Breaking News

ಕರ್ನಾಟಕದಲ್ಲೇ ಬೆಳಗಾವಿ ಉಳಿಸಲು ಹೋರಾಡಿದ್ದ ನಾಗನೂರು ಶ್ರೀ

Spread the love

ಅಥಣಿ(ನ.01): ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಗ್ರಗಣ್ಯರಲ್ಲಿ ಬೆಳಗಾವಿ ರುದ್ರಾಕ್ಷಿ ಮಠದ ನಾಗನೂರಿನ ಡಾ. ಶಿವಬಸವ ಸ್ವಾಮೀಜಿಯೂ ಒಬ್ಬರು. ಅವರು ಸ್ವಾತಂತ್ರ್ಯಕ್ಕೆ ಎಷ್ಟು ಶ್ರಮಿಸಿದ್ದರೋ ಅಷ್ಟೇ ಶ್ರಮವಹಿಸಿ ಗಡಿ ನಾಡುವ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.

ಆಗ ಕನ್ನಡ-ಮರಾಠಿಗರ ಭಾಷಾ ಏಕೀಕರಣ ದನಿ ಮುಗಿಲೆತ್ತರಕ್ಕೆ ಏರಿತ್ತು. ಕೇಂದ್ರ ಸರ್ಕಾರ ಫಜಲ್‌ ಅಲಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಿಸಿತ್ತು. ಈ ಸಮಿತಿ ಬೆಳಗಾವಿಗೆ ಭೇಟಿ ನೀಡಿದ್ದಾಗ ಸಮಿತಿಯ ಮುಂದೆ ಶಿವಬಸವ ಸ್ವಾಮೀಜಿಯವರು ತಮ್ಮ ಹೇಳಿಕೆಯನ್ನು ಕನ್ನಡಿಗರ ಪರವಾಗಿ ಸಮಿತಿಗೆ ಅರ್ಥವಾಗುವಂತೆ ಮಂಡಿಸಿದರು. ಸ್ವಾಮೀಜಿ ಅವರ ಹೇಳಿಕೆಯಲ್ಲಿನ ಭೌಗೋಳಿಕ, ಐತಿಹಾಸಿಕ, ಸಾಮಾಜಿಕ ಕನ್ನಡ ಭಾಷೆಯ ಅಂಶಗಳು ಸಮಿತಿ ಮೇಲೆ ಪ್ರಭಾವ ಬೀರಿದವು. ಸ್ವಾಮೀಜಿ ಅವರ ಹೇಳಿಕೆಗೆ ಸಮನಾಂತರವಾಗಿ ಮರಾಠ ಭಾಷಿಕರ ಹೇಳಿಕೆಗಳು ಬರಲೇ ಇಲ್ಲ. ಈ ವಿಷಯವನ್ನು ಸಮಿತಿಯವರು ಪರೋಕ್ಷವಾಗಿ ಪ್ರಸ್ತಾಪಿಸಿದರು. ಆಗಲೇ ಬೆಳಗಾವಿ ಮರಾಠಿಗರಿಗೆ ಧಕ್ಕುವುದಿಲ್ಲ ಎಂಬ ಭೀತಿ ಆರಂಭವಾಯಿತು.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ