ಖಾನಾಪುರ :ದಿ. 18-10-2021 ರಂದು ಖಾನಾಪುರ ತಾಲೂಕಿನ ಭೋರುಣಕಿ ಗ್ರಾಂ ಪಂ ವ್ಯಾಪ್ತಿಯಲ್ಲಿ ಬರುವ ಗಸ್ಟೋಳ್ಳಿ ಮತ್ತು ಚಣಕೆಬೈಲ ಗ್ರಾಮದಲ್ಲಿ ಪಡಿತರ ರೇಶನ್ ಪಡೆಯಲಿಕ್ಕೆ ಇಲ್ಲಿನ ಗ್ರಾಮಸ್ಥರು, ಇಲ್ಲಿಂದ ಸುಮಾರು 7km ದೂರದ ಗೊಳಿಹಳ್ಳಿಯಿಂದ ರೇಶನ್ ತೆಗೆದುಕೊಂಡು ಬರುತ್ತಿದ್ದರು.
ಇದನ್ನು ಬೆಳಗಾವಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಹಾಗೂ ಖಾನಾಪುರ ತಾಲೂಕಿನ ಪ್ರಭಾರಿಗಳು ಆದ ಡಾ. ಸೋನಾಲಿ ಸರ್ನೋಬತ್. ರವರು ಗ್ರಾಮಸ್ಥರ ಸಮಸ್ಯೆಯನ್ನು ನೋಡಿ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಭೇಟಿ ಆಗಿ ಇವತ್ತು ಸದರಿ ಎರಡು ಗ್ರಾಮದಲ್ಲಿಯೇ ರೇಶನ್ ಹಂಚುವ ವ್ಯವಸ್ಥೆ ಮಾಡಿಸಿಕೊಟ್ಟರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಮುನ್ನೆಹಿ ಕುಳವಶಕರ್, ಈಶ್ವರ್ ಸನಿಕೊಪ್ಪ, ಕಮಲವ್ವ ವಡ್ಡಿನ್, ಶಾಹಿರ್ ಹುಬಳಿಕರ್, ಬಾಳೆಶ್ ಚವ್ಹಣ್ಣವರ್, ಕುಶಾಲ್ ಅಂಬೋಜಿ, ಮಹೇಶ್ ಗುರವ್, ಪ್ರಭು ಅವರಾದಿ ಹಾಗೂ ಊರಿನ ಇನ್ನಿತರ ನಾಗರಿಕರು ಉಪಸ್ಥಿತರಿದ್ದರು
Laxmi News 24×7