ಮುಂಬೈ/ಅಹಮದಾಬಾದ್/ಭೋಪಾಲ್, ಏ.30- ಭಾರತದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ದೇಶದ ಅತ್ಯಂತ ಅಪಾಯಕಾರಿ ಹಾಟ್‍ಸ್ಪಾಟ್‍ಗಳಾಗಿರುವುದು ಕಳವಳಕಾರಿಯಾಗಿದೆ.
ದೇಶದ ಮೊದಲ ಮೂರು ಡೇಂಜರ್ ಸ್ಟೇಟ್ ಎಂದೇ ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು ಪ್ರಮಾಣದಲ್ಲಿ ಸಾವು ಮತ್ತು ಸೋಂಕು ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಲೇ ಇವೆ.
ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದೆ ಒಟ್ಟು 67 ಸಾವು ಪ್ರಕರಣಗಳಲ್ಲಿ. ಮಹಾರಾಷ್ಟ್ರದಲ್ಲಿ 33, ಗುಜರಾತ್-16 ಮತ್ತು ಮಧ್ಯಪ್ರದೇಶದಲ್ಲಿ 10, ಡೆತ್ ಕೇಸ್‍ಗಳು ವರದಿಯಾಗಿವೆ. ಈವರೆಗೆ ಸಂಭವಿಸಿರುವ 1,074 ಸಾವು ಪ್ರಕರಣಗಳಲ್ಲೂ ಸಹ ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿದೆ.
ಆ ರಾಜ್ಯದಲ್ಲಿ ಒಟ್ಟು 432 ಸಾವುಗಳು ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಗುಜರಾತ್ (195) ಮತ್ತು ಮಧ್ಯಪ್ರದೇಶ (129) ರಾಜ್ಯಗಳಿವೆ. ಮಹಾರಾಷ್ಟ್ರದ ನಾಸಿಕ್‍ನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಇಂದು ಬೆಳಗ್ಗೆವರೆಗೆ 71 ಸೋಂಕು ಪ್ರಕರಣಗಳು ಮತ್ತು ಹಾಗೂ ಔರಂಗಾಬಾದ್‍ನಲ್ಲಿ 24 ಸಾಂಕ್ರಾಮಿಕ ರೋಗಗಳು ದೃಢಪಟ್ಟಿದ್ದು, ಇತರ ಜಿಲ್ಲೆಗಳಲ್ಲೂ ಹೊಸ ಕೇಸ್‍ಗಳು ವರದಿಯಾಗುತ್ತಲೇ ಇವೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 9,915ಕ್ಕೇರಿದ್ದರೆ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಅನುಕ್ರಮವಾಗಿ 4,082 ಮತ್ತು 3,439ರಷ್ಟಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ರೆಡ್ ಜೋನ್ ಎಂದು ಗುರುತಿಸಲಾಗಿದೆ.