Breaking News

ಮತ್ತೆ ಸಚಿವ ಸಂಪುಟಕ್ಕೆ ಸೇರುತ್ತಾರ ರಮೇಶ್ ಜಾರಕಿಹೊಳಿ…20ಶಾಸಕರಿಂದB.S.Y.ಗೆ ಮನವಿ….?

Spread the love

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿನ್ನಲೆ ದಿನಕ್ಕೊಂದು ತಿರುವು ಪಡೆದು ರಮೇಶ್ ಜಾರಕಿಹೊಳಿ ಅವರ ವಿರುದ್ಧ ಹುನ್ನಾರ ನಡೆದಿದೆ ಎಂದು ದಿನದಿಂದ ದಿನಕ್ಕೆ ಕ್ರಮೇಣ ಇದು ಸುಳ್ಳು ಎಂದು ಸಾಬೀತಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ.

ಅದೇರೀತಿ ನಿನ್ನೆ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಮಾತನಾಡಿದ ಪ್ರಕಾರ ರಮೇಶ್ ಜಾರಕಿಹೊಳಿ ಅವರು ತಪ್ಪು ಮಾಡಿಲ್ಲ ಅಂದ್ರೆ ಮಾಧ್ಯಮದ ಮುಂದೆ ಬರಲು ಹೇಳುತ್ತೇನೆ ಎಂದು ಮಾಧ್ಯಮದ ಮುಂದೆ ಮಾತನಾಡಿದ್ದರು. ಅದೇರೀತಿ ಇವಾಗ ಸಾಹುಕಾರರು ಕಮ್ ಬ್ಯಾಕ್ ಆಗಿದ್ದಾರೆ .ಎಲ್ಲ ವಿಷಯವನ್ನ ಮಾಧ್ಯಮದ ಮುಂದೆ ಹೇಳುವ ಸಾಧ್ಯತೆ ಇದೆ ಅದಕ್ಕೆ ನಾಳೆ ಬೆಳಿಗ್ಗೆ ಪತ್ರಿಕಾ ಗೋಷ್ಠಿ ನಡೆಸುವುದು ಹಾಗೂ ಅದರ ಜೊತೆಗೆ 20ಶಾಸಕರು ಸೇರಿ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ಮರಳಿ ಕೊಡಬೇಕು ಹಾಗೂ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜಿನಾಮೆ ಕೊಟ್ಟಿದ್ದು ಪಕ್ಷದ ಹಿತಾಸಕ್ತಿ ಹಾಗೂ ಟೀಕೆಗಳನ್ನು ತಡೆಯಲು ಎಂದು ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ವಿಷಯ ಪ್ರಸ್ತಾಪ ಮಾಡಿದ್ದಾರೆ..

ಇಲ್ಲದಿದ್ದರೆ ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನನೀಡಬೇಕೆಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೋವಿಡ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾಳಜಿ ಹಾಗೂ K.M.F. ಬಗ್ಗೆ ಹಾಗೂ ರೈತರ ಬಗ್ಗೆ ಅತೀ ಸೂಕ್ಷ್ಮ ರೀತಿಯಿಂದ ಜನರ ಜೊತೆ ಬೆರೆತ ಸಾಹುಕಾರ ಬಾಲಚಂದ್ರ ಜಾರಕಿಹೊಳಿ ಅವರು ಅಂತ ಜನ ಮಾತನಾಡುತ್ತಿದ್ದಾರೆ..


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ