ಮಂಡ್ಯ: ರಾತ್ರಿ ಫುಲ್ ಪಾರ್ಟಿ ಮಾಡುತ್ತಿದ್ದಾಗ ಜತೆಯಲ್ಲಿದ್ದವರಿಂದಲೇ ಯುವಕನ ಹತ್ಯೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ನಡೆದಿದೆ. ಪೂರ್ಣಚಂದ್ರು(28) ಕೊಲೆಯಾದ ಯುವಕ.
ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಚಂದ್ರುನ ಸ್ನೇಹಿತರು ರಾತ್ರಿ ಫುಲ್ ಪಾರ್ಟಿ ಮಾಡಿ ಲಾಂಗು ಮಚ್ಚುಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ ಸ್ನೇಹಿತರಾದ ಜಕ್ಕನಹಳ್ಳಿಯ ಪ್ರದೀಪ್, ಚಾಮರಾಜು ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Laxmi News 24×7