Breaking News

ಖುಷಿಯ ಖೋಡಿ ಜಾರಕಿಹೊಳಿಯ ಕುಡಿ..!

Spread the love

ಖುಷಿಯ ಖೋಡಿ ಜಾರಕಿಹೊಳಿಯ ಕುಡಿ..!

ಜಾರಕಿಹೊಳಿ ಕುಟುಂಬಕ್ಕೆ ಮತ್ತೊಂದು ಕುಡಿ ಎಂಟ್ರಿ/ ಎಲ್ಲೇಡೆ ಖುಷಿಯ ಸಂಭ್ರಮ/ ಗೋಕಾಕ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ

 

ಜಾರಕಿಹೊಳಿ ಫ್ಯಾಮಿಲಿ ಅಂದರೆ ಯಾರಿಗೆ ಗೊತ್ತಿಲ್ಲ, ಒಂದರ್ಥದಲ್ಲಿ ಬೆಳಗಾವಿಯ ಸಂಪೂರ್ಣ ರಾಜಕೀಯ ನಿಂತಿರೋದು ಜಾರಕಿಹೊಳಿ ಫ್ಯಾಮಿಲಿ ಮೇಲೆ ಎನ್ನಬಹುದು ಹಾಗಿದೆ ಆ ಕುಟುಂಬದ ವರ್ಚಸ್ಸು. ಜಾರಕಿಹೊಳಿ ಸಹೋದರರಲ್ಲಿನ ಭಾಂದವ್ಯ ಇಂದು ನಿನ್ನೆಯ ಮಾತಲ್ಲ. ಗೋಕಾಕ ಕರದಂಟಿನಲ್ಲಿ ಹೇಗೆ ಖಾದ್ಯದ ಮಿಶ್ರಣವಿದೆಯೋ ಹಾಗೆ ಜಾರಕಿಹೊಳಿ ಫ್ಯಾಮಿಲಿ ಕೂಡ ಹಾಗೆಯೇ. ಅಂತಹ ಹೆಸರಾಂತ ಕುಟುಂಬಕ್ಕೆ ಮತ್ತೊಂದು ಕುಡಿ ಎಂಟ್ರಿಯಾಗಿರೊದು ಖುಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.

ಹೌದು, ಈ ಫ್ಯಾಮಿಲಿಗೆ ಇನ್ನೊಂದು ಜೀವ ಸೇರ್ಪಡೆಗೊಂಡಿದೆ.ಈ ವಿಚಾರ ಇಡಿ ಕುಟುಂಬಕ್ಕೆ ಹರುಷ ತಂದಿದೆ. ಜಾರಕಿಹೊಳಿ ಕುಟುಂಬಕ್ಕೆ ಸೇರ್ಪಡೆಯಾಗಿರುವ ಜೀವ ಯಾವುದು ಅನ್ನುವ ಕುತೂಹಲ ಎಲ್ಲರಿಗೂ ಸಾಮಾನ್ಯವಾಗಿ ಇದ್ದೇ. ಇದೆ ಅದಕ್ಕೆ ಉತ್ತರ ರಮೇಶ್ ಜಾರಕಿಹೊಳಿ ಸುಪುತ್ರ ಸಂತೋಷ ಜಾರಕಿಹೊಳಿ ಅವರ ಪುತ್ರ.

ಹೌದು..!! ರಮೇಶ್ ಲಕ್ಷ್ಮಣ ಜಾರಕಿಹೊಳಿ ಅವರ ಹಿರಿಯ ಪುತ್ರ ಹಾಗೂ ಲಕ್ಷ್ಮಣ ಜಾರಕಿಹೊಳಿ ಅವರ ಮೊಮ್ಮಕ್ಕಳಲ್ಲಿ ಹಿರಿಯ ಮೊಮ್ಮಗ ಸಂತೋಷ ಜಾರಕಿಹೊಳಿ ಅವರ ಪುತ್ರ ಇಂದು ಜನನ ಹೊಂದಿದ್ದಾನೆ.ಜಾರಕಿಹೊಳಿ ಫ್ಯಾಮಿಲಿಗೆ ಇದು ಮೊದಲ ಮರಿ ಮಗುವಿನ ಆಗಮನ ಆಗಿದ್ದರಿಂದ ಅವರ ಕುಟುಂಬದಲ್ಲಿ ಇಂದು ಸಂತೋಷದ ವಾತಾವರಣ ನಿರ್ಮಾಣ ಆಗಿದೆ.

 

ಈಗಾಗಲೇ ಅವರ ಕುಟುಂಬಕ್ಕೆ ಅಜ್ಜ ಬರುತ್ತಾನೆ ಅನ್ನೋ ಲೆಕ್ಕಾಚಾರವಿತ್ತು

. ಸದ್ಯ ಆ ಲೆಕ್ಕಾಚಾರ ನಿಜವಾಗಿದೆ‌.ಕುಟುಂಬಕ್ಕೆ ಕುಲದ ಅಜ್ಜ ಬರಲಿ ಅನ್ನೋ ಕಾತುರದಲ್ಲಿದ್ದ ಎಲ್ಲರಿಗೂ ತೃಪ್ತಿ ತಂದಿದೆ. ಇನ್ನು ಗೋಕಾಕನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ ಸರ್ಕಾರಿ ಆಸ್ಪತ್ರೆಗಳು ಕೂಡ ಉತ್ತಮ ಸೌಕರ್ಯ ನೀಡುತ್ತವೆ ಎನ್ನುವ ಸಂದೇಶ ಸಂತೋಷ ಜಾರಕಿಹೊಳಿ ಅವರು ಎಲ್ಲರಿಗೂ ಈ ಮೂಲಕ ನೀಡಿದ್ದಾರೆ.

ಒಟ್ಟಿನಲ್ಲಿ ಈ ಟ್ವೆಂಟಿ ಟ್ವೆಂಟಿ ವರ್ಷದಲ್ಲಿ ಜಾರಕಿಹೊಳಿ ಫ್ಯಾಮಿಲಿಗೆ ಆ ಭಗವಂತ ಮತ್ತೊಂದು ಖುಷಿ ಸುದ್ದಿ ಕೊಟ್ಟಿರೋದು ಫ್ಯಾಮಿಲಿಯಲ್ಲಿ ಖುಷಿಯಾ ಫಾಲ್ಸ್ ಉಕ್ಕಿ ಹರಿಯುವಂತೆ ಮಾಡಿದೆ.


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ