ಮಹಾನಗರ: ಮಂಗಳೂರು ನಗರ ಪೊಲೀಸರು ಶನಿವಾರ “ತುರ್ತು ಸಹಾಯವಾಣಿ 112′ ಮೂಲಕ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸಿ ತ್ವರಿತ ವಾಗಿ ಸ್ಥಳಕ್ಕೆ ತೆರಳಿ ಸ್ಪಂದಿಸಿದರು.
“ಮಹಿಳೆಯರ ಸುರಕ್ಷೆಗಾಗಿ ಒಂದು ದಿನ’ ಎಂಬ ಈ ಅಭಿಯಾನದಲ್ಲಿ ಸಬ್‌ಇನ್‌ಸ್ಪೆಕ್ಟರ್ ದರ್ಜೆಗಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸ್ ಅಧಿ ಕಾರಿ, ಸಿಬಂದಿಯನ್ನೊಳಗೊಂಡ 100ಕ್ಕೂ ಅಧಿಕ ಪೊಲೀಸರು ಪಾಲ್ಗೊಂಡಿ ದ್ದರು.
ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಈ ವಿಶೇಷ ಅಭಿಯಾನ ನಡೆಯಿತು.
ಅಣಕು ಕಾರ್ಯಾಚರಣೆ
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ನಗರದ ಕೆಲವೆಡೆ 112 ಸಹಾಯವಾಣಿ (ಇಆರ್‌ಎಸ್‌ಎಸ್-112)ಅಣಕು ಕಾರ್ಯಾಚರಣೆಯ ನಡೆಸಿ ಜಾಗೃತಿ ಮೂಡಿಸಲಾಯಿತು. ಎಂ.ಆರ್. ಪೂವಮ್ಮ ಮತ್ತು ಅವರ ತಾಯಿ ಜಾನಕಿ ಅವರು ನಗರದ ಅಥೆನಾ ಆಸ್ಪತ್ರೆಯಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡರು.
8 ತಿಂಗಳುಗಳಲ್ಲಿ 4,000ಕ್ಕೂ ಅಧಿಕ ಕರೆ
ಅಥೆನಾ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಯರನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತರು “ಮಹಿಳೆಯರು ಸಹಿತ ಸಾರ್ವ ಜನಿಕರು 112ಗೆ ಕರೆ ಮಾಡಿದರೆ ತುರ್ತು ಸ್ಪಂದನೆ ದೊರೆಯುತ್ತದೆ. ಮಂಗಳೂರಿನಲ್ಲಿ 112 ಸಹಾಯವಾಣಿ ಆರಂಭಗೊಂಡ 8 ತಿಂಗಳುಗಳಲ್ಲಿ 4,000ಕ್ಕೂ ಅಧಿಕ ಕರೆ ಗಳನ್ನು ಸ್ವೀಕರಿಸಿ ಸ್ಪಂದಿಸಲಾಗಿದೆ. ಈ ಸಹಾಯವಾಣಿ ಮೂಲಕ ಪೊಲೀಸರಿಗೆ ದಿನಕ್ಕೆ ಸರಾಸರಿ 30ರಿಂದ 40 ಕರೆಗಳು ಬರುತ್ತಿವೆ’ ಎಂದರು.
12 ನಿಮಿಷಗಳಲ್ಲಿ ಸ್ಪಂದನೆ
ತುರ್ತುಸಹಾಯವಾಣಿ 112ಕ್ಕೆ 38 ಕರೆಗಳು ಬಂದಿವೆ. ಪೊಲೀಸ್ ಅಧಿಕಾರಿಗಳ ಮೊಬೈಲ್‌ಗಳಿಗೆ 200ಕ್ಕೂ ಅಧಿಕ ಮಂದಿ ಕರೆ ಮಾಡಿ ಸಹಾಯವಾಣಿ ಕುರಿತು ಮಾಹಿತಿ ಪಡೆದು ಕೊಂಡಿ ದ್ದಾರೆ. ಕರೆ ಬಂದ ಅನಂತರ ಸರಾಸರಿ 12 ನಿಮಿಷದಲ್ಲಿ ಸ್ಥಳಕ್ಕೆ ತೆರಳಿ ಸ್ಪಂದನೆ ನೀಡಲಾಗಿದೆ. ಅಲ್ಲದೆ ಆಸ್ಪತ್ರೆ, ಲೇಡಿಸ್ ಹಾಸ್ಟೆಲ್, ವಿಶ್ವವಿದ್ಯಾನಿಲಯ, ಸಾರ್ವಜನಿಕ ಸ್ಥಳಗಳಲ್ಲಿ 152ಕ್ಕೂ ಅಧಿಕ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಧೈರ್ಯ ತುಂಬಿಸುವ ಕಾರ್ಯ
ಅಂತಾರಾಷ್ಟ್ರೀಯ ಕ್ರೀಡಾಪಟು, ಒಲಿಂಪಿಯನ್ ಎಂ.ಆರ್. ಪೂವಮ್ಮ ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿ, ಮಹಿಳೆಯರು ಹಲವಾರು ಬಾರಿ ಅಸುರಕ್ಷೆಯ ಅನುಭವ ಹೊಂದುವ ಸಂದರ್ಭಗಳು ಎದುರಾಗುತ್ತವೆ. ಇಂತಹ ಸಂದರ್ಭ ಗಳಲ್ಲಿ ಸುರಕ್ಷೆಯ ಭರವಸೆ ನೀಡಲು 112 ಸಹಾಯವಾಣಿ ಉಪಯುಕ್ತ. ಮಂಗಳೂರು ಪೊಲೀಸರು ಹಮ್ಮಿಕೊಂಡಿರುವ ಈ ವಿಶೇಷ ಅಭಿಯಾನ ಶ್ಲಾಘನೀಯ’ ಎಂದರು.
Laxmi News 24×7