ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಎಂದರೆ ಅದು ಗಜಪಡೆ. ಸದ್ಯ ಗಜಪಡೆಯನ್ನು ಸಿದ್ದಪಡಿಸಲಾಗುತ್ತಿದೆ. ಆನೆಗಳಿಗೆ ಅರಮನೆಯ ಆವರಣದ ತಾತ್ಕಾಲಿಕ ಸ್ನಾನದ ಹೊಂಡದಲ್ಲಿ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ.
ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕೆಲಸ ಆರಂಭವಾಗಿದೆ. ಹುಣಸೂರು ಮೂಲದ ಒಟ್ಟು 5 ಕಲಾವಿದರು ದಸರಾ ಆನೆಗಳಿಗೆ ಪ್ರತೀ ಬಾರಿಯಂತೆ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಿದ್ದಾರೆ. ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ,
ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ ಹಾಗೂ ಹೂವು ಬಳ್ಳಿಗಳ ಅಲಂಕಾರ ಮಾಡಲಾಗುತ್ತೆದೆ.
ಅಲ್ಲದೆ ಕಣ್ಣಿನ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸಲಾಗುತ್ತಿದೆ. ಆನೆಗಳ ದೇಹದ ಗಾತ್ರಕ್ಕೆ ಅನುಸಾರವಾಗಿ ಬಣ್ಣದ ಚಿತ್ತಾರ ಮೂಡುತ್ತಿದೆ. ಅಭಿಮನ್ಯು, ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಗಳು ಬಣ್ಣದ ಚಿತ್ತಾರದಲ್ಲಿ ಮಿಂದೇಳುತ್ತಿವೆ. ಕಲಾವಿದ ನಾಗಲಿಂಗಪ್ಪ ಕಳೆದ 16 ವರ್ಷಗಳಿಂದ ದಸರಾ ಆನೆಗಳಿಗೆ ಚಿತ್ತಾರ ಮೂಡಿಸುತ್ತಿದ್ದಾರೆ.
ದಸರಾ ಆನೆಗಳಿಗೆ ವಿಶೇಷ ಆಹಾರವನ್ನು ಮಾವುತರು ಮಾಡುತ್ತಾರೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ದಣಿಯದಂತೆ ಅವುಗಳಿಗೆ ಆರೈಕೆ ಮಾಡಲಾಗುತ್ತೆ. ಬೆಣ್ಣೆ, ಬೇಳೆ, ಉದ್ದು, ಗೋದಿ, ಬೆಲ್ಲ ಸೇರಿ ಹಲವು ಪೌಷ್ಟಿಕಾಂಶದ ಆಹಾರವನ್ನು ಮೆರವಣಿಗೆಯಲ್ಲಿ ಭಾಗಿಯಾಗುವ ಎಲ್ಲಾ 5 ಆನೆಗಳಿಗೂ ನೀಡಲಾಗುತ್ತೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News