ಗೋಕಾಕ: ಇಲ್ಲಿನ ಹರಿಜನ ಕೇರಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡನ ಬರ್ಬರ ಕೊಲೆ ನಡೆದಿದ್ದು ಗೋಕಾಕನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸಿದ್ದು ಕನಮಡ್ಡಿ (26), ಗೋಕಾಕ ನಗರದ ಹರಿಜನ ಕೇರಿಯ ನಿವಾಸಿ ಬುಧವಾರ ರಾತ್ರಿ ಊಟದ ಬಳಿಕ ಮನೆಯ ಮುಂದೆಯೇ ಕುಳಿತಿದ್ದಾಗ 5 ಜನರು ಗುಂಪೊಂದು ಮಾರಕಸಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡಿದ್ದ ಸಿದ್ದು ಕನಮಡ್ಡಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮೃತನಿಗೆ ಕೆಲ ದಿನಗಳಿಂದ ಜೀವ ಬೆದರಿಕೆ ಇತ್ತು ಎನ್ನಲಾಗಿದೆ.
ಗೋಕಾಕ ನಗರ ಪೊಲೀಸರು ಪರಾರಿಯಾದ ಆರೋಪಿಗಳ ಬಂಧನಕ್ಕೆ ಜಾಲ ಬಿಸಿದ್ದು ನಗರದಾದ್ಯಂತ ಸೂಕ್ತ ಭದ್ರತೆ ಕಲ್ಪಿಸಿದ್ದಾರೆ.
Laxmi News 24×7