ಎಂ.ತ್ಯಾಗರಾಜ ಚಾಲನೆ ನೀಡಲಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ  ವಿಶೇಷ ಉಪನ್ಯಾಸ ನೀಡಲಿದ್ದಾರೆ.  ಹೈಕೋರ್ಟ್ ನ್ಯಾಯಾಧೀಶ ವಿ. ಶ್ರೀಶಾನಂದ ಭಾಗವಹಿಸಲಿದ್ದಾರೆ ಎಂದು ವಿವರಿದರು.
ಸಂಸ್ಥೆಯ ಉಪಾಧ್ಯಕ್ಷ ಸುಬ್ರಹ್ಮಣ್ಯಂ ಭಟ್. ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ವಿ.ಎಸ್.ದೇಶಪಾಂಡೆ,ರೋಹಿತ್ ಉಮನಾಬಾದಿಮಠ ಇತರರಿದ್ದರು.

Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂ ನಿರ್ಧರಿಸುತ್ತಾರೆ: ಸಚಿವ ಸತೀಶ್‌ ಜಾರಕಿಹೊಳಿ

Spread the loveಬೆಳಗಾವಿ: ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನಿರ್ಧಾರ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ