ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಇದೆ. ಮೆಟ್ರೋ ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ.
ಬಿಎಂಆರ್ಸಿಎಲ್ ಬೋರ್ಡ್ ಮೀಟಿಂಗ್ನಲ್ಲಿ ಶೇ.5 ರಷ್ಟು ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ದರ ಏರಿಕೆ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಮಾಡಬೇಕು. ಕಳೆದ ವರ್ಷ ಫೆಬ್ರವರಿ 9ರಂದು 100%ರಷ್ಟು ಟಿಕೆಟ್ ದರ ಏರಿಕೆ ಆಗಿತ್ತು. ಪ್ರಯಾಣಿಕರ ಆಕ್ರೋಶದಿಂದ 3 ದಿನಗಳ ನಂತರ 70%ಗೆ ಇಳಿಕೆ ಮಾಡಲಾಗಿತ್ತು.
ಈ ವರ್ಷ ದರ ಏರಿಕೆ ಮಾಡದಿದ್ದರೆ ಮುಂದಿನ ವರ್ಷ 10%ರಷ್ಟು ದರ ಏರಿಕೆ ಮಾಡಬೇಕಾಗುತ್ತದೆ ಎಂದು ನಮ್ಮ ಮೆಟ್ರೋ ಹೇಳುತ್ತಿದೆ.
Laxmi News 24×7