ಮೈಸೂರು: ಮುಡಾ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಹಾಗಾಗಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಮ್ಮೆ ಹೇಳಿದರು. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಕೃಷ್ಣ, ಜೂನ್ 28ರಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಲು ಸರ್ಚ್ ವಾರಂಟ್ ಜಾರಿಯಾಗಿದ್ದರೂ ಡಿವೈಎಸ್ಪಿ ಮಾಲತೇಶ್ ಎಸ್ ಕೆ ಆದೇಶವನ್ನು ಪಾಲಿಸಿಲ್ಲ, ದಾಳಿಗೆ ಮೊದಲೇ ವಿಷಯವನ್ನು ನಗರಾಭಿವೃದ್ಧಿ ಸಚಿವರಿಗೆ ವಿಷಯವನ್ನು ತಿಳಿಸಲಾಗಿದೆ, ಭೈರತಿ ಸುರೇಶ್ ಚಾಪರ್ನಲ್ಲಿ ಬಂದು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಕೃಷ್ಣ ಹೇಳಿದರು.
Laxmi News 24×7