ಗೋಕಾಕ: ಕೊರೊನಾದಿಂದ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಡುಗೆ ತಯಾರಿಕರು ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಾಗಿದೆ. ಆದ ಕಾರಣ ಸರ್ಕಾರ ನಮಗೆ ನೆರವು ನೀಡಬೇಕು ಎಂದು ಒತ್ತಾಯಿಸಿ ವೃತ್ತಿಪರ ಅಡುಗೆ ತಯಾರಕರ ಮಾಲೀಕರು ಹಾಗೂ ಕಾರ್ಮಿಕ ಸಂಘದಿಂದ ಶಾಸಕ ಸತೀಶ್ ಜಾರಕಿಹೊಳಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ಮಾಡಿಕೊಂಡರು. ಜನರ ಆರೋಗ್ಯ ಹಾಗೂ ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದ್ರೆ ಅಡುಗೆ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ ಕಾರಣ ಸರ್ಕಾರ ಅಡುಗೆ ಮಾಲೀಕರಿಗೆ ನೆರವು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಲಾಕ್ ಡೌನ್ ದಿಂದ ಮದುವೆ ಸಮಾರಂಭಗಳು ಕೈತಪ್ಪಿವೆ. ಇದರಿಂದ ಬದುಕು ನಡೆಸುವುದು ಸಹ ತೊಂದರೆಯಾಗಿದೆ. ಕೆಲವರಿಗೆ ಕುಟುಂಬವನ್ನು ನಡೆಸುವುದು ಸಮಸ್ಯೆಯಾಗುತ್ತಿದೆ. ಆದ್ಧರಿಂದ ಸರ್ಕಾರ ಮನವಿಗೆ ಸ್ಪಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಮನವಿ ಸ್ವೀಕರಿಸಿ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಲಾಕ್ ಡೌನ್ ದಿಂದ ಮದುವೆ ಸಮಾರಂಭಗಳು ಕೈತಪ್ಪಿವೆ. ನಿಮ್ಮ ಸಮಸ್ಯೆಯೂ ಸಹ ಅರ್ಥವಾಗಲಿದೆ. ನಿಮ್ಮ ಮನವಿಯನ್ನು ಸರ್ಕಾರದ ಮುಂದೆ ಇಡಲಾಗುತ್ತದೆ ಎಂದು ಭವರಸೆ ನೀಡಿದರು.