ಜೋಹಾನ್ಸಬರ್ಗ್: ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಕೊರೊನಾ ವೈರಸ್ ಗೆ ಸೌಥ್ ಆಫ್ರಿಕಾದಲ್ಲಿ ಬಲಿಯಾಗಿದ್ದಾರೆ. ಮೂರು ದಿನಗಳ ನಂತರ ಸತೀಶ್ ಧುಪೆಲಿಯಾ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವರಿದ್ದರು. ಸತೀಶ್ ಅವರ ಸೋದರಿ ಉಮಾ ಧುಪೆಲಿಯಾ ಸೋದರನ ಸಾವನ್ನು ಖಚಿತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ಅಗಲಿದ್ದಾನೆ. ನ್ಯೂಮೇನಿಯಾ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಕೋವಿಡ್-19 ಸೋಂಕು ಸಹ ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸೋದದ ಕಾರ್ಡಿಯಾಕ್ ಅರೆಸ್ಟ್ ನಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ ಎಂದು ಉಮಾ ಧುಪೆಲಿಯಾ ಹೇಳಿದ್ದಾರೆ.
Laxmi News 24×7