ಮುಂಬೈ : ಮುಂಬೈನಲ್ಲಿ ಸುರಿಯುತ್ತಿರುವ ಸತತ ಮಾನ್ಸೂನ್ ಮಳೆಯಿಂದ ಮುಂಬೈ ನಗರದ ಕಟ್ಟಡವೊಂದು ಕುಸಿದು ಬಿದ್ದಿದೆ.
ಮಲಾಡ್ West ನ ಈ ಕಟ್ಟಡ ಕುಸಿತಕ್ಕೆ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 15 ಹೆಚ್ಚು ಜನರನ್ನು ಇದುವರೆಗೆ ರಕ್ಷಿಸಲಾಗಿದೆ.
ಕಟ್ಟಡ ಕುಸಿಯುತ್ತಿದ್ದಂತೆ ಬದಿಗೆ ಇರುವ 3 ಕಟ್ಟಡಗಳಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಕ್ಷಿಪ್ರಗತಿಯಲ್ಲಿ ಸಾಗಿದೆ.
ಮುಂದಿನ ನಾಲ್ಕು ದಿನಗಳವರೆಗೆ ಮುಂಬೈ, ಥಾಣೆ, ಪಾಲ್ಘರ್ ಮತ್ತು ರಾಯಗಡ್ ಭಾಗಗಳಲ್ಲಿ ಭಾರತದ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಜೂನ್ 11 ಮತ್ತು 13 ರ ನಡುವೆ 200 ಎಂಎಂ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 15 ರವರೆಗೆ, ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ಮಾನ್ಸೂನ್‌ನ ಅಧಿಕೃತ ಪ್ರಾರಂಭವಾಗಿದ್ದಕ್ಕೆ, ಹಲವಾರು ಪ್ರದೇಶಗಳಲ್ಲಿ 300 ಮಿ.ಮೀ. ಮಳೆಯಾದ ವರದಿಯಾಗಿದೆ. 12 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾದ ಪ್ರದೇಶಗಳಿವು.
ಪೂರ್ವ ಉಪನಗರಗಳಲ್ಲಿ ಸಿಯಾನ್ (283 ಮಿಮೀ), ಧಾರವಿ (277 ಮಿಮೀ) ಮತ್ತು ವಿಖ್ರೋಲಿ (285 ಮಿಮೀ)
ಒಟ್ಟಾರೆ ಕೊರೋನಾ ನಡುವೆ ಮಳೆಯ ಕಾಟ ಮುಂಬಯಿಗರನ್ನು ಹೈರಾಣಾಗಿಸಿದೆ.
Laxmi News 24×7