ಮೈಸೂರು: ಇಬ್ಬರು ಬಾಲಕರು ಸೇರಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಸ್ಕೂಟರ್ ಮೆಕ್ಯಾನಿಕ್ ಮಹಮದ್ ಶುಹೇಬ್ (19) ಬಂಧಿತ ಆರೋಪಿ. ಹಾಗೂ ಕಳ್ಳತನಕ್ಕೆ ಸಾಥ್ ನೀಡಿದ್ದ 17 ವರ್ಷದ ಬಾಲಕ ಹಾಗೂ 15 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕಳುವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದರು. ಅದರಲ್ಲೂ ಸಿಲ್ವರ್ ಕಲರ್ ದ್ವಿಚಕ್ರ ವಾಹನಗಳೇ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದರು. ಕದ್ದ ಬೈಕ್ ನಂಬರ್ ಪ್ಲೇಟ್ ಬದಲಿಸಿ ವೀಲಿಂಗ್ ಮಾಡಲು ಬಳಸುತ್ತಿದ್ದರು. ಉದಯಗಿರಿ, ಎನ್ ಆರ್.ಮೊಹಲ್ಲಾ, ವಿಜಯನಗರ, ಮಹದೇವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯದಲ್ಲಿ ವಾಹನಗಳನ್ನ ಕಳುವು ಮಾಡಿದ್ದಾರೆ. ಸದ್ಯ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೊಹಮದ್ ಶುಹೇಬ್ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Laxmi News 24×7