Breaking News

ಅಣ್ಣಾಮಲೈಗೆ ಕೈ ತಪ್ಪಿದ ಟಿಕೆಟ್

Spread the love

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗಮನಾರ್ಹ ಸಂಗತಿಯೆಂದರೆ ಮಾಜಿ ಐಪಿಎಸ್ ಅಧಿಕಾರಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಲಾಗಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಸತ್ತೂರ್ ನಿಂದ ಸ್ಪರ್ಧಿಸಲಿದ್ದಾರೆ.ಕೇಂದ್ರ ಸಚಿವ ಎಲ್. ಮುರುಗನ್ ಅವನಶಿಯಿಂದ (SC) ಕಣಕ್ಕಿಳಿಯಲಿದ್ದಾರೆ.ಕೊಯಮತ್ತೂರು (ಉತ್ತರ) ಕ್ಷೇತ್ರದಿಂದ ಕೊಯಮತ್ತೂರು ದಕ್ಷಿಣ ಕ್ಷೇತ್ರದ ಹಾಲಿ ಶಾಸಕಿ ವನತಿ ಶ್ರೀನಿವಾಸನ್ ಅವರನ್ನು ಕಣಕ್ಕಿಳಿಸಲಾಗಿದೆ.
ಅವಡಿ ಎಂ. ರಾಜಸಿಂಹ ಮಹೀಂದ್ರ (ಎಂ.ಅಶ್ವಿನ್‌ಕುಮಾರ್), ಮೈಲಾಪುರ-ತಮಿಳಿಸೈ ಸೌಂದರ್ಯ ರಾಜನ್ , ಥಲ್ಲಿ-ಡಾ. ನಾಗೇಶ್ ಕುಮಾರ್, ತಿರುವಣ್ಣಾಮಲೈ- ಸಿ. ಎಲುಮಲೈ,ರಾಸಿಪುರಂ(SC)-ಡಾ. ಎಸ್.ಡಿ. ಪ್ರೇಮ್‌ಕುಮಾರ್, ಮೊಡಕುರಿಚಿ-ಕೀರ್ತಿಕಾ ಶಿವಕುಮಾರ್, ಉದಗಮಂಡಲಂ- ಭೋಜರಾಜನ್, ತಿರುಪ್ಪೂರ್ (ದಕ್ಷಿಣ)- ಎಸ್.ತಂಗರಾಜ್, ತಿರುವರೂರು- ಗೋವಿ ಚಂದ್ರು, ತಂಜಾವೂರು- ಎಂ. ಮುರುಗಾನಂದಂ, ಗಂಧರ್ವಕೊಟ್ಟೈ (SC)- ಸಿ.ಉದಯಕುಮಾರ್, ಪುದುಕ್ಕೊಟ್ಟೈ- ಎನ್. ರಾಮಚಂದ್ರನ್, ಅರಂತಂಗಿ- ಕವಿತಾ ಶ್ರೀಕಾಂತ್, ತಿರುಪ್ಪತ್ತೂರ್-ಕೆ.ಸಿ. ತಿರುಮಾರನ್, ಮನಮದುರೈ (SC) ಪೊನ್. ವಿ.ಬಾಲಗಣಪತಿ, ಮಧುರೈ ದಕ್ಷಿಣ-ರಾಮ ಶ್ರೀನಿವಾಸನ್, ರಾಮನಾಥಪುರ- ಜಿಬಿಎಸ್ ಕೆ. ನಾಗೇಂದ್ರನ್, ತಿರುಚೆಂದೂರ್- ಕೆಆರ್ ಎಂ ರಾಧಾಕೃಷ್ಣನ್, ವಾಸುದೇವನಲ್ಲೂರು (SC)- ಅನಂತನ್ ಅಯ್ಯಸಾಮಿ, ರಾಧಾಪುರಂ- ಎಸ್.ಪಿ ಬಾಲಕೃಷ್ಣನ್, ನಾಗರಕೋಯಿಲ್- ಎಂ.ಆರ್. ಗಾಂಧಿ, ಕೊಳಚೆಲ್-ಟಿ. ಶಿವಕುಮಾರ್, ಪದ್ಮನಾಭಪುರಂ- ಪಿ. ರಮೇಶ್, ವಿಲವಂಕೋಡ್- ಎಸ್.ವಿಜಯಧರಣಿ ಅಭ್ಯರ್ಥಿಗಳಾಗಿದ್ದಾರೆ.
NDA ಸೀಟು ಹಂಚಿಕೆ ಅಡಿಯಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದು ಪ್ರಮುಖ ಪಕ್ಷ ಎಐಎಡಿಎಂಕೆ 178 ಸ್ಥಾನಗಳಲ್ಲಿ ಸ್ಫರ್ಧಿಸುತ್ತಿದೆ. ಡಾ. ಅನ್ಬುಮಣಿ ರಾಮದಾಸ್ ಅವರ ಪಿಎಂಕೆ 18 ಸ್ಥಾನಗಳಲ್ಲಿ, ಟಿ.ಟಿ.ವಿ. ದಿನಕರನ್ ಅವರ ಎಎಂಎಂಕೆ 11 ಸ್ಥಾನಗಳಲ್ಲಿ ತಮಿಳ್ ಮಾಣಿಲ ಕಾಂಗ್ರೆಸ್ 5 ಸ್ಥಾನಗಳು (ಬಿಜೆಪಿ ಚಿಹ್ನೆಯಡಿ) ಟಿ.ಆರ್. ಪಾರಿವೇಂಧರ್ ಅವರ ಐಜೆಕೆ 2 ಸ್ಥಾನಗಳು ಮತ್ತು ಟಿ ಎಂಎಂಕೆ 1 ಸ್ಥಾನದಲ್ಲಿ ಸ್ಪರ್ಧಿಸುತ್ತಿವೆ.
ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಏಪ್ರಿಲ್ 23 ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮೇ 4 ರಂದು ನಡೆಯಲಿದೆ.


Spread the love

About Laxminews 24x7

Check Also

ಕೃಷ್ಣಾ ತೀರದ ಭಾಗದ ಗ್ರಾಮಗಳಲ್ಲಿ ಶುದ್ದ ಕುಡಿಯೋ ನೀರು ಮರೀಚಿಕೆ

Spread the love  • ವಿಜಯಪುರ: ಹರಿಯುವ ನದಿಗಳ ನಡುವೆ ನೀರಿಗಾಗಿ ಹಾಹಾಕಾರ • ಕೃಷ್ಣಾ ತೀರದ ಗ್ರಾಮಗಳಲ್ಲಿ ಮರೀಚಿಕೆಯಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ