ಮಂಡ್ಯ ಅಬಕಾರಿ ಇಲಾಖೆ ಲಂಚಾವತಾರಕ್ಕೆ ಮತ್ತೊಂದು ನಿದರ್ಶನ. ಮಂಡ್ಯ ಅಬಕಾರಿ ಡಿಸಿ ಅಮಾನತ್ತು.ಸಿಎಲ್ 7 ಲೈಸೆನ್ಸ್ ನೀಡಲು ಲಂಚಕೇಳಿದ ಆರೋಪ ಸಾಬೀತಾದ ಹಿನ್ನಲೆ ಅಬಕಾರಿ ಉಪ ಆಯುಕ್ತ ನಾಗಶಯನ ಅಮಾನತಾಗಿದ್ದಾರೆ.
ಲೈಸೆನ್ಸ್ ನೀಡಲು ಸುಂದರ್ ಎಂಬುವವರಿಂದ 60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.ಸುಂದರ್ ಆಡಿಯೋ ಸಹಿತ ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಕೆ.ಆರ್.ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್ 7 ಬಾರ್ ತೆರೆಯಲು ಲೈಸೆನ್ಸ್ ನೀಡಲು ಸುಂದರ್ ಅರ್ಜಿ ಸಲ್ಲಿಸಿದ್ದರು.
ಲೈಸೆನ್ಸ್ ನೀಡದೇ ಸಣ್ಣ ಪುಟ್ಟ ನೆಪ ಹೇಳಿಕೊಂಡು ಪದೇ ಪದೇ ಅರ್ಜಿ ವಜಾ ಮಾಡುತ್ತಿದ್ದರು. ನ್ಯಾಯಾಲಯ ಆದೇಶ ನೀಡಿದ್ದರೂ ಲೈಸೆನ್ಸ್ ನೀಡಿರಲಿಲ್ಲ.ಲೈಸೆನ್ಸ್ ನೀಡಲು 60 ಲಕ್ಷ ಲಂಚಕ್ಕೆ ನಾಗಶಯನ ಬೇಡಿಕೆ ಇಟ್ಟಿದ್ದರು.
ಆಡಿಯೋ ಸಹಿತ ದೂರು ನೀಡಿದ ಸುಂದರ್ ಕಳೆದ ಒಂದು ವರ್ಷದಿಂದಲೂ ಹೋರಾಟ ಮಾಡುತ್ತಿದ್ದರು.
ಇದೇ ವಿಚಾರ ಸದನದಲ್ಲೂ ಚರ್ಚೆಯಾಗಿತ್ತು.ಕೊನೆಗೂ ಎಚ್ಚೆತ್ತುಕೊಂಡು ಸರ್ಕಾರ ನಾಗಶಯನರನ್ನ ಅಮಾನತುಗೊಳಿಸಿ ಆದೇಶಿಸಿದೆ.
Laxmi News 24×7