Breaking News

2 ವರ್ಷದ ಮಗುವಿಗೆ ನೇಣು ಹಾಕಿ ತಾಯಿ ಸಹ ಆತ್ಮಹತ್ಯೆ

Spread the love

ತುಮಕೂರು: ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ನಡೆದಿದೆ, ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಮಹಿಳೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇನ್ನೆರಡು ಮಕ್ಕಳು ಸಾವಿನ ಮನೆಯಿಂದ ಪಾರಾಗಿವೆ.

ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ಗಂಗಾಮಣಿ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು. ವೃತ್ತಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿರುವ ಯತೀಶ್, ಎಂದಿನಿಂತೆ ಇಂದು(ಮಾರ್ಚ್ 10) ಕೆಲಸಕ್ಕೆ ತೆರಳಿದ್ದಾರೆ. ಇನ್ನು ಇಬ್ಬರು ಮಕ್ಕಳು  ವಿನಯ್ (7) ಹಾಗೂ ರಕ್ಷಿತಾ (5) ಶಾಲೆಗೆ ಹೋಗಿದ್ದಾರೆ. ಆಗ ಮನೆಯಲ್ಲಿ ಯಾರು ಇಲ್ಲದ ವೇಳೆ ಗಂಗಾಮಣಿ ತನ್ನ ಎರಡು ವರ್ಷದ ಪ್ರೇಕ್ಷಾ ಜೊತೆ ನೇಣಿಗೆ ಶರಣಾಗಿದ್ದಾಳೆ.

ಇನ್ನು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಆದ್ರೆ, ಮನೆ ಒಳಗಿನಿಂದ ಲಾಕ್ ಆಗಿದ್ದು, ಇದನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್ ಮೂಲದ ಲೈನ್‌ಮ್ಯಾನ್‌ ಸಾವು…!

Spread the loveತುಮಕೂರು : ವಿದ್ಯುತ್ ಕಂಬದಿಂದ‌ ಬಿದ್ದು ಲೈನ್‌ಮ್ಯಾನ್‌ ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ವಡೇರಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ