ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದೆ. ಸೋಮವಾರ ಇಡೀ ದಿನ ತಾಲ್ಲೂಕಿನ ದೇವಲತ್ತಿ, ಪಾರಿಶ್ವಾಡ, ನಂದಗಡ, ಬೀಡಿ, ಹಲಸಿ, ಲೋಂಡಾ, ಕಕ್ಕೇರಿ, ಜಾಂಬೋಟಿ, ಕಣಕುಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿದಿದೆ.
ಕರ್ನಾಟಕ-ಗೋವಾ ಗಡಿಯ ಘಟ್ಟ ಪ್ರದೇಶದಲ್ಲಿ ಮಳೆ ಸತತವಾಗಿ ಸುರಿಯುತ್ತಿದೆ. ಕಣಕುಂಬಿಯಲ್ಲಿ 4 ಸೆಂ.ಮೀ, ಲೋಂಡಾದಲ್ಲಿ 3.8 ಸೆಂ.ಮೀ, ಜಾಂಬೋಟಿ ಮತ್ತು ಕಕ್ಕೇರಿಯಲ್ಲಿ 2 ಸೆಂ.ಮೀ, ಗುಂಜಿಯಲ್ಲಿ 1.7 ಸೆಂ.ಮೀ ಮಳೆ ಸುರಿದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ಸೋಮವಾರ ಸಂಜೆಯ ಬಳಿಕ ಮಳೆಯ ಪ್ರಮಾಣ ಕ್ಷೀಣಿಸಿದೆ. ತಂಪಿನ ವಾತಾವರಣ ಮುಂದುವರೆದಿದೆ.