ಬೆಳಗಾವಿ: ನನ್ನ ಬಳಿ 10 ಸಿಡಿಗಳಿದ್ದಾವೆ. ನಾವು ಯುದ್ಧ ಮಾಡುವ ಜನ, ಷಡ್ಯಂತರ ಮಾಡುವವರಲ್ಲ. ಹೀಗಾಗಿ ಬಿಡುಗಡೆ ಮಾಡುವುದಿಲ್ಲ ಎಂಬುದಾಗಿ ಶಾಸಕ ರಮೇಶ್ ಜಾರಕಿಹೊಳಿ ( MLA Ramesh Jarkiholi ) ಹೇಳಿದ್ದಾರೆ.
ಬೆಳಗಾವಿಯ ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಓರ್ ಮಂತ್ರಿಯನ್ನು ಬರ್ತಿರೋ, ಸಿಡಿ ಬಿಡಗಡೆ ಮಾಡಲೋ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆದರಿಸುತ್ತಾನೆ.
ಸಿಡಿ ಪಾಟನರ್ ಹಾಗೂ ಆಕ್ಟರ್ ಬೆಳಗಾವಿಯಲ್ಲೇ ಇದ್ದಾನೆ. ಅದಕ್ಕೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ನಾವು ಯುದ್ಧ ಮಾಡುವ ಜನ, ಷಡ್ಯಂತ್ರ ಮಾಡುವವರು ಅಲ್ಲ. ನನ್ನ ಬಳಿ 10 ಸಿಡಿಗಳಿದ್ದಾವೆ. ಆದರೇ ಬಹಿರಂಗ ಮಾಡೋದಿಲ್ಲ. ಅವನ ಪತ್ನಿ ನನ್ನ ತಂಗಿ ಇದ್ದಂತೆ, ಮನೆ ಒಡೆಯಬಾರದು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ವಿರುದ್ಧ ಗುಡುಗಿದರು.
ಅಧಿಕಾರ ಬರಲು ಬಿಡಬಾರದು. ಸಿದ್ಧರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜನ ಖರ್ಗೆಯಂತ ಒಳ್ಳೆಯವರು ಇದ್ದಾರೆ. ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಕೈಯಲ್ಲಿ ಅಧಿಕಾರ ಸಿಗಲೇ ಬಾರದು. ಬ್ಲಾಕ್ ಮೇಲರ್ ಕೈಯಲ್ಲಿ ಅಧಿಕಾರ ಸಿಕ್ಕರೇ ಕಾಂಗ್ರೆಸ್ ಪಕ್ಷದ ಕತೆ ಮುಗಿಯಿತು ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
Laxmi News 24×7