ಮೈಸೂರು: ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ ಹಾವನ್ನು ರಕ್ಷಿಸಿದ್ದಾರೆ. ದೊಡ್ಡಯ್ಯ (45), ಹೇಮಂತ್(19), ಯೋಗೇಶ್(24), ರವಿ(35), ಭರಮೇಗೌಡ(23) ಬಂಧಿತರು.
ಆರ್‌ಎಫ್‌ಒ ವಿವೇಕ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಿಂದ ಮೈಸೂರಿಗೆ ಅಕ್ರಮವಾಗಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಕಾರಿನಲ್ಲಿ ಬರುತ್ತಿದ್ದವರನ್ನು ಮೈಸೂರಿನ ಸಿದ್ದಲಿಂಗಪುರ ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹಾಗೂ ಹಾವನ್ನು ರಕ್ಷಣೆ ಮಾಡಿದ್ದಾರೆ.