ರಾಯಬಾಗ: ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಅವುಗಳ ಸ್ವಚ್ಛತೆ ಕಾಪಾಡಿಕೊಂಡು ಒಳ್ಳೆಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ನಾಗರಾಳ ಗ್ರಾಮದ ಜನತಾ ಪ್ಲಾಟ್‌ದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಹಾಗೂ ಜಿಪಂ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೊಠಡಿಗಳ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿಸಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದರು.
ಜಿಪಂ ಎಇ ಎಸ್.ಎಸ್.ಹೊಸಮನಿ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಅಪ್ಪಾಸಾಹೇಬ ಕೆಂಗೆನ್ನವರ, ಸದಾನಂದ ಹಳಿಂಗಳಿ, ಬಿ.ಎಂ.ಮಾಳಿ, ಬಸವರಾಜ ಕಾಂಬಳೆ, ಪರಶುರಾಮ ಪೂಜೇರಿ, ಚಿದಾನಂದ ಹಳಿಂಗಳಿ, ಎಂ.ಬಿ ಕಂಬಾರ, ಮಹೇಶ ಕುಲಗುಡೆ, ಜಿಯಾವುಲ್ಲಾ ಮುಲ್ಲಾ, ಬಸಪ್ಪ ಭದ್ರಶೆಟ್ಟಿ, ಪಾಂಡುರಾವ ಹಕ್ಕಿ, ಹನುಮಂತ ದಾವಣೆ, ಕೆಂಪಣ್ಣ ದಾವಣೆ, ಪರಶುರಾಮ ಮಾನೆ, ಶಾಬುದ್ದೀನ್ ಮುಲ್ಲಾ, ಭೀಮು ಮುಧೋಳೆ, ಅಪ್ಪಾಸಾಹೇಬ ದಾವಣೆ, ಚಿದಾನಂದ ಮುಧೋಳೆ, ಮಹೇಶ ದಾವಣೆ ಇತರರಿದ್ದರು.
Laxmi News 24×7