Breaking News

ಎಪಿಎಂಸಿ, ಜೈ ಕಿಸಾನ್ ಮಾರುಕಟ್ಟೆ ವರ್ತಕರ ಸಮಸ್ಯೆ ನಿವಾರಣೆಗೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ಆಯೋಜನೆ: ಸಚಿವ ಸತೀಶ್‌ ಜಾರಕಿಹೊಳಿ

Spread the love

ಬೆಳಗಾವಿ: ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಗೆ ದೇಶದಲ್ಲಿಯೇ ಒಳ್ಳೆಯ ಹೆಸರು ಇದ್ದು, ಈ ಹೆಸರನ್ನು ಉಳಿಸುವ ಜವಾಬ್ದಾರಿ ಎಪಿಎಂಸಿ ಮತ್ತು ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವರ್ತಕರ ಮೇಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಮತ್ತು ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವರ್ತಕರ ವಿವಾದ ಬಗೆಹರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರೆದ ಸಭೆಯನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.

ಶೀಘ್ರದಲ್ಲಿಯೇ ಎಪಿಎಂಸಿ, ಜೈ ಕಿಸಾನ್ ಮಾರುಕಟ್ಟೆ ವರ್ತಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಶಿವಾನಂದ ಪಾಟೀಲ್‌ ಅವರೊಂದಿಗೆ ಸಭೆಯನ್ನು ಆಯೋಜಿಸಿ, ಆ ಸಭೆ ನಿಮ್ಮನ್ನು ಆಹ್ವಾನಿಸುತ್ತೇನೆ. ಸದ್ಯಕ್ಕೆ ಖಾಸಗಿ ಮಾರುಕಟ್ಟೆಯಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡ ವರ್ತಕರಿಗೆ ಖಾಲಿ ಇರುವ ಮಳಿಗೆಗಳನ್ನು ಹಂಚಿಕೆ ಮಾಡಲು ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು.

ರೈತರ ಹಿತದೃಷ್ಟಿಯಿಂದ ಎಪಿಎಂಸಿ ವ್ಯಾಪ್ತಿಯಲ್ಲೇ ಮತ್ತೊಂದು ಪೂರಕ ಸಗಟು ತರಕಾರಿ ಮಾರುಕಟ್ಟೆ ಆವರಣ ಸ್ಥಾಪಿಸುವ ಬಗ್ಗೆ ಎಪಿಎಂಸಿ ಸಚಿವರು, ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ. ನಾವು ಯಾರ ಪರನೂ ಇಲ್ಲ. ಯಾರ ವಿರುದ್ಧವೂ ಇಲ್ಲ. ಈ ಹಿಂದೆ ಶಾಮನೂರು ಶಿವಶಂಕರಪ್ಪನವರು ಸಚಿವರಿದ್ದಾಗ ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಗೆ 17 ಕೋಟಿ ರೂ. ಅನುದಾನ ತಂದು ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಿದ್ದೇವೆ ಎಂದು ತಿಳಿಸಿದರು.

ಎಪಿಎಂಸಿ, ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವರ್ತಕರ ಸಮಸ್ಯೆ ಇಂದು ಅಥವಾ ನಾಳೆ ಬಗೆಹರಿಯುವ ವಿಷಯವಲ್ಲ. ಆದಕಾರಣ ಎರಡು ಮಾರುಕಟ್ಟೆ ವರ್ತಕರು ಹೊಂದಾಣಿಕೆಯಿಂದ ವ್ಯಾಪಾರ ಮಾಡಿಕೊಂಡು ಹೋಗಬೇಕೆಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಆಸೀಪ್‌ (ರಾಜು) ಸೇಠ್‌, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಭೂಷಣ್ ಗುಲಾಬರಾವ್ ಬೋರಸೆ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಎಪಿಎಂಸಿ ಕಾರ್ಯದರ್ಶಿ ವಿಶ್ವನಾಥರೆಡ್ಡಿ ಸೇರಿದಂತೆ ಎಪಿಎಂಸಿ, ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವರ್ತಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಪಘಾತ ಬ್ಲಾೃಕ್‌ಸ್ಪಾಟ್ ಕುರಿತು ಸುಧಾರಣಾ ಕ್ರಮ ಕೈಗೊಳ್ಳಲು ಸತೀಶ ಜಾರಕಿಹೊಳಿ ಸೂಚನೆ

Spread the loveಬೆಳಗಾವಿ: ವಾಕರಸಾ ಸಂಸ್ಥೆ ವ್ಯಾಪ್ತಿಯ 6 ಕಂದಾಯ ಜಿಲ್ಲೆಗಳ ಒಟ್ಟು 118 ಅಪಘಾತ ಕಪ್ಪು ಸ್ಥಳಗಳ(ಬ್ಲಾೃಕ್‌ಸ್ಪಾಟ್) ಕುರಿತು ಅಲ್ಪಾವಧಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ