ನವದೆಹಲಿ: ಉಕ್ರೇನ್ ಮೇಲಿನ ದಾಳಿ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಅಮೇರಿಕಾ ಮಂಡಿಸಿದ್ದ ನಿರ್ಣಯದಿಂದ ದೂರ ಉಳಿದಿರುವ ಭಾರತದ ನಡೆಯನ್ನು ರಷ್ಯಾ ದೇಶವು ಶ್ಲಾಘಿಸಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಭಾರತದಲ್ಲಿನ ರಷ್ಯಾದ ಮಿಶನ್ “ಫೆಬ್ರವರಿ 25, 2022 ರಂದುಭದ್ರತಾ ಮಂಡಳಿಯ ಮತದಾನದಲ್ಲಿ ಭಾರತದ ಸ್ವತಂತ್ರ ಮತ್ತು ಸಮತೋಲಿತ ಸ್ಥಾನವನ್ನು ಹೆಚ್ಚು ಪ್ರಶಂಸಿಸುತ್ತೇವೆ.ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯ ಉತ್ಸಾಹದಲ್ಲಿ ಉಕ್ರೇನ್ ಸುತ್ತಲಿನ ಪರಿಸ್ಥಿತಿಯ ಬಗ್ಗೆ ಭಾರತದೊಂದಿಗೆ ನಿಕಟ ಮಾತುಕತೆ ನಡೆಸಲು ರಷ್ಯಾ ಬದ್ಧವಾಗಿದೆ” ಎಂದು ಹೇಳಿದೆ.ಜೊತೆ ಮಾತುಕತೆ ನಡೆಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು “ಇಂದು ಪ್ರಧಾನಿ ಮೋದಿ (PM Narendra Modi) ಅವರೊಂದಿಗೆ ಮಾತನಾಡಿದೆ.ಅವರಿಗೆ ದಾಳಿಯನ್ನು ಹಿಮ್ಮೆಟ್ಟಿಸುವ ಮಾರ್ಗದ ಬಗ್ಗೆ ತಿಳಿಸಲಾಗಿದೆ.ಈಗಾಗಲೇ 100,000 ಕ್ಕೂ ಹೆಚ್ಚು ಆಕ್ರಮಣಕಾರರು ನಮ್ಮ ದೇಶದುದ್ದಕ್ಕೂ ಆವರಿಸಿದ್ದಾರೆ, ಅಷ್ಟೇ ಅಲ್ಲದೆ ಅವರು ವಸತಿ ಕಟ್ಟಡಗಳ ಮೇಲೆ ಗುಂಡನ್ನು ಹಾರಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ನಮಗೆ ರಾಜಕೀಯ ಬೆಂಬಲ ನೀಡುವಂತೆ ಕೋರಲಾಗಿದೆ.ಆ ಮೂಲಕ ಒಗ್ಗಟ್ಟಾಗಿ ದಾಳಿಕೋರರ ವಿರುದ್ಧ ನಿಲ್ಲಬೇಕು’ ಎಂದು ಟ್ವೀಟ್ ಮಾಡಿದ್ದಾರೆ.